ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಶೇ. 23 ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆ

|
Google Oneindia Kannada News

ಚೆನ್ನೈ, ಜೂ. 09: ಈ ವರ್ಷದ ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ ನಡೆಸಿದ ಎರಡನೇ ಸಮೀಕ್ಷೆಯ ಪ್ರಕಾರ ಕನಿಷ್ಠ ಶೇ. 23 ರಷ್ಟು ಜನರ ದೇಹದಲ್ಲಿ SARS-CoV-2 ಪ್ರತಿಕಾಯಗಳನ್ನು ಅಭಿವೃದ್ಧಿಯಾಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಸಿದ ಮೊದಲ ಸಮೀಕ್ಷೆಯಲ್ಲಿ ಶೇ.31 ರಷ್ಟು ಕಡಿಮೆಯಾಗಿದೆ.

ಚೆನ್ನೈ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಔಷಧ ನಿಯಂತ್ರಣ ನಿರ್ದೇಶನಾಲಯವು ಈ ಅಧ್ಯಯನವನ್ನು ನಡೆಸಿದೆ. ಇನ್ನು ಈಗಾಗಲೇ ಎರಡು ಸಮೀಕ್ಷೆಗಳನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮಾಡಿದೆ.

ವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿವಿಶ್ವದಲ್ಲಿ ವಾಸಯೋಗ್ಯವಾದ 10 ನಗರಗಳು ಯಾವುದು?- ಇಲ್ಲಿದೆ ಸಮೀಕ್ಷೆ ವರದಿ

ಈ ಬಗ್ಗೆ ಮಾಹಿತಿ ನೀಡಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಉಪನಿರ್ದೇಶಕ ಡಾ.ಪ್ರಭದೀಪ್‌ ಕೌರ್‌, "ಪ್ರತಿಕಾಯಗಳು ಕೆಲವೇ ತಿಂಗಳುಗಳವರೆಗೆ ದೇಹದಲ್ಲಿ ಇರುತ್ತವೆ ಎಂದು ನಮಗೆ ತಿಳಿದಿದೆ. ಆದ್ದರಿಂದ ಮೊದಲ ಅಲೆಯ ಆರಂಭಿಕ ಭಾಗದಲ್ಲಿ ಸೋಂಕಿಗೆ ಒಳಗಾದ ಜನರು ಈಗ ಎರಡನೇ ಅಲೆಯ ಸಂದರ್ಭದಲ್ಲಿ ಪ್ರತಿಕಾಯಗಳನ್ನು ಹೊಂದಿಲ್ಲದಿರಬಹುದು" ಎಂದು ಹೇಳಿದ್ದಾರೆ.

Tamil Nadu serosurvey finds Covid antibodies in 23% population

"ಇದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಇತರ ಸಮೀಕ್ಷೆಗಳಿಂದ ತಿಳಿದು ಬಂದಿದೆ. ನಾವು ಜನಸಂಖ್ಯೆಯ ಆಧಾರದಲ್ಲಿ ಈ ಸಮೀಕ್ಷೆ ನಡೆಸಿದ ಕಾರಣ ಸೋಂಕಿಗೆ ಒಳಗಾಗಿ ಪ್ರತಿಕಾಯ ಅಭಿವೃದ್ದಿ ಪಟ್ಟಿದೆಯೇ ಅಥವಾ ಲಸಿಕೆ ಹಾಕಿ ಪ್ರತಿಕಾಯ ಅಭಿವೃದ್ದಿ ಪಟ್ಟಿದೆಯೇ ಎಂದು ಹೇಳಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.

ಪರೀಕ್ಷಿಸಿದ 22,904 ಮಾದರಿಗಳಲ್ಲಿ, 5,316 ಜನರಲ್ಲಿ ಕೊರೊನಾ ವೈರಸ್ ವಿರುದ್ಧ ಐಜಿಜಿ ಪ್ರತಿಕಾಯಗಳು ಕಾಣಿಸಿಕೊಂಡಿದೆ. ಭಾರತೀಯ ಮೂಲದ ಬಿ .1.617.2 (ಡೆಲ್ಟಾ) ಸೇರಿದಂತೆ ವಿವಿಧ ಕೊರೊನಾ ರೂಪಾಂತರಗಳು ತಮಿಳುನಾಡಿನಲ್ಲಿ ಪತ್ತೆಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುಮಾರು 756 ಕ್ಲಸ್ಟರ್‌ಗಳಿಂದ ಸಮೀಕ್ಷೆಗಾಗಿ ಪ್ರತಿ ಕ್ಲಸ್ಟರ್‌ನ ಹಳ್ಳಿ, ಗ್ರಾಮೀಣ ಪ್ರದೇಶ, ರಸ್ತೆ ಮತ್ತು ನಗರ ಪ್ರದೇಶದಿಂದ ಸುಮಾರು 30 ಮಂದಿಯನ್ನು ಯಾದೃಚ್ಛೀಕವಾಗಿ ಆಯ್ಕೆ ಮಾಡಿ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ವಿವರಸಿದೆ. ಇನ್ನು ಕಳೆದ ವರ್ಷ ನಡೆಸಿದ ಮೊದಲ ಸಮೀಕ್ಷೆ ಸಂದರ್ಭ 22,690 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಆ ಪೈಕಿ 6,995 ಮಾದರಿಯಲ್ಲಿ ಪ್ರತಿಕಾಯಗಳು ಕಂಡು ಬಂದಿದೆ.

ಮೊದಲ ಅಲೆ ಸಂದರ್ಭದಲ್ಲಿ ಆಗಸ್ಟ್ 2020 ರ ಗರಿಷ್ಠ ಪ್ರಕರಣಗಳು ವರದಿಯಾದ ನಾಲ್ಕು ವಾರಗಳ ಅವಧಿಯಲ್ಲಿ ಮೊದಲ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಎರಡನೇ ಅಲೆ ಆರಂಭದ ಸಂದರ್ಭ ಸಮೀಕ್ಷೆ ಆರಂಭಿಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Tamil Nadu serosurvey finds Covid antibodies in 23% population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X