• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭ: ಮಾರ್ಗಸೂಚಿಯಲ್ಲೇನಿದೆ?

|

ಚೆನ್ನೈ, ಸೆಪ್ಟೆಂಬರ್ 24: ತಮಿಳುನಾಡಿನಲ್ಲಿ ಅಕ್ಟೋಬರ್ 1 ರಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ.

10 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳಬಹುದು ಎಂದು ಹೇಳಲಾಗಿದೆ. ತಮಿಳುನಾಡು ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ ಸ್ವಿಚ್ಛೆಯಂತೆ ಶಾಲೆಗಳಿಗೆ ತೆರಳಬಹುದು.

ಈ ಐದು ರಾಜ್ಯಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ

ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಬೇಕಿದ್ದರೆ, ಪೋಷಕರು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬೇಕು. ಕಂಟೈನ್ಮೆಂಟ್ ಜೋನ್‌ಗಳಲ್ಲಿರುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಗೆ ಹೋಗುವಂತಿಲ್ಲ.

ಸರ್ಕಾರದ ಮಾರ್ಗ ಸೂಚಿ ಇಂತಿವೆ:

-10 ರಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಅವಕಾಶ, ಶಿಕ್ಷಕರು ಎರಡು ಬ್ಯಾಚ್‌ಗಳಲ್ಲಿ ಪಾಠ ಮಾಡಬೇಕು. ಮೊದಲ ಬ್ಯಾಚ್ ಸೋಮವಾರ, ಮಂಗಳವಾರ, ಬುಧವಾರ ಶಾಲೆಗೆ ಬಂದರೆ ಮತ್ತೊಂದು ಬ್ಯಾಚ್ ಗುರುವಾರ, ಶುಕ್ರವಾರ, ಶನಿವಾರ ಶಾಲೆಗೆ ಬರಬೇಕು ಎಂದು ತಿಳಿಸಿದೆ.

-ಶಾಲೆಯಲ್ಲಿರುವ ಫರ್ನಿಚರ್, ಬಾಗಿಲುಗಳು, ಕಿಟಕಿಗಳಿಗೆ ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ಸೊಲ್ಯೂಷನ್ ನೀಡಬೇಕು, ಪ್ರತಿ ದಿನ ಬೆಳಗ್ಗೆ ಇದನ್ನು ಮಾಡಬೇಕು.

-ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಒಟ್ಟೊಟ್ಟಿಗೆ ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ.

   Dasara ಉದ್ಘಾಟನೆಯಲ್ಲಿ ಈ ಬಾರಿ 200 ಮಂದಿಗೆ ಮಾತ್ರ ಅವಕಾಶ | Oneindia Kannada

   -6 ಅಡಿಗಳವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಟಾಫ್‌ರೂಂ, ಕಚೇರಿ ಪ್ರದೇಶದಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

   -ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ.ಹಾಗೆಯೇ ಪದೇ ಪದೇ ಮಾಸ್ಕ್‌ನ್ನು ಕೂಡ ಮುಟ್ಟುತ್ತಿರಬಾರದು.

   -ಪ್ರತಿ ಶಾಲೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಿರಬೇಕು

   -ಒಬ್ಬ ವಿದ್ಯಾರ್ಥಿಯ ನೋಟ್‌ಬುಕ್, ಪೆನ್, ಪೆನ್ಸಿಲ್, ರಬ್ಬರ್, ನೀರಿನ ಬಾಟಲಿಗಳನ್ನು ಮತ್ತೊಬ್ಬ ವಿದ್ಯಾರ್ಥಿ ಮುಟ್ಟಕೂಡದು.

   English summary
   Tamil Nadu government has allowed classes 10, 11, and 12 students to visit schools on a voluntary basis for taking guidance from teachers from October 1, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X