ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಲಂ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಇಬ್ಬರು ಶಿಕ್ಷಕರ ಬಂಧನ

|
Google Oneindia Kannada News

ಸೇಲಂ, ಜುಲೈ 18: ತಮಿಳುನಾಡಿನ ಕಲ್ಲಕುರುಚಿಯ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲಿ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಐವರು ಶಿಕ್ಷಕರು ಹಾಗೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನ ಕಲ್ಲಕುರಿಚಿಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಚಿತ್ರಹಿಂಸೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಲಾಗುತ್ತಿದೆ. ಶವಪರೀಕ್ಷೆಯಲ್ಲಿ ವಿದ್ಯಾರ್ಥಿಯ ಮೈಮೇಲೆ ಗಾಯಗಳು ಮತ್ತು ರಕ್ತಸ್ರಾವ ಕಂಡುಬಂದಿದೆ.

ಭಾನುವಾರ ವಿದ್ಯಾರ್ಥಿನಿ ಸಾವು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಶಾಲಾ ವಾಹನಗಳಿಗೆ ಬೆಂಕಿ ಹಚ್ಚಿ ಜನರು ಆಕ್ರೋಶ ಹೊರಹಾಕಿದ್ದರು.

ಜುಲೈ 13 ರಂದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ಕಟ್ಟಡದಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಳು.

ವಿದ್ಯಾರ್ಥಿನಿಗೆ ಶಿಕ್ಷಕಿಯೊಬ್ಬರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಹಿಂಸಾಚಾರ ಭುಗಿಲೆದ್ದಿದ್ದು ಸೋಮವಾರ ಶಾಲೆಯ ರಸಾಯನಶಾಸ್ತ್ರ ಶಿಕ್ಷಕಿ ಹರಿಪ್ರಿಯಾ ಮತ್ತು ಗಣಿತ ಶಿಕ್ಷಕಿ ಕೃತಿಕಾ ಬಂಧಿಸಲಾಗಿದೆ. ಇದಕ್ಕೂ ಮುನ್ನ ಶಾಲೆಯ ಪ್ರಾಂಶುಪಾಲರು, ಕಾರ್ಯದರ್ಶಿ ಸೇರಿದಂತೆ ಮೂವರು ಆಡಳಿತಾಧಿಕಾರಿಗಳನ್ನು ಬಂಧಿಸಲಾಗಿದೆ.

ಶಾಲಾ ವಾಹನಗಳಿಗೆ ಬೆಂಕಿ

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಪ್ರತಿಭಟನಾಕಾರರು ಶಾಲಾ ಬಸ್‌ಗಳು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಹಲವು ಪೊಲೀಸ್ ಅಧಿಕಾರಿಗಳು ಭಾನುವಾರ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, 500 ಕ್ಕೂ ಹೆಚ್ಚು ಜನರು ಶಾಲೆಯಲ್ಲಿ ಜಮಾಯಿಸಿ 12 ನೇ ತರಗತಿಯ ವಿದ್ಯಾರ್ಥಿಯ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನಾಕಾರರು ಕಲ್ಲು ತೂರಾಟ ಮತ್ತು ಶಾಲಾ ಬಸ್‌ಗಳಿಗೆ ಬೆಂಕಿ ಹಚ್ಚಿದಾಗ ಅದು ಹಿಂಸಾಚಾರಕ್ಕೆ ತಿರುಗಿತು. ಶಾಲೆಯ ಆಸ್ತಿಯನ್ನೂ ಧ್ವಂಸಗೊಳಿಸಿದರು.

ದೇಹದ ಮೇಲೆ ಗಾಯ, ರಕ್ತದ ಕಲೆ

ದೇಹದ ಮೇಲೆ ಗಾಯ, ರಕ್ತದ ಕಲೆ

ಕಡಲೂರು ಜಿಲ್ಲೆಯ ಪೆರಿಯನೆಸಲೂರು ಗ್ರಾಮದ ನಿವಾಸಿ ರಾಮಲಿಂಗಂ ಪುತ್ರಿ ಕಲ್ಲಕುರಿಚಿಯ ಖಾಸಗಿ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. 13ರಂದು ಬೆಳಗ್ಗೆ ಪೋಷಕರಿಗೆ ಮಗಳು ಮೃತಪಟ್ಟಿರುವ ಮಾಹಿತಿ ಲಭಿಸಿದೆ. ವಿದ್ಯಾರ್ಥಿನಿಯ ತಾಯಿಗೆ ಶಾಲಾ ಅಧಿಕಾರಿಗಳು ತಮ್ಮ ಮಗಳು ಶಾಲೆಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಮಗಳ ಸಾವಿನ ಬಗ್ಗೆ ತಾಯಿ ಶಂಕೆ ವ್ಯಕ್ತಪಡಿಸಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸಾವು ಅನುಮಾನಾಸ್ಪದವಾಗಿದ್ದರಿಂದ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ದೈಹಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ವಿದ್ಯಾರ್ಥಿನಿ ದೇಹದ ಮೇಲೆ ಗಾಯಗಳಾಗಿದ್ದು, ಆಕೆಯ ಬಟ್ಟೆಯ ಮೇಲೆ ರಕ್ತದ ಕಲೆಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಹಲವಾರು ಸ್ಥಳಗಳಲ್ಲಿ ಗಾಯಗೊಂಡ ಆಘಾತದಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಮದು ಆರೋಪಿಸಲಾಗಿದೆ. ಅವರ ಹೃದಯ ಮತ್ತು ಇತರ ಅಂಗಗಳನ್ನು ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಮಗಳ ಸಾವಿಗೆ ಶಿಕ್ಷಕರೇ ಕಾರಣ ಎಂದ ಪೋಷಕರು

