ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ? ಮುನ್ಸೂಚನೆ ಹೀಗಿದೆ

|
Google Oneindia Kannada News

ಚೆನ್ನೈ ಜನವರಿ 2: ಕಳೆದ ಎರಡು ದಿನಗಳಿಂದ ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇಂದು ತುಂತುರು ಮಳೆಯಾಗಲಿದೆ ಎಂದು ಚೆನ್ನೈ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 30ರಂದು ಸಂಜೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಚೆನ್ನೈ ನಲುಗಿ ಹೋಗಿತ್ತು. ನಂತರ ಡಿ.31 ಮತ್ತು ಜ.1 ರಂದು ಮಳೆಯ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆದರೆ, ಸಂಜೆ ವೇಳೆಗೆ ತುಂತುರು ಮಳೆ ಸುರಿದಿದೆ. ನಿನ್ನೆಯೂ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಮಳೆಯ ಪ್ರಮಾಣ ಕಡಿಮೆ

ಮಳೆಯ ಪ್ರಮಾಣ ಕಡಿಮೆ

ಇಂದು ತಮಿಳುನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಚೆನ್ನೈ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಇಂದು ಕೆಲ ಜಿಲ್ಲೆಗಳಲ್ಲಿ ಒಂದೋ ಎರಡೋ ಕಡೆ ಮಳೆಯಾಗುವ ಸಾಧ್ಯತೆ ಇದೆ. ಒಮ್ಮೆಯಿಂದಲ್ಲೂ ತಂಜಾವೂರು, ತಿರುವಾವೂರು ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿತ್ತು. ಇಂದು ಮಳೆಯ ಪ್ರಮಾಣ ಕಣಿಮೆಯಾಗಿದ್ದು ಕೆಲವೆಡೆ ತುಂತುರು ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಮಳೆಯಾಗುವ ಪ್ರದೇಶಗಳು

ಮಳೆಯಾಗುವ ಪ್ರದೇಶಗಳು

ಕಡಲೂರು, ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ತಮಿಳುನಾಡು ಕರಾವಳಿಯ ಬಳಿ ವಾತಾವರಣದ ಪರಿಚಲನೆ ಚಾಲ್ತಿಯಲ್ಲಿದೆ. ವಾತಾವರಣವನ್ನು ಬದಲಿಸುವ ಈ ಮೋಡಗಳು ನೆಲದಿಂದ 4.2 ರಿಂದ 5.9 ಕಿಮೀ ಎತ್ತರದಲ್ಲಿ ಸುತ್ತುತ್ತದೆ. ಒಂದೊಮ್ಮೆ ಇದು ಭಾರೀ ಮಳೆ ತರುವ ಸಾಧ್ಯತೆ ಇದೆ. ಹೀಗಾಗಿ ಕಡಲೂರು, ಕಾರೈಕಲ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಗುಡುಗು ಸಹಿತ ಮಳೆ

ಗುಡುಗು ಸಹಿತ ಮಳೆ

ಇದರಿಂದಾಗಿ ಇಂದು ಕಡಲೂರು, ಕಾರೈಕಲ್ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಚೆನ್ನೈನಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲ ದಿನಗಳಿಂದ ಸುರಿದ ಮಳೆಗೆ ಚೆನ್ನೈನಾದ್ಯಂತ ಮೂರು ಜನ ಮೃತಪಟ್ಟಿರುವ ವರದಿಯಾಗಿದೆ. ಅಧಿಕ ಮಳೆಗೆ ತಗ್ಗು ಪ್ರದೇಶದಲ್ಲಿರುವ ಮನೆಗಳು, ರಸ್ತೆಗಳು ಜಲಾವೃತಗೊಂಡಿದ್ದವು. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆಯಾದರೂ ಮಳೆ ಸುರಿಯುವ ಭೀತಿ ಇದೆ.

ತಾಪಮಾನದಲ್ಲಿ ಇಳಿಕೆ

ತಾಪಮಾನದಲ್ಲಿ ಇಳಿಕೆ

ಆಗಾಗ ಸಣ್ಣ ಮಳೆಯಾಗಲಿದ್ದು ತಾಪಮಾನ ಇಳಿಕೆಯಾಗಲಿದೆ. ಚೆನ್ನೈನಲ್ಲಿ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ವರೆಗೆ ಇದೆ. ನಾಳೆಯಿಂದ ತಮಿಳುನಾಡಿನಲ್ಲಿ ಮಳೆಯ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ನಾಳೆಯಿಂದ ಒಣಹವೆ

ನಾಳೆಯಿಂದ ಒಣಹವೆ

ನಾಳೆಯಿಂದ ತಮಿಳುನಾಡಿನಲ್ಲಿ ಒಣಹವೆ ಇರಲಿದೆ. ದಕ್ಷಿಣ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಸಾಧಾರಣದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಕೆಲ ವರ್ಷದಿಂದ ಮಳೆಯ ಪ್ರಮಾಣ ಹೆಚ್ಚಾದಷ್ಟು ಒಣಹವೆ ಚೆನ್ನೈನಾದ್ಯಂತ ಹೆಚ್ಚಾಗಿತ್ತು. ಈ ಬಾರಿಯೂ ಚೆನೈನಾದ್ಯಂತ ಭಾರೀ ಮಳೆಯಾಗಿದ್ದರಿಂದ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ.

English summary
The Chennai Meteorological Department has forecast showers in Tamil Nadu today. It has been raining widely in Tamil Nadu for the last two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X