• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಲ್ಲಿ ಪೊಂಗಲ್: ಜಲ್ಲಿಕಟ್ಟು ಸ್ಪರ್ಧೆಗೆ 2,100 ಹೋರಿಗಳು ಸಜ್ಜು

|

ಚೆನ್ನೈ, ಜನವರಿ.14: ತಮಿಳುನಾಡಿನಲ್ಲಿ ಸಾಂಪ್ರಾದಾಯಕ ಹಬ್ಬಕ್ಕೆ ಭರ್ಜರಿ ಭರಪೂರ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನೇ ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ. ಜನವರಿ.15ರಿಂದ ಮೂರು ದಿನಗಳ ಕಾಲ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯೇ ಈ ಹಬ್ಬದ ಕೇಂದ್ರ ಬಿಂದು ಆಗಿದೆ.

ಚೆನ್ನೈ ಸೇರಿದಂತೆ ತಮಿಳುನಾಡಿನ ಮೂರು ಕಡೆಗಳಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿದೆ. ಜಲ್ಲಿಕಟ್ಟು ಎಂದರೆ ಹೋರಿಗಳನ್ನು ಎದುರಿಸುವ ಸ್ಪರ್ಧೆಯಾಗಿದ್ದು, ಈ ಹಬ್ಬಕ್ಕೆ ತಮಿಳುನಾಡಿನಲ್ಲಿ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

ಶಿವಮೊಗ್ಗ: ನಿಷೇಧದ ನಡುವೆಯೂ ಹೋರಿ ಸ್ಪರ್ಧೆ, ಓರ್ವ ಬಲಿ

ಜಲ್ಲಿಕಟ್ಟು ಆಚರಣೆಯಲ್ಲಿ ಅಪ್ರಾಪ್ತರಿಗೆ ಮೊದಲಿನಿಂದಲೂ ಪ್ರವೇಶ ನಿಷೇಧಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಾಗಿ ಅಪ್ರಾಪ್ತರನ್ನು ಜಲ್ಲಿಕಟ್ಟಿನಿಂದ ದೂರ ಇರಿಸಲು ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಂಡಿದೆ. 21 ವರ್ಷದೊಳಗಿನ ಯುವಕರು ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಮಧುರೈ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮೂರು ಕಡೆಗಳಲ್ಲಿ ಒಂದೊಂದು ದಿನ ಆಚರಣೆ

ಮೂರು ಕಡೆಗಳಲ್ಲಿ ಒಂದೊಂದು ದಿನ ಆಚರಣೆ

ಪ್ರತಿವರ್ಷವು ಪೊಂಗಲ್ ಹಬ್ಬದ ಸಂಭ್ರಮವನ್ನು ಆಚರಿಸಲು ಮೂರು ದಿನಗಳ ಕಾಲ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜನವರಿ.15ರಂದು ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದ್ದು ಅದಕ್ಕಾಗಿ 750 ಕೋಣಗಳನ್ನು ಅಣಿಗೊಳಿಸಲಾಗಿದೆ. ಜನವರಿ.16ರಂದು ಪಲಮೇಡುನಲ್ಲಿ ಜಲ್ಲಿಕಟ್ಟು ಸ್ಪರ್ಧೆಗಾಗಿ 650 ಕೋಣಗಳು ಸಜ್ಜುಗೊಂಡಿವೆ. ಇನ್ನು, 17ರಂದು ಅಲಂಕನಲ್ಲೂರ ಗ್ರಾಮದಲ್ಲಿ ಜರುಗುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 700 ಕೋಣಗಳು ಭಾಗವಹಿಸಲಿದೆ.

ಜಲ್ಲಿಕಟ್ಟು ಅನಾಹುತ ತಪ್ಪಿಸಲು ಜಿಲ್ಲಾಧಿಕಾರಿ ಕ್ರಮ

ಜಲ್ಲಿಕಟ್ಟು ಅನಾಹುತ ತಪ್ಪಿಸಲು ಜಿಲ್ಲಾಧಿಕಾರಿ ಕ್ರಮ

ಮಧುರೈನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ವಿಶೇಷ ಷರತ್ತುನ್ನು ವಿಧಿಸಲಾಗಿದೆ. ಈ ಬಾರಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ನಡೆಯುವ ಅನಾಹುತಗಳನ್ನು ತಪ್ಪಿಸಲೆಂದೇ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ

ಫಿಟ್ ನೆಸ್ ಸರ್ಟಿಫಿಕೇಟ್ ಉಳ್ಳವರಿಗೆ ಮಾತ್ರ ಅವಕಾಶ

ಫಿಟ್ ನೆಸ್ ಸರ್ಟಿಫಿಕೇಟ್ ಉಳ್ಳವರಿಗೆ ಮಾತ್ರ ಅವಕಾಶ

ಇನ್ನು, ಮಧುರೈ ಜಿಲ್ಲೆಯ ಪಲಮಾಡು ಮತ್ತು ಅಲಂಗನಲ್ಲೂರಿನಲ್ಲಿ ಈ ಬಾರಿ ಜಲ್ಲಿಕಟ್ಟು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವತಃ ತಾವೇ ಹೋಗಿ ವೈದ್ಯರಿಂದ ಫಿಟ್ ನೆಸ್ ಸರ್ಟಿಫಿಕೇಟ್ ನ್ನು ಪಡೆದುಕೊಂಡಿರಬೇಕು. ಈ ಫಿಟ್ ನೆಸ್ ಸರ್ಟಿಫಿಕೇಟ್ ಉಳ್ಳವರಿಗೆ ಮಾತ್ರ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಬಸ್ ಗಳ ವ್ಯವಸ್ಥೆ ಕಲ್ಪಿಸಿದ ಸರ್ಕಾರ

ವಿಶೇಷ ಬಸ್ ಗಳ ವ್ಯವಸ್ಥೆ ಕಲ್ಪಿಸಿದ ಸರ್ಕಾರ

ಪೊಂಗಲ್ ಆಚರಣೆ ಜೊತೆಗೆ ಜಲ್ಲಿಕಟ್ಟು ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ವಿಶೇಷ ಬಸ್ ವ್ಯವಸ್ಥೆ ಜೊತೆಗೆ ಪ್ಯಾಕೇಜ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಸಿ ಕೋಚ್ ಬಸ್ ಹಾಗೂ ವಸತಿ ವ್ಯವಸ್ಥೆ ಒಬ್ಬರಿಗೆ 4,550 ರುಪಾಯಿ ನಿಗದಿಗೊಳಿಸಿದ್ದು, ಶೇರಿಂಗ್ ಆದರೆ 4300 ರೂಪಾಯಿ ಹಾಗೂ ಮಕ್ಕಳಿಗೆ 3450 ರುಪಾಯಿ ನಿಗದಿ ಮಾಡಲಾಗಿದೆ. ಎಸಿ ಬಸ್ ಹಾಗೂ ಎಸಿ ವಸತಿ ವ್ಯವಸ್ಥೆ ಕಲ್ಪಿಸಲು ಒಬ್ಬರಿಗೆ 4750 ರುಪಾಯಿ ನಿಗದಿಗೊಳಿಸಲಾಗಿದ್ದು, ಶೇರಿಂದ್ ಅದರೆ 4500 ಹಾಗೂ ಮಕ್ಕಳಿಗೆ 3600 ರುಪಾಯಿ ನಿಗದಿಗೊಳಿಸಲಾಗಿದೆ.

English summary
Tamil Nadu Pongal: 2,100 Bulls Ready For Jallikattu Competitions This Year. Participates Must Have Fitness Certificate After Required Health Check Up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X