ಮಗಳ ಸಾವಿಗೆ ಶಿಕ್ಷಕರೇ ಕಾರಣ ಎಂದ ಪೋಷಕರು

ಮೃತ ವಿದ್ಯಾರ್ಥಿಯು ಕಲ್ಲಕುರಿಚಿ ಜಿಲ್ಲೆಯ ಚಿನ್ನ ಸೇಲಂ ಸಮೀಪದ ಕಣಿಯಮೂರ್ ಪ್ರದೇಶದ ಖಾಸಗಿ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಜುಲೈ 1ರಂದು ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ಗೆ ಸೇರಿಸಲಾಗಿತ್ತು ಎಂದು ತಾಯಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಜುಲೈ 13 ರಂದು ಮುಂಜಾನೆ 5 ಗಂಟೆ ಸುಮಾರಿಗೆ ಶಾಲಾ ಹಾಸ್ಟೆಲ್ ಆವರಣದಲ್ಲಿ ಬಾಲಕಿ ಜರ್ಜರಿತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಶಾಲಾ ಸಿಬ್ಬಂದಿ ನೋಡಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾರ್ಥಿನಿಯನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿ ಶಾಲೆಯ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಎನ್ನಲಾಗಿದೆ.

ತರುವಾಯ, ಚಿನ್ನಾ ಸೇಲಂ ಪೊಲೀಸ್ ಇಲಾಖೆಯು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 174 (ಅನುಮಾನಾಸ್ಪದ ಸಾವು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತು ಮತ್ತು ವಿದ್ಯಾರ್ಥಿಯ ಸಾವಿನ ತನಿಖೆಯನ್ನು ಪ್ರಾರಂಭಿಸಿದೆ. ಅಲ್ಲದೆ, ವಿದ್ಯಾರ್ಥಿಯ ಮೃತದೇಹವನ್ನು ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶವಪರೀಕ್ಷೆ ಕೊಠಡಿಗೆ ಕಳುಹಿಸಲಾಗಿದೆ. ಘಟನೆಯ ನಂತರ ಪೋಷಕರು ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಇತರ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ದರು.

ತನ್ನ ಮಗಳ ಸಾವಿನಲ್ಲಿ ನಿಗೂಢತೆ ಇದೆ ಎಂದು ಶಾಲಾ ವಿದ್ಯಾರ್ಥಿನಿಯ ತಾಯಿ ಎಂ. ಎಸ್. ಸೆಲ್ವಿ ಆರೋಪಿಸಿದ್ದಾರೆ. ಆಕೆ ಮುಂದಿನ ಭಾನುವಾರ (ಜು.17) ಮನೆಗೆ ಬರುವುದಾಗಿ ತಾಯಿಗೆ ತಿಳಿಸಿದ್ದು, ಸದ್ಯ ಮಗಳ ಹಠಾತ್ ಸಾವು ಪೋಷಕರಿಗೆ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.

'ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ'

'ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ'

ಇದೇ ವೇಳೆ ವಿದ್ಯಾರ್ಥಿನಿಯ ತಾಯಿ ಮಗಳ ಸಾವಿನಲ್ಲಿ ಅನುಮಾನವಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆರೋಪಿಸುತ್ತಾರೆ. ವಿದ್ಯಾರ್ಥಿನಿಯ ತಾಯಿ ಸೆಲ್ವಿ ಮಾತನಾಡಿ, ‘‘ನನ್ನ ಮಗಳು ಆರನೇ ತರಗತಿಯಿಂದ ಆ ಶಾಲೆಯಲ್ಲಿ ಓದುತ್ತಿದ್ದಳು. ಹನ್ನೊಂದನೇ ತರಗತಿ ಓದಲು ಪರ್ಯಾಯ ಪ್ರಮಾಣ ಪತ್ರ ಕೇಳಿದರೂ ಕೊಡಲು ನಿರಾಕರಿಸಿದರು. ಬಳಿಕ ಮಗಳು ಅಲ್ಲಿಯೇ ಓದು ಮುಂದುವರಿಸಿದಳು. ಅವಳು 12 ನೇ ತರಗತಿಗೆ ಹೋಗಿದ್ದಳು, ನಾನು ಅವಳನ್ನು ಕಳೆದ ಜುಲೈ 1 ರಂದು ವಸತಿ ಶಾಲೆಗೆ ಸೇರಿಸಿದೆ, ಆದರೆ 13 ರಂದು ನನಗೆ ಫೋನ್ ಕರೆ ಬಂದಿತ್ತು, ನಿಮ್ಮ ಮಗಳು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಕೇಳಿ ನನಗೆ ಅಘಾತವಾಗಿದೆ.

ಅವಳು ಜೀವಂತವಾಗಿದ್ದಾಳೆ ಎಂದು ಅವರು ಹೇಳಿದರು. ಆದರೆ ಇನ್ನರ್ಧ ಗಂಟೆಯಲ್ಲಿ ಮತ್ತೆ ನಮಗೆ ಕರೆ ಮಾಡಿ ನಿಮ್ಮ ಮಗಳು ತೀರಿಕೊಂಡಿದ್ದಾಳೆ ಎಂದು ತಿಳಿಸಿದರು. ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಮಗಳ ಸಾವಿನಲ್ಲಿ ಶಿಕ್ಷಕರೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Recommended Video

ಚಹಾಲ್ ನಿನ್ನೆ ಪಂದ್ಯದಲ್ಲಿ ರೂಟ್ ಅನುಕರಣೆ ಮಾಡಿದ್ದು ಹೀಗೆ | OneIndia Kannada

English summary
Two teachers have been arrested in the Kallakuruchi suicide case in Tamil Nadu. So far, five teachers and officials have been taken into custody in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X