• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಶಾಲೆ-ಕಾಲೇಜು, ಚಿತ್ರಮಂದಿರ ಪುನಾರಂಭ

|

ಚೆನ್ನೈ, ನವೆಂಬರ್.01: ತಮಿಳುನಾಡಿನಲ್ಲಿಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಕೊಂಚ ತಗ್ಗಿದೆ. ಈ ಹಿನ್ನೆಲೆ ಶಾಲಾ-ಕಾಲೇಜು, ಸಿನಿಮಾ ಥಿಯೇಟರ್, ಮೃಗಾಲಯ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳನ್ನು ತೆರೆಯುವುದಕ್ಕೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ.

ರಾಜ್ಯಾದ್ಯಂತ ನವೆಂಬರ್ ತಿಂಗಳಿನಲ್ಲಿ ಪ್ರಮಾಣಿಕ ಕಾರ್ಯಾಚರಣೆ ವಿಧಾನಗಳ ಅಡಿಯಲ್ಲಿ ಸೇವೆಗಳ ಪುನಾರಂಭಕ್ಕೆ ಸರ್ಕಾರವು ಸಮ್ಮತಿಸಿದೆ. ಉಪ ನಗರ ರೈಲ್ವೆ ಸೇವೆಯನ್ನು ಕೇಂದ್ರ ಸರ್ಕಾರದ ತೀರ್ಮಾನದಂತೆ ಪುನಾರಂಭಿಸಲು ಅನುಮತಿ ನೀಡಲಾಗಿದೆ.

ಶಾಲಾ-ಕಾಲೇಜುಗಳ ಆರಂಭದ ವಿಚಾರದಲ್ಲಿ ಆತುರ ಇಲ್ಲ: ಶ್ರೀರಾಮುಲು

ತಮಿಳುನಾಡಿನಲ್ಲಿ ನವೆಂಬರ್.16ರಿಂದ ಶಾಲೆ, ಕಾಲೇಜು, ಸಂಶೋಧನಾ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಹೋಟೆಲ್ ಗಳನ್ನು ಪುನಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ಆರಂಭಿಸುವುದಕ್ಕೆ ಸೂಚಿಸಲಾಗಿದೆ.

ಶೇ.50ರಷ್ಟು ಮಾತ್ರ ಗ್ರಾಹಕರಿಗೆ ಅವಕಾಶ:

ರಾಜ್ಯದಲ್ಲಿರುವ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್, ಮೃಗಾಲಯ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಗಳು ನವೆಂಬರ್.10ರಿಂದಲೇ ಪುನಾರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ ಶೇ.50ರಷ್ಟು ಜನರ ಪ್ರವೇಶಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. 200 ಸೀಟ್ ಗಳ ಒಂದು ಚಿತ್ರ ಮಂದಿರದಲ್ಲಿ ಕೇವಲ 100 ಜನರಿಗೆ ಮಾತ್ರ ಟಿಕೆಟ್ ವಿತರಿಸುವುದಕ್ಕೆ ಅನುಮತಿ ನೀಡಲಾಗಿದೆ. ಪ್ರಮಾಣಿಕ ಕಾರ್ಯಾಚರಣೆ ವಿಧಾನಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ.

ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಕಂಟೇನ್ಮೆಂಟ್ ಝೋನ್ ಗಳಿಗೆ ಈ ನಿಯಮಗಳು ಅನ್ವಯ ಆಗುವುದಿಲ್ಲ. ಕಂಟೇನ್ಮೆಂಟ್ ಝೋನ್ ಗಳಲ್ಲಿ ಶಾಲಾ-ಕಾಲೇಜು, ಮೃಗಾಲಯ, ಚಿತ್ರಮಂದಿರ ಮತ್ತು ಹೋಟೆಲ್ ಗಳನ್ನು ಎಂದಿನಂತೆ ಮುಚ್ಚಿರುತ್ತವೆ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.

English summary
Tamil Nadu: School Colleges From Nov 16, Theatres From Nov 10 Resume.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X