ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಇದ್ದರೂ ತಮಿಳುನಾಡಿನಲ್ಲಿ ಕೊರೊನಾ ರಣಕೇಕೆ, ಒಂದೇ ದಿನ 3645 ಕೇಸ್

|
Google Oneindia Kannada News

ಚೆನ್ನೈ, ಜೂನ್ 26: ತಮಿಳುನಾಡಿನಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯುವಲ್ಲಿ ಸರ್ಕಾರ ನಿಯಂತ್ರಣ ತಪ್ಪಿದೆ. ಚೆನ್ನೈ, ಮಧುರೈ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ್ದರೂ ಪ್ರತಿದಿನದ ವರದಿಯಾಗುತ್ತಿರುವ ಸೋಂಕಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ.

Recommended Video

ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

ತಮಿಳುನಾಡಿನಲ್ಲಿಂದು 3,645 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74,622ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಸೋಂಕು ಹೊಂದಿರುವುದು ತಮಿಳುನಾಡಿನಲ್ಲಿ.

ತಮಿಳುನಾಡು; ಒಂದೇ ದಿನ 3,509 ಹೊಸ ಕೋವಿಡ್ ಪ್ರಕರಣ!ತಮಿಳುನಾಡು; ಒಂದೇ ದಿನ 3,509 ಹೊಸ ಕೋವಿಡ್ ಪ್ರಕರಣ!

ಇಂದಿನ ಪ್ರಕರಣಗಳ ಪೈಕಿ ಚೆನ್ನೈನಲ್ಲಿ 1956 ಜನರಿಗೆ ಕೊವಿಡ್ ತಗುಲಿದೆ. ಈ ಮೂಲಕ ಚೆನ್ನೈನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,712 ಜಿಗಿದಿದೆ. ನಿಜಕ್ಕೂ ಇದು ಆತಂಕಕಾರಿ ವಿಷಯ. ಚೆನ್ನೈನಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಆದರೂ, ದಿನವೊಂದಕ್ಕೆ 1956 ಕೇಸ್ ಪತ್ತೆಯಾಗಿದೆ.

 Tamil Nadu reports 3,645 new COVID19 cases today

ಪ್ರಸ್ತುತ ತಮಿಳುನಾಡಿನಲ್ಲಿ 32,305 ಕೇಸ್ ಸಕ್ರಿಯವಾಗಿದೆ. ಕಳೆದ 24 ಗಂಟೆಯಲ್ಲಿ 46 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 957ಕ್ಕೆ ಏರಿದೆ.

English summary
Tamil Nadu reports 3,645 new COVID19 cases, taking the state's total to 74,622 out of which 32,305 are active cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X