ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?

|
Google Oneindia Kannada News

ಚೆನ್ನೈ, ಫೆಬ್ರವರಿ 13:ಚೆನ್ನೈ ಸರ್ಕಾರವು ಚೀನಾ ಮೂಲದ ಟಿಕ್ ಟಾಕ್(Tik Tok) ಮೊಬೈಲ್ ಆ್ಯಪ್ ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಮಣಿತನೇಯ ಜನನಾಯಕ ಕಚ್ಚಿ(MJK) ಪಕ್ಷದ ನಾಯಕ ತಮೀಮುನ್ ಅನ್ಸಾರಿ ಅವರು ಟಿಕ್​ ಟಾಕ್​ ಆ್ಯಪ್​ ಬ್ಯಾನ್​ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದನ್ನು ವಿಧಾನಸಭಾ ಕಲಾಪದಲ್ಲಿ ಸಚಿವ ಎಂ. ಮಣಿಕಂಠನ್​ ಪ್ರಸ್ತಾಪಿಸಿದ್ದರು.

ಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನ ಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನ

ಸಣ್ಣ ವಿಡಿಯೋಗಳನ್ನು ಮಾಡಲು ಅತಿ ಹೆಚ್ಚು ಯುವಕರು ಈ ಆ್ಯಪ್​ ಅನ್ನು ಬಳಸುತ್ತಿರುವುದರಿಂದ ಇದನ್ನು ಬ್ಯಾನ್​ ಮಾಡುವುದಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮಣಿಕಂಠನ್​ ತಿಳಿಸಿದ್ದಾರೆ.

Tamil Nadu will get TIk Tok app banned: IT minister

ಇತ್ತೀಚೆಗಷ್ಟೇ ಟಿಕ್​ ಟಾಕ್​ ಬಳಸುವ ಮಹಿಳೆಯರ ಫೋಟೋವನ್ನು ತೆಗೆದುಕೊಂಡು ಅವರ ಮುಖವನ್ನು ಕೆಟ್ಟದಾಗಿ ಎಡಿಟ್​ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದ ಒಂದು ಗುಂಪನ್ನು ಚೆನ್ನೈ ಪೊಲೀಸರು ಭೇದಿಸಿದ್ದರು.

ತಮೀಮುನ್ ಅನ್ಸಾರಿ ಹೇಳುವಂತೆ ಯುವ ಜನಾಂಗ ಟಿಕ್​ ಟಾಕ್​ಗೆ ಜೋತು ಬಿದ್ದಿದ್ದು, ಇದು ಸಂಸ್ಕೃತಿಯ ಅವನತಿಗೆ ದಾರಿ ಮಾಡಿಕೊಟ್ಟಿದೆ. ಇನ್ನು ಕೆಲವರು ಅಮಾಯಕ ಮಹಿಳೆಯರ ಮುಖವನ್ನು ಕೆಟ್ಟದಾಗಿ ಎಡಿಟ್​ ಮಾಡಿ ವಿಕೃತಿ ಮರೆಯುತ್ತಿದ್ದಾರೆ.

ಅಲ್ಲದೆ, ಲೈಂಗಿಕ ವಿಷಯಗಳನ್ನು ಹರಡುವ ಮೂಲಕ ಮತ್ತೊಬ್ಬರ ಗಮನವನ್ನು ಸೆಳೆಯುವಷ್ಟು ಕೆಳಮಟ್ಟಿಗೆ ಕೆಲವು ಆ್ಯಪ್​ ಬಳಕೆದಾರರು ಇಳಿದಿದ್ದಾರೆ. ಹೀಗಾಗಿ ಆ್ಯಪ್​ ಬ್ಯಾನ್​ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಶೀಘ್ರವೇ ಈ ಆ್ಯಪ್ ನಿಷೇಧಿಸುವುದಾಗಿ ತಿಳಿಸಿದ್ದಾರೆ.

English summary
Tamil Nadu information technology minister M Manikantan on Tuesday said the state would urge the centre to ban Tik Tok application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X