ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

|
Google Oneindia Kannada News

ಕೋಯಿಮತ್ತೂರು, ಜೂನ್ 1: ತಮಿಳುನಾಡಿನ ಕೋಯಿಮತ್ತೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬೈಕ್‌ ಕದ್ದ ಒಬ್ಬ ಕಳ್ಳ ಅದನ್ನು ಎರಡು ವಾರಗಳ ನಂತರ ಮಾಲೀಕರಿಗೆ ಪಾರ್ಸೆಲ್ ಮಾಡಿದ್ದಾನೆ. ಈ ಕಥೆ ಹಾಸ್ಯ ಎನಿಸಿದರೂ ನಿಜ.

Recommended Video

ಎಲ್ಲಾ ಕ್ರಿಕೆಟ್ ಪಂದ್ಯಗಳು ಮೊದಲೇ ಫಿಕ್ಸ್ ಆಗಿರುತ್ತವೆಯೇ ? | Oneindia Kannada

ಸುರೇಶ್ ಕುಮಾರ್ ಎಂಬ ಕೋಯಿಮತ್ತೂರಿನ ವ್ಯಕ್ತಿ ತಮ್ಮದೇ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇವರ ಹೀರೋ ಹೊಂಡ ಸ್ಪೆಂಡರ್ ಬೈಕ್‌ಅನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದ. ನಂತರ ಆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆದರೆ, ಕಳ್ಳತನ ಮಾಡಿದ ಎರಡು ವಾರಗಳಲ್ಲಿ ಬೈಕ್‌ಅನ್ನು ಹಿಂತಿರುಗಿಸಿ ನೀಡಿದ್ದಾನೆ.

ಚೆಕ್ ಪೋಸ್ಟ್ ಕಣ್ತಪ್ಪಿಸಿ ಶಿಕಾರಿಪುರಕ್ಕೆ ಬಂದ ಬೈಕ್ ಗಳ ವಶಚೆಕ್ ಪೋಸ್ಟ್ ಕಣ್ತಪ್ಪಿಸಿ ಶಿಕಾರಿಪುರಕ್ಕೆ ಬಂದ ಬೈಕ್ ಗಳ ವಶ

ಪ್ರಕರಣದ ಹಿಂದೆ ಹೋದ ಪೊಲೀಸರಿಗೆ ಸಿಸಿ ಟಿವಿ ಮೂಲಕ ಬೈಕ್‌ ಕದ್ದಿರುವುದು ತಿಳಿದುಬಂದಿದೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಕುಟುಂಬವನ್ನು ಸೇರಲು ಊರಿಗೆ ಹೋಗಲು, ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಪಾರ್ಸೆಲ್ ಆಫೀಸ್‌ನಿಂದ ಕರೆ ಬಂದಾಗ ಮಾಲೀಕ ಸುರೇಶ್‌ರಿಗೆ ಆಶ್ಚರ್ಯವಾಗಿದೆ. ಅಲ್ಲಿಗೆ ಹೋಗಿ ತಮ್ಮ ಬೈಕ್‌ ಅನ್ನು ಪಡೆದುಕೊಂಡಿದ್ದಾರೆ.

Tamil Nadu theft Steals Bike and Parcels it Back After 2 Weeks

ಆದರೆ, ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ ಕಳ್ಳ ತಾನು ಕದ್ದ ಬೈಕ್ ಅನ್ನು ಪೇ-ಅಟ್-ಡೆಲಿವರಿ ಮೂಲಕ ಪಾರ್ಸೆಲ್ ಕಳುಹಿಸಿದ್ದಾನೆ, ಅಂದರೆ, ಕುಮಾರ್ ತನ್ನ ದ್ವಿಚಕ್ರ ವಾಹನವನ್ನು ಮನೆಗೆ ತೆಗೆದುಕೊಂಡು ಹೋಗಲು 1000 ರೂಪಾಯಿ ನೀಡಬೇಕಾಗಿತ್ತು.

English summary
Tea shop worker in Tamil Nadu theft steals bike and parcels it back after 2 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X