ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಈ ಸಚಿವರ ಕಾಲಲ್ಲಿರುವ ಚಪ್ಪಲಿ ತೆಗೆಯಲು ಪುಟ್ಟ ಬಾಲಕನೇ ಬೇಕು

|
Google Oneindia Kannada News

ಚೆನ್ನೈ, ಫೆಬ್ರವರಿ.06: ತಮಿಳುನಾಡು ಅರಣ್ಯ ಸಚಿವ ದಿಂಡುಗಲ್ ಸಿ ಶ್ರೀನಿವಾಸ್ ತೋರಿದ ದರ್ಷ ನೋಡುಗರ ಕಣ್ಣು ಕೆಂಪಾಗಿಸುತ್ತಿದೆ. ಪುಟ್ಟ ಬಾಲಕನ ಕೈಯಿಂದ ತಾವು ಹಾಕಿಕೊಂಡ ಚಪ್ಪಲಿಯನ್ನು ತೆಗೆಸಿದ ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ತೆಪ್ಪಕಾಡು ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಶಿಬಿರ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಚಿವ ದಿಂಡುಗಲ್ ಶ್ರೀನಿವಾಸ್ ಭಾಗವಹಿಸಿದ್ದರು. ಈ ವೇಳೆ ಬುಡಕಟ್ಟು ಜನಾಂಗದ ಪುಟ್ಟ ಬಾಲಕನ ಕೈಯಿಂದ ತಾವು ಹಾಕಿಕೊಂಡ ಚಪ್ಪಲಿಯನ್ನು ತೆಗೆಸಿದ್ದಾರೆ.

Tamil Nadu Minister Dindigul C Srinivasan Makes A Boy Remove His Sandals

ಆನೆ ಪಾಪದ ಜಂಟಲ್‌ಮ್ಯಾನ್, ಅದಕ್ಕೆ ದಾರಿಬಿಡಿ'ಆನೆ ಪಾಪದ ಜಂಟಲ್‌ಮ್ಯಾನ್, ಅದಕ್ಕೆ ದಾರಿಬಿಡಿ'

ಇನ್ನು, ಸಚಿವರು ತಮ್ಮ ನಡೆಯ ಬಗ್ಗೆ ಸ್ಪಷ್ಟನೆಯನ್ನೂ ಸಹ ಕೊಟ್ಟಿದ್ದಾರೆ. ತಮಗೆ ಬೆನ್ನುನೋವು ಇದ್ದ ಕಾರಣಕ್ಕೆ ಬಾಲಕನಿಂದ ತಮ್ಮ ಕಾಲಿನಲ್ಲಿ ಹಾಕಿಕೊಂಡ ಚಪ್ಪಲಿಯನ್ನು ತೆಗೆಸಿದೆನೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಅಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಅರಣ್ಯ ಸಚಿವ ದಿಂಡುಗಲ್ ಶ್ರೀನಿವಾಸ್ ಚಪ್ಪಲಿಯನ್ನು ತೆಗೆದ ಬಾಲಕನ ಹೆಸರು ಕೇಥನ್ ಎಂದು ತಿಳಿದು ಬಂದಿದೆ. 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಕೈಯಿಂದ ಸಚಿವರು ಚಪ್ಪಲಿ ತೆಗೆಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಚಿವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

English summary
Video Viral: Tamil Nadu Minister Dindigul C Srinivasan Makes A Boy Remove His Sandals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X