ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಗುಣಪಡಿಸುವ ಔಷಧಿ ಎಂದು ವಿಷ ನೀಡಿ ಮೂವರ ಸಾವಿಗೆ ಕಾರಣರಾದ ದುಷ್ಕರ್ಮಿಗಳ ಬಂಧನ

|
Google Oneindia Kannada News

ಚೆನ್ನೈ, ಜೂ.28: ಕೋವಿಡ್ -19 ಗುಣಪಡಿಸುವ ಮಾತ್ರೆಗಳು ಎಂದು ಹೇಳಿ ವಿಷವನ್ನು ನೀಡಿದ ಪರಿಣಾಮ ತಮಿಳುನಾಡಿನ ಈರೋಡ್‌ನ ಕುಟುಂಬವೊಂದರ ಮೂವರು ಸದಸ್ಯರು ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಕೀಜ್ವಾನಿ ಗ್ರಾಮದ ಆರ್ ಕಲ್ಯಾಣಸುಂದರಂ (43) ಕೆಲವು ತಿಂಗಳ ಹಿಂದೆ ಕರುಣ್‌ಗೌಡನವಲಸು ಗ್ರಾಮದ ಕರುಪ್ಪನಕೌಂದರ್ (72) ಬಳಿಯಿಂದ 5 ಲಕ್ಷ ರೂ. ಸಾಲವನ್ನು ಪಡೆದಿದ್ದನು. ಆದರೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.

ಡಿಆರ್‌ಡಿಒ ನ ಆಂಟಿ ಕೋವಿಡ್‌ ಔಷಧ ಮಾರುಕಟ್ಟೆಗೆ: ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಘೋಷಣೆಡಿಆರ್‌ಡಿಒ ನ ಆಂಟಿ ಕೋವಿಡ್‌ ಔಷಧ ಮಾರುಕಟ್ಟೆಗೆ: ಡಾ. ರೆಡ್ಡಿ'ಸ್ ಲ್ಯಾಬೊರೇಟರೀಸ್ ಘೋಷಣೆ

ಈ ಸಾಲವನ್ನು ಹಿಂದಕ್ಕೆ ನೀಡುವಂತೆ ಕರುಪ್ಪನಕೌಂದರ್ ಒತ್ತಡವನ್ನು ಹಾಕುತ್ತಿದ್ದರು. ಈ ಕಾರಣದಿಂದಾಗಿ ಆರೋಪಿ ಕಲ್ಯಾಣಸುಂದರಂ ಕರುಪ್ಪನಕೌಂದರ್ ಹಾಗೂ ಆತನ ಕುಟುಂಬಸ್ಥರನ್ನು ಕೊಲೆ ಮಾಡುವ ನಿರ್ಧಾರ ಕೈಗೊಂಡಿದ್ದಾನೆ ಎಂದು ವರದಿಯಾಗಿದೆ.

Tamil Nadu: Three dead after being given poison in guise of Covid-19 cure pills; 2 held

ಕಲ್ಯಾಣಸುಂದರಂ ಈ ಕುಟುಂಬದ ನಾಲ್ಕು ಜನರಿಗೆ ವಿಷದ ಮಾತ್ರೆಗಳನ್ನು ನೀಡಲು ಆರೋಗ್ಯ ಇಲಾಖೆಯ ಕಾರ್ಯಕರ್ತರಾದ ಶಬರಿಯ (25) ಸಹಾಯವನ್ನು ಕೋರಿದ್ದನು.

