ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಜಿಹಾದಿ ಗ್ಯಾಂಗ್ ಸದಸ್ಯನ ಬಂಧನ

|
Google Oneindia Kannada News

ಚೆನ್ನೈ, ಜನವರಿ 22: ತಮಿಳುನಾಡಿನಲ್ಲಿ ಸಕ್ರಿಯವಾಗಿರುವ ಜಿಹಾದಿ ಗ್ಯಾಂಗಿನ ಸದಸ್ಯನೊಬ್ಬನನ್ನು ಎಐಎ ತಂಡ ಬಂಧಿಸಿದೆ. ''ಷಹದಾತ್ ನಮ್ಮ ಗುರಿ'' ಎಂದು ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಹಬ್ಬಲು ಕಾರಣವಾಗಿದ್ದ ಜಿಹಾದಿ ಎಂದು ತಿಳಿದು ಬಂದಿದೆ.

ಬಂಧಿತನನ್ನು 25 ವರ್ಷ ವಯಸ್ಸಿನ ಮೊಹಮ್ಮದ್ ರಶೀದ್ ಎಂದು ಗುರುತಿಸಲಾಗಿದೆ. ಕಡಲೂರ್ ಜಿಲ್ಲೆಯಲ್ಲಿ ಈತನನ್ನು ಬಂಧಿಸಲಾಗಿದ್ದು, ಚೆನ್ನೈನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಏಪ್ರಿಲ್ 2018ರಲ್ಲ್ ಐಪಿಸಿಯ ವಿವಿಧ ಸೆಕ್ಷನ್, ಕಾನೂನು ಬಾಹಿರ ಚಟುವಟಿಕೆ(ನಿಗ್ರಹ) ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ರಾಮನಾಥಪುರಂ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಮೊಹಮ್ಮದ್ ರಿಫಾಸ್, ಮುಪಾರಿಶ್ ಅಹ್ಮದ್, ಅಬುಪಕ್ಕರ್ ಸಿಥಿಕ್ ಎಂಬುವವರನ್ನು ಬಂಧಿಸಲಾಗಿದ್ದು, ಈ ಉಗ್ರರ ಗ್ಯಾಂಗಿನಿಂದ ಹಲವು ಕರಪತ್ರ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

Tamil Nadu: NIA arrests member of A terror outfit

ಇದಾದ ಬಳಿಕ ಶೇಕ್ ದಾವೂದ್, ಅಹ್ಮದ್ ಇಮಿತ್ಯಾಶ್, ಹಮೀದ್ ಅಸ್ಫರ್, ಲಿಯಾಕತ್ ಅಲಿ, ಸಾಜಿತ್ ಅಹ್ಮದ್ ಹಾಗೂ ರಿಜ್ವಾನ್ ಮೊಹಮ್ಮದ್ ನಂತರ ಬಂಧಿಸಲಾಗಿತ್ತು. 2019 ಮತ್ತೆ ತನಿಖೆ ತೀವ್ರಗೊಳಿಸಿದಾಗ ರಶೀದ್ ಬಗ್ಗೆ ಸುಳಿವು ಸಿಕ್ಕಿತ್ತು. ಶರಿಯಾರ್ ಕಾನೂನು ಎಲ್ಲೆಡೆ ಜಾರಿಗೊಳಿಸಬೇಕು ಎಂದು ಬಯಸಿದ್ದರು. ಬಂಧಿತ ರಶೀದ್ ಬಳಿ ಇದ್ದ ಅಕ್ರಮ ಶಸ್ತ್ರಾಸ್ತ್ರ, ದಾಖಲೆಗಳನ್ನುವಶಪಡಿಸಿಕೊಳ್ಳಲಾಗಿದ್ದು ,ತನಿಖೆ ಮುಂದುವರೆದಿದೆ.

English summary
The NIA on Thursday arrested an active member of a "jihadi" gang, "Shahadat is our Goal", from Tamil Nadu for his alleged involvement in a conspiracy of waging a violent "jihad" in the southern state as part of efforts to establish Shariah, an official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X