ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ ಎರಡು ಜೀವ ತೆಗೆದ ಟಿಕ್‌ಟೋಕ್ ವಿಡಿಯೋ ಹುಚ್ಚು!

|
Google Oneindia Kannada News

ಚೆನ್ನೈ, ಫೆಬ್ರವರಿ 23: ಸೆಲ್ಫಿ ಗೀಳಿನ ಯಡವಟ್ಟು ಅನೇಕರ ಜೀವ ತೆಗೆದ ಸಾಕಷ್ಟು ನಿದರ್ಶನಗಳಿವೆ. ಕೆಲವು ತಿಂಗಲ ಹಿಂದೆ 'ಕೀಕಿ' ಹಾಡಿಗೆ ಕಾರಿನಿಂದ ಇಳಿದು ನರ್ತಿಸುವ ಚಟವೂ ಅನೇಕ ಅವಘಡಗಳಿಗೆ ಕಾರಣವಾಗಿತ್ತು. ಮೊಬೈಲ್ ವಿಡಿಯೋ ಗೇಮ್‌ಗಳು ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಈಗ ಅವುಗಳ ಸಾಲಿಗೆ ಟಿಕ್‌ಟೋಕ್ ವಿಡಿಯೋ ಹುಚ್ಚು ಸಹ ಸೇರಿಕೊಂಡಿದೆ.

ತಮಿಳುನಾಡಿನಲ್ಲಿ ಟಿಕ್‌ಟೋಕ್ ವಿಡಿಯೋ ಕ್ರೇಜ್ ಒಬ್ಬ ವಿದ್ಯಾರ್ಥಿಯ ಸಾವಿಗೆ ಕಾರಣವಾಗಿದೆ. ಚಿತ್ರ ವಿಚಿತ್ರವಾಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ಗಳಿಸುವುದು ಸಾಮಾನ್ಯವಾಗಿದೆ. ಈ ಚಟವೇ ಒಬ್ಬನನ್ನು ಬಲಿತೆಗೆದುಕೊಂಡಿದೆ.

ಕೀಕಿ ಚಾಲೆಂಜ್ ವೈರಲ್ ವಿಡಿಯೋ ವಿರುದ್ಧ ಪೊಲೀಸ್ ವಾರ್ನಿಂಗ್!ಕೀಕಿ ಚಾಲೆಂಜ್ ವೈರಲ್ ವಿಡಿಯೋ ವಿರುದ್ಧ ಪೊಲೀಸ್ ವಾರ್ನಿಂಗ್!

ತಮಿಳುನಾಡಿನ ತಂಜಾವೂರಿನಲ್ಲಿ ಮೋಟಾರ್‌ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ವಿಡಿಯೋ ಮಾಡುವ ಸಾಹಸದಲ್ಲಿ ಅಪಘಾತಕ್ಕೀಡಾಗಿದ್ದಾರೆ.

ಸೂರ್ಯ, ರೀಗನ್ ಮತ್ತು ವಿಗ್ನೇಶ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಒಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ಗೆ ಗುದ್ದಿದ ಬೈಕ್

ಬಸ್‌ಗೆ ಗುದ್ದಿದ ಬೈಕ್

ಈ ಮೂವರೂ ಒಂದೇ ಬೈಕ್‌ನಲ್ಲಿ ಜಾಲಿ ರೈಡ್ ಹೋಗುತ್ತಿದ್ದರು. ಹಿಂದೆ ಕುಳಿತಿದ್ದ ಇಬ್ಬರು ಗೆಳೆಯರು ವಿಡಿಯೋ ಸೆರೆಹಿಡಿಯುತ್ತಿದ್ದರು. ಅತಿ ವೇಗದಿಂದ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವಿಡಿಯೋ ದೃಶ್ಯವನ್ನು ಟಿಕ್‌ಟೋಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?

ಟಿಕ್‌ಟೋಕ್‌ನಿಂದ ಹತ್ಯೆ

ಟಿಕ್‌ಟೋಕ್‌ನಿಂದ ಹತ್ಯೆ

ಮತ್ತೊಂದು ಘಟನೆಯಲ್ಲಿ ಟಿಕ್‌ಟೋಕ್ ವಿಡಿಯೋ ಒಂದು ಹತ್ಯೆಗೂ ಕಾರಣವಾಗಿದೆ. ಈ ಘಟನೆ ಕುಡ ತಮಿಳುನಾಡಿನಲ್ಲಿ ನಡೆದಿದೆ.

ತಿರುಥಣಿ ಸಮೀಪದ ತಲಂಬೇಡು ಎಂಬ ಗ್ರಾಮದಲ್ಲಿ ವಿಜಯ್ ಎಂಬಾತನನ್ನು ಟಿಕ್‌ಟೋಕ್ ವಿಡಿಯೋದ ಕಾರಣದಿಂದ ಆತನ ಗೆಳೆಯ ವೆಂಕಟರಾಮನ್ ಕೊಲೆ ಮಾಡಿದ್ದಾನೆ.

ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು? ರಸ್ತೆಯಲ್ಲಿ ಕಿಕಿ ಡ್ಯಾನ್ಸ್‌ ಮಾಡೋರಿಗೆ ಖಾಕಿ ಹೇಳಿದ್ದೇನು?

ಘಟನೆಯ ವಿವರ

ಘಟನೆಯ ವಿವರ

ವೆಂಕಟರಾಮನ್ ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಕೀಳಾಗಿ ಮಾತನಾಡುವ ವಿಡಿಯೋವನ್ನು ವಿಜಯ್ ಟಿಕ್‌ಟೋಕ್ ಮೂಲಕ ಅಪ್‌ಲೋಡ್ ಮಾಡಿದ್ದ. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಹಳ್ಳಿಯಲ್ಲಿ ಪ್ರತಿಭಟನೆಗೂ ಕಾರಣವಾಗಿತ್ತು. ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ವಿಜಯ್ ಮತ್ತು ವೆಂಕಟರಾಮ್‌ ಇಬ್ಬರೂ ತಲೆಮರೆಸಿಕೊಂಡಿದ್ದರು. ಪೊಲೀಸರು ವೆಂಕಟರಾಮನ್ ತಂದೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ವಿಡಿಯೋ ಅಪ್‌ಲೋಡ್ ಮಾಡಿದ್ದಕ್ಕೆ ವಿಜಯ್ ವಿರುದ್ಧ ಕೋಪಗೊಂಡಿದ್ದ ವೆಂಕಟರಾಮ್, ಅಮಲಿನಲ್ಲಿದ್ದ ವಿಜಯ್‌ಗೆ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಆಪ್ ನಿಷೇಧಕ್ಕೆ ಮನವಿ

ತಮಿಳುನಾಡಿನಲ್ಲಿ ಟಿಕ್‌ಟೋಕ್ ಹಾವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಟಿಕ್‌ಟೋಕ್ ಆಪ್‌ ಬಳಿಸಿ ವಿಡಿಯೋ ಮಾಡುವುದು ಬ್ಲೂವೇಲ್ ಚಾಲೆಂಜ್ ಆಟದಷ್ಟೇ ಅಪಾಯಕಾರಿಯಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಎಂ ಮಣಿಕಂದನ್ ಹೇಳಿದ್ದರು. ಈ ಆಪ್‌ಅನ್ನು ನಿಷೇಧಿಸುವಂತೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದರು.

English summary
In a separate incidents two youth killed due to Tik Tok video craze. A student was killed in a road accident while his bike hits bus when his friends making a Tik Tok video. In an another incident youth killed his friend over uploading a video in Tik Tok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X