ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾ ಮಂದಿರಗಳ 100% ಆಸನ ಭರ್ತಿ ಆದೇಶ ಹಿಂಪಡೆದ ತಮಿಳುನಾಡು

|
Google Oneindia Kannada News

ಚೆನ್ನೈ, ಜನವರಿ 08: ಸಿನಿಮಾ ಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ಆದೇಶವನ್ನು ತಮಿಳುನಾಡು ಸರ್ಕಾರ ವಾಪಸ್ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಈ ಆದೇಶವು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗಲಿದೆ ಎಂದು ಕೇಂದ್ರ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ.

ಸಿನಿಮಾ, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಆಸನ ಭರ್ತಿಯನ್ನು 50% ಇಂದ 100%ಕ್ಕೆ ಏರಿಸಲು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿರುವುದು ಮಾರ್ಗಸೂಚಿಯ ಉಲ್ಲಂಘನೆ. ಎಂಥ ಸಂದರ್ಭದಲ್ಲಿಯೂ ರಾಜ್ಯ ಸರ್ಕಾರ ಕೊರೊನಾ ಮಾರ್ಗಸೂಚಿಯ ನಿಯಮ ಉಲ್ಲಂಘನೆ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವಾಲಯ ಜನವರಿ 6ರಂದು ರಾಜ್ಯಕ್ಕೆ ಪತ್ರ ಬರೆದಿತ್ತು. ಕೇಂದ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ತಮಿಳುನಾಡು ಸರ್ಕಾರ ಆದೇಶವನ್ನು ಸರಿಪಡಿಸಿ ಅಗತ್ಯ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು.

ವೈರಲ್ ಆಯ್ತು ತಮಿಳುನಾಡು ಸರ್ಕಾರ, ನಟರಿಗೆ ವೈದ್ಯ ಬರೆದ ಪತ್ರವೈರಲ್ ಆಯ್ತು ತಮಿಳುನಾಡು ಸರ್ಕಾರ, ನಟರಿಗೆ ವೈದ್ಯ ಬರೆದ ಪತ್ರ

ಈ ಹಿನ್ನೆಲೆಯಲ್ಲಿ ಶುಕ್ರವಾರ ಆದೇಶ ಹಿಂಪಡೆದು, 100% ಇಂದ ಮತ್ತೆ 50% ಆಸನ ಭರ್ತಿಗೆ ಅವಕಾಶ ನೀಡಲಾಗಿದೆ.

 Tamil Nadu Rescinded Order Of 100% Seating In Cinema Halls

ತಮಿಳುನಾಡಿನಲ್ಲಿ ಕಳೆದ ನವೆಂಬರ್ ನಿಂದಲೇ 50% ಆಸನ ಭರ್ತಿಗೆ ಅವಕಾಶ ನೀಡಿ ಸಿನಿಮಾ ಮಂದಿರಗಳನ್ನು ತೆರೆಯಲಾಗಿತ್ತು. ಆದರೂ ಜನರು ಸಿನಿಮಾ ಮಂದಿರಗಳತ್ತ ಸುಳಿಯುತ್ತಿರಲಿಲ್ಲ. ಈಚೆಗೆ ಥಿಯೇಟರ್ ಮಾಲೀಕರ ಜೊತೆ ಸಭೆ ನಡೆಸಿದ ರಾಜ್ಯ ಸರ್ಕಾರ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಸೂಚಿಸುವಂತೆ ತಿಳಿಸಿ ಜನವರಿ 4ರಿಂದ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿತ್ತು. ಆದರೆ ಸರ್ಕಾರದ ಈ ಕ್ರಮಕ್ಕೆ ಆಕ್ಷೇಪಗಳು ವ್ಯಕ್ತವಾಗಿದ್ದವು.

English summary
Tamil Nadu government on Friday rescinded its order which allowed 100% seating in cinema halls across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X