ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!

|
Google Oneindia Kannada News

ಚೆನ್ನೈ, ಡಿಸೆಂಬರ್ 26: ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರಿಗೆ ಎಚ್ ಐವಿ ಸೋಂಕು ತಗುಲಿದ ರಕ್ತವನ್ನು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.

ಇದೀಗ ಗರ್ಭಿಣಿ ಎಚ್ಐವಿ ಸೋಂಕಿತೆಯಾಗಿದ್ದು, ಜೀವನ ಪೂರ್ತಿ ನರಕ ಅನುಭವಿಸಬೇಕಾಗಿದೆ. ಆಕೆಯ ಗರ್ಭದಲ್ಲಿರುವ ಶಿಶುವಿಗೂ ಎಚ್ ಐವಿ ತಗುಲುವ ಸಾಧ್ಯತೆ ಇದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕೆರೆಗೆ ಹಾರಿ ಎಚ್‌ಐವಿ ಸೋಂಕಿತೆ ಆತ್ಮಹತ್ಯೆ: ಗ್ರಾಮಸ್ಥರು ಮಾಡಿದ್ದೇನು?ಕೆರೆಗೆ ಹಾರಿ ಎಚ್‌ಐವಿ ಸೋಂಕಿತೆ ಆತ್ಮಹತ್ಯೆ: ಗ್ರಾಮಸ್ಥರು ಮಾಡಿದ್ದೇನು?

ಎಚ್ ಐವಿ ತ್ತು ಹೆಪಟೈಟಿಸ್ ಬಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ರಕ್ತದಾನ ಮಾಡಿದ್ದ. ಆದರೆ ಆತನ ರಕ್ತವನ್ನು ಸರಿಯಾಗಿ ಪರೀಕ್ಷಿಸದೆ ಗರ್ಭಿಣಿಯೊಬ್ಬರಿಗೆ ನೀಡುವ ಮೂಲಕ ಅಚಾತುರ್ಯವೆಸಗಿದ್ದಾರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ.

Tamil Nadu: Pregnant Woman given HIV infected blood in government hospital

ಘಟನೆಯ ನಂತರ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಎಚ್ ಐವಿ ಪೀಡಿತ ಮಹಿಳೆಗೆ ಪರಿಹಾರ ಮತ್ತು ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ ಜೀವನ ಪರ್ಯಂತ ಈ ಸೋಂಕಿನಿಂದಲೇ ಉಳಿಯಬೇಕಾದ ಶಾಪದಿಂದ ಮಾತ್ರ ಆಕೆ ಹೊರಬರಲು ಸಾಧ್ಯವಿಲ್ಲ!

ಒಂದೇ ಸಿರಿಂಜು ಚುಚ್ಚಿ, ಹಲವರಿಗೆ HIV ತಗುಲಿಸಿದ ನಕಲಿ ವೈದ್ಯ ಒಂದೇ ಸಿರಿಂಜು ಚುಚ್ಚಿ, ಹಲವರಿಗೆ HIV ತಗುಲಿಸಿದ ನಕಲಿ ವೈದ್ಯ

ರಕ್ತದಾನ ಮಾಡಿದ ಯುವಕನಿಗೂ ತನಗೆ ಕಾಯಿಲೆ ಇರುವ ಬಗ್ಗೆ ತಿಳಿದಿರಲಿಲ್ಲ. ಇದೀಗ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಅಸುರಕ್ಷಿತ ಲೈಂಗಿಕತೆಯಿಂದ ಬದುಕು ಕಸಿಯುತ್ತಿರುವ ಆಗಂತುಕರುಅಸುರಕ್ಷಿತ ಲೈಂಗಿಕತೆಯಿಂದ ಬದುಕು ಕಸಿಯುತ್ತಿರುವ ಆಗಂತುಕರು

ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಕಲಿ ವೈದ್ಯನೊಬ್ಬ ಒಂದೇ ಸಿರೀಂಜಿನಲ್ಲಿ ಹಲವರಿಗೆ ಚುಚ್ಚುಮದ್ದು ನೀಡಿ ಎಚ್ ಐವಿ ಸೋಂಕು ತಗುಲುವಂತೆ ಮಾಡಿದ ಘಟನೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A 24-year-old pregnant woman in Tamil Nadu contracted HIV after infected blood was pumped into her during a blood transfusion at a government hospital in Virudhunagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X