ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿ ಅನಾರೋಗ್ಯ: ಆಘಾತ ತಾಳಲಾರದೆ 21 ಡಿಎಂಕೆ ಕಾರ್ಯಕರ್ತರ ಸಾವು

|
Google Oneindia Kannada News

Recommended Video

ಕರುಣಾನಿಧಿ ಅನಾರೋಗ್ಯದ ಆಘಾತ ತಾಳಲಾರದೆ 21 ಡಿಎಂಕೆ ಕಾರ್ಯಕರ್ತರ ಸಾವು | Oneindia Kannada

ಚೆನ್ನೈ, ಆಗಸ್ಟ್ 02: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಆಘಾತಗೊಂಡ ಅವರ ಅಭಿಮಾನಿಗಳು ಮತ್ತು ಡಿಎಂಕೆ ಕಾರ್ಯಕರ್ತರಲ್ಲಿ 21 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಜುಲೈ 28 ರಂದು ಅವರು ಆಸ್ಪತ್ರೆಗೆ ಸೇರಿದ ಲಾಗಾಯ್ತೂ ತಮಿಳುನಾಡಿನಾದ್ಯಂತ ಅಲ್ಲಲ್ಲಿ ಅವರ ಅಭಿಮಾನಿಗಳ ಸಾವಿನ ಸುದ್ದಿ ಕೇಳಿಬರುತ್ತಿದ್ದು, ನೆಚ್ಚಿನ ನಾಯಕನ ಅನಾರೋಗ್ಯದ ಆಘಾತದಿಂದ ಇದುವರೆಗೂ ಸಾವಿಗೀಡಾದವರ ಸಂಖ್ಯೆ 21 ಕ್ಕೇರಿದೆ.

ಯಮರಾಜ ಪೊ ಪೊ... ಕಾವೇರಿ ಆಸ್ಪತ್ರೆ ಸುತ್ತ ಅದೇ ಧ್ವನಿ! ಯಮರಾಜ ಪೊ ಪೊ... ಕಾವೇರಿ ಆಸ್ಪತ್ರೆ ಸುತ್ತ ಅದೇ ಧ್ವನಿ!

ಕಳೆದ ನಾಲ್ಕೈದು ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ಈಗಾಗಲೇ ತಿಳಿಸಿದ್ದಾರೆ.

Tamil Nadu: Shocked by M Karunanidhis illness, 21 DMK workers die across

ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಅವರನ್ನು ಜು.28 ರ ಬೆಳಿಗ್ಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೀವನ್ಮರಣ ಹೋರಾಟ ನಡೆಸುತ್ತಿರುವ ಕರುಣಾನಿಧಿ ಆಸೆ ಕೊನೆಗೂ ಕೈಗೂಡಿತು! ಜೀವನ್ಮರಣ ಹೋರಾಟ ನಡೆಸುತ್ತಿರುವ ಕರುಣಾನಿಧಿ ಆಸೆ ಕೊನೆಗೂ ಕೈಗೂಡಿತು!

ಕರುಣಾನಿಧಿ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಟ ರಜನೀಕಾಂತ್ ಸೇರಿದಂತೆ ಗಣ್ಯರು ಭೇಟಿ ಮಾಡಿದ್ದು, ಅವರ ಅಭಿಮಾನಿಗಳ ದಂಡು ಆಸ್ಪತ್ರೆ ಎದುರು ಕಳೆದ ನಾಲ್ಕೈದು ದಿನಗಳಿಂದ ಊಟ-ನಿದ್ದೆ ಬಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ.

English summary
Unable to bear the "shock" of the illness and hospitalisation of DMK patriarch M Karunanidhi, at least 21 dedicated workers of the party died across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X