• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು ಚುನಾವಣೆ; ಮೊದಲ ಬಾರಿ ಕಣದಲ್ಲಿ ತೃತೀಯ ಲಿಂಗಿ

|

ಚೆನ್ನೈ, ಮಾರ್ಚ್ 22: ವಿಧಾನಸಭಾ ಚುನಾವಣೆಗೆ ತಮಿಳುನಾಡು ಭರದ ಸಿದ್ಧತೆಯಲ್ಲಿದೆ. ಹಲವು ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದೇ ಮೊದಲ ಬಾರಿ ತಮಿಳುನಾಡಿನ ಮದುರೈನಿಂದ ತೃತೀಯ ಲಿಂಗಿಯೊಬ್ಬರು ಕಣಕ್ಕಿಳಿಯಲಿದ್ದಾರೆ.

ಭಾರತಿ ಕನ್ನಮ್ಮ ಎಂಬುವರು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ನ್ಯೂ ಜನರೇಷನ್ ಪೀಪಲ್ಸ್ ಪಾರ್ಟಿಯಿಂದ ಸ್ಪರ್ಧಿಸುತ್ತಿದ್ದು, ಭಾರತದಲ್ಲಿ ತೃತೀಯ ಲಿಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತೆವಳಿ ಹೋಗಲು ನಾನೇನು ಹಲ್ಲಿಯೇ ಅಥವಾ ಹಾವೇ?: ಸ್ಟಾಲಿನ್ ವಿರುದ್ಧ ಇಪಿಎಸ್ ಕಿಡಿತೆವಳಿ ಹೋಗಲು ನಾನೇನು ಹಲ್ಲಿಯೇ ಅಥವಾ ಹಾವೇ?: ಸ್ಟಾಲಿನ್ ವಿರುದ್ಧ ಇಪಿಎಸ್ ಕಿಡಿ

ಭಾರತಿ ಅವರು 2014 ಹಾಗೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೂ ಮದುರೈ ಇಂದ ಕಣಕ್ಕಿಳಿದಿದ್ದರು. ಆದರೆ 2019ರಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಎರಡು ಚುನಾವಣೆಗಳಲ್ಲೂ ಭಾರತಿ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಮತ್ತೆ ಸ್ಪರ್ಧಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಮದುರೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಮದುರೈ ಅನ್ನು ಮಾದರಿ ನಗರವನ್ನಾಗಿ ಮಾಡುವ ಭರವಸೆ ನೀಡಿದ್ದಾರೆ.

ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಭಾರತಿ ಕನ್ನಮ್ಮ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಕಲಿತಿದ್ದಾರೆ.

ನಮಗೆ ಯಾವುದೇ ಕುಟುಂಬ ಇಲ್ಲ. ಹೀಗಾಗಿ ಭ್ರಷ್ಟಾಚಾರಕ್ಕೂ ನಾವು ಇಳಿಯುವುದಿಲ್ಲ. ನನಗೆ ಮತ ನೀಡಿ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

English summary
Bharathi Kannama, a transgender woman is contesting Tamil Nadu Assembly polls 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X