• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಮತ್ತೆ ಕಿರಿಕ್

|

ಚೆನ್ನೈ, ಸೆ. 16: ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಮತ್ತೆ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರ ಯೋಜನೆ ಕುರಿತು ಸಲ್ಲಿಸಿರುವ ಡಿಪಿಆರ್ ತಿರಸ್ಕಾರ ಮಾಡಬೇಕು ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸದನದಲ್ಲಿ ಭಾಷಣ ಮಾಡಿದ್ದಾರೆ.

ಮೇಕೆದಾಟು ಯೋಜನೆಯನ್ನು ತಡೆ ಹಿಡಿಯಬೇಕು. ಈ ಯೋಜನೆಯಿಂದ ಕಾವೇರಿ ಅಂತಿಮ ತೀರ್ಪಿನ ಉಲ್ಲಂಘನೆಯಾಗುತ್ತದೆ. ಯೋಜನೆ ಬಗ್ಗೆ ಕಾವೇರಿ ನದಿ ಪ್ರಾಧಿಕಾರದ ಮುಂದೆ ಪ್ರಸ್ತಾಪ ಬಂದಾಗಲೇ ನಾವು ಬಲವಾಗಿ ವಿರೋಧಿಸಿದ್ದೇವೆ. ಅಣೆಕಟ್ಟು ನಿರ್ಮಾಣದ ವಿಷಯ ಸದ್ಯ ಸುಪ್ರೀಂಕೋರ್ಟ್ ನಲ್ಲಿದೆ. ಯಾವುದೇ ಕಾರಣಕ್ಕೂ ಅಣೆಕಟ್ಟು ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಬಿಡುವುದಿಲ್ಲ ಎಂದು ಡಿಎಂಕೆ ಶಾಸಕ ದೊರೈ ಮುರುಗನ್ ಅವರು ಕೇಳಿದ ಪ್ರಶ್ನೆಗೆ ಸದನದಲ್ಲಿ ಸಿಎಂ ಪಳನಿಸ್ವಾಮಿ ಅವರು ಉತ್ತರಿಸಿದರು.

ಮೇಕೆದಾಟು ಯೋಜನೆ ವಿವಾದ ಏಕೆ, ಏನು?

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ತಮಿಳುನಾಡಿನ ಪಾಲಿನ ನೀರಿಗೆ ತಡೆಯೊಡ್ಡುವುದಾಗಲಿ, ಬೇರೆಡೆಗೆ ತಿರುಗಿಸುವುದಾಗಲಿ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಈ ಅಂಶವನ್ನು ಮುಂದಿಟ್ಟುಕೊಂಡು ತಮಿಳುನಾಡು ತನ್ನ ಕಾನೂನು ಸಮರ ಮುಂದುವರೆಸಲಿದೆ ಎಂದರು.

ಕೇಂದ್ರ ಸಚಿವರ ಭೇಟಿಗೆ ಕರ್ನಾಟಕದ ನಿಯೋಗ

ಕೇಂದ್ರ ಸಚಿವರ ಭೇಟಿಗೆ ಕರ್ನಾಟಕದ ನಿಯೋಗ

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಲು ಕರ್ನಾಟಕದ ನಿಯೋಗ ಬುಧವಾರದ ಸಮಯ ನಿಗದಿ ಪಡಿಸಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮೇಕೇದಾಟು ಯೋಜನೆಗೆ ಡಿಪಿಆರ್ ಮುಂದಿಟ್ಟು ಪರಿಸರ ಇಲಾಖೆ ಕ್ಲಿಯೆರೆನ್ಸ್ ಗಾಗಿ ಕರ್ನಾಟಕ ನಿಯೋಗ ಮುಂದಾಗಿದೆ. 2018ರಲ್ಲೇ ಸಿಗಬೇಕಿದ್ದ ಅನುಮತಿಗೆ ರಾಜಕೀಯ ಸ್ಥಿತ್ಯಂತರ ಅಡ್ಡಗಾಲು ಹಾಕಿತ್ತು.

ತಮಿಳುನಾಡಿನ ವಿರೋಧವೇಕೆ?

ತಮಿಳುನಾಡಿನ ವಿರೋಧವೇಕೆ?

ನ್ಯಾಯಮಂಡಳಿಯಲ್ಲಿ ಕಾವೇರಿ ನೀರಿನ ಹಂಚಿಕೆ ವಾದ-ವಿವಾದ ನಡೆಯುವಾಗ ಈ ಯೋಜನೆ ಬಗ್ಗೆ ಕರ್ನಾಟಕ ಪ್ರಸ್ತಾಪಿಸಿರಲಿಲ್ಲ. ಅಂತಿಮ ತೀರ್ಪು ನೀಡಿದ ಬಳಿಕ ಹೊಸ ಯೋಜನೆ ಸೇರ್ಪಡೆ ಮಾಡಲು ಬರುವುದಿಲ್ಲ.

ಕರ್ನಾಟಕದ ಪಾಲಿಗೆ ಅಂತಿಮ ಆದೇಶದಲ್ಲಿ 270 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಹೆಚ್ಚುವರಿ ನೀರು ಬಳಸುವ ಕುರಿತು ತೀರ್ಪಿನಲ್ಲಿ ಪ್ರಸ್ತಾಪವಿಲ್ಲ.

ಕಾವೇರಿ ನದಿ ನೀರು ಹಂಚಿಕೆ, ಪ್ರಾಧಿಕಾರ ರಚನೆ ಕುರಿತ ವಿವಾದ ಇನ್ನೂ ಸುಪ್ರೀಂಕೋರ್ಟ್‌ನಲ್ಲಿದೆ. ಇದು ಇತ್ಯರ್ಥವಾಗುವ ಮುನ್ನ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಕೂಡದು.

5 ಸಾವಿರ ಕೋಟಿ ವೆಚ್ಚದ ಯೋಜನೆ

5 ಸಾವಿರ ಕೋಟಿ ವೆಚ್ಚದ ಯೋಜನೆ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 67.16 ಟಿಎಂಸಿ ಅಡಿ. ಯೋಜನೆ ಪೂರ್ಣಗೊಂಡರೆ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಸರ್ಕಾರ ಹೇಳಿದೆ. ಮೇಕೆದಾಟು ಯೋಜನೆಯ ಒಟ್ಟು ವೆಚ್ಚ 5912 ಕೋಟಿ ರೂ. ಗಳು.

ಯೋಜನೆ ವಿಸ್ತೃತ ವರದಿ ಸಲ್ಲಿಕೆ

ಯೋಜನೆ ವಿಸ್ತೃತ ವರದಿ ಸಲ್ಲಿಕೆ

ಮೇಕೆದಾಟುವಿನಲ್ಲಿ ಕುಡಿಯುವ ನೀರಿಗಾಗಿ ಜಲಾಶಯ ನಿರ್ಮಾಣ ಮಾಡುವ ಕುರಿತು ವಿವರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇಂದ್ರ ಜಲ ಆಯೋಗ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಸರ್ಕಾರ ಡಿಪಿಆರ್ ತಯಾರಿಸಿ ಸಲ್ಲಿಕೆ ಮಾಡಿದೆ.

ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ವೇಳೆ ಡಿಪಿಆರ್ ತಯಾರು ಮಾಡಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

English summary
In the Tamil Nadu Assembly on Tuesday, Chief Minister Edappadi K Palaniswami said that the state government will never allow the Mekedatu dam in Karnataka to be constructed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X