ಬಳಿಕ ಶಬರಿ ತಾಪಮಾನ ಪರಿಶೀಲಿಸುವ ಸಾಧನ, ಪಲ್ಸ್ ಆಕ್ಸಿಮೀಟರ್ ಸೇರಿದಂತೆ ವೈದ್ಯಕೀಯ ಸಲಕರಣೆಗಳೊಂದಿಗದೆ ಜೂನ್ 26 ರಂದು ಕರುಪ್ಪನಕೌಂದರ್ ಮನೆಗೆ ಭೇಟಿ ನೀಡಿದ್ದಾರೆ. ಕರುಪ್ಪನಕೌಂದರ್ ಮತ್ತು ಕುಟುಂಬಕ್ಕೆ ಜ್ವರ ಅಥವಾ ಕೆಮ್ಮು ಇದೆಯೇ ಎಂದು ವಿಚಾರಿಸಿದ ಶಬರಿ, ಕೋವಿಡ್‌ ವಿರುದ್ದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿ ಎಂದು ಹೇಳಿ ಕೆಲವು ಮಾತ್ರೆಗಳನ್ನು ನೀಡಿದ್ದಾರೆ.

ರೇಖಾ ಕದಿರೇಶ್ ಹತ್ಯೆ ಹಿಂದೆ ಮಾಸ್ಟರ್ ಮೈಂಡ್ ಮಾಲಾ ಇರುವ ಶಂಕೆ?ರೇಖಾ ಕದಿರೇಶ್ ಹತ್ಯೆ ಹಿಂದೆ ಮಾಸ್ಟರ್ ಮೈಂಡ್ ಮಾಲಾ ಇರುವ ಶಂಕೆ?

ಕರುಪ್ಪನಕೌಂದರ್, ಪತ್ನಿ ಮಲ್ಲಿಕಾ, ಮಗಳು ದೀಪಾ ಮತ್ತು ಗೃಹ ಸಹಾಯ ಕುಪ್ಪಲ್ ಮಾತ್ರೆಗಳನ್ನು ಸೇವಿಸಿದ ಬಳಿಕ ಕುಸಿದು ಬಿದ್ದಿದ್ದು, ನೆರೆಹೊರೆಯವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಾಲ್ವರನ್ನು ಕಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಕರುಪ್ಪನಕೌಂದರ್ ಪತ್ನಿ ಮಲ್ಲಿಕಾ ಮೃತಪಟ್ಟಿದ್ದು, ದೀಪಾ ಮತ್ತು ಕುಪ್ಪಲ್ ಮರುದಿನ ನಿಧನರಾದರು. ಕರುಪ್ಪನಕೌಂದರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಬಳಿಕ ಶಬರಿ ಹಾಗೂ ಕಲ್ಯಾಣಸುಂದರಂ ವಿಚಾರಣೆ ವೇಳೆ ನೀಡಿದ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಪೊಲೀಸರು ಸಂಶಯಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ಈ ಕೊಲೆಯ ಬಗ್ಗೆ ಮಾಹಿತಿ ದೊರೆತಿದೆ.

ಈ ಬಗ್ಗೆ ಈರೋಡ್ ಡಿಎಸ್ಪಿ ಸೆಲ್ವರಾಜ್ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದು, "ಕಲ್ಯಾಣಸುಂದರಂ ಆರೋಗ್ಯ ಕಾರ್ಯಕರ್ತೆ ಎಂಬ ಸುಳ್ಳು ನೆಪದಲ್ಲಿ ಶಬರಿಯನ್ನು ಕರುಪ್ಪನಕೌಂದರ್ ನಿವಾಸಕ್ಕೆ ಕಳುಹಿಸಿದ್ದಾನೆ. ಬಳಿಕ ಶಬರಿ ಕೈಯಿಂದ ಕೋವಿಡ್ -19 ಗೆ ಚಿಕಿತ್ಸೆ ನೀಡುವ ಔಷಧಿ ಎಂದು ಹೇಳಿ ವಿಷ ಮಾತ್ರೆಗಳನ್ನು ನೀಡಿ ಮೂರು ಜನರನ್ನು ಕೊಲೆ ಮಾಡಿದ್ದಾರೆ," ಎಂದು ವಿವರಿಸಿದ್ದಾರೆ.

ಇನ್ನು ಆರೋಪಿಗಳಿಬ್ಬರನ್ನು ಪೆರುಂಡುರೈ ಉಪ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Three members of a family died in Tamil Nadu’s Erode after they were given poison in the guise of Covid-19 cure pills. Police have arrested two people in connection with the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X