ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪೋಟೋ ತಿರುಚಿದ ತ.ನಾಡಿನ ಎಂಡಿಎಂಕೆ ಸದಸ್ಯ ಬಂಧನ

|
Google Oneindia Kannada News

ತಮಿಳುನಾಡಿನ ಎಂಡಿಎಂಕೆ ಸದಸ್ಯನನ್ನು ಭಾನುವಾರ ಬಂಧಿಸಿದ್ದು, ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತಿರುಚಲಾಗಿದೆ ಎಂಬ ಆರೋಪದಲ್ಲಿ ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಿಕ್ಷೆ ಬೇಡುವಂತೆ ಚಿತ್ರಿಸುವ ಫೋಟೋವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಷ್ಟೇ ದೊಡ್ಡ ಗುಂಪು ಒಟ್ಟಾಗಿ ಬಂದರೂ ನಾನು ಬಡವರ ಪರ: ಮೋದಿಎಷ್ಟೇ ದೊಡ್ಡ ಗುಂಪು ಒಟ್ಟಾಗಿ ಬಂದರೂ ನಾನು ಬಡವರ ಪರ: ಮೋದಿ

ಸೀರ್ ಕಾಳಿ ಪಟ್ಟಣದ ಎಂಡಿಎಂಕೆ ಸದಸ್ಯ ಸತ್ಯರಾಜ್ ಅಲಿಯಾಸ್ ಬಾಲು ಬಂಧಿತ ಆರೋಪಿ. ಬಿಜೆಪಿಯ ಸ್ಥಳೀಯ ನಾಯಕರ ಆರೋಪ ಮೇಲೆ ಆತನನ್ನು ಬಂಧಿಸಲಾಗಿದೆ. ಶಾಂತಿ ಕದಡುವ ಪ್ರಯತ್ನ ಮಾಡಿದ ಉದ್ದೇಶ ಹೊಂದಿದ ಆರೋಪ ಮಾಡಲಾಗಿದೆ. ಸತ್ಯರಾಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೋಮವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Tamil Nadu MDMK member arrested over morphed photo of PM on Facebook

ಜನವರಿ ಇಪ್ಪತ್ತಾರನೇ ತಾರೀಕು ಆ ಫೋಟೋವನ್ನು ಸತ್ಯರಾಜ್ ಅಪ್ ಲೋಡ್ ಮಾಡಿದ್ದಾನೆ. ಎಂಡಿಎಂಕೆ ಸದಸ್ಯರು ಅದೇ ದಿನ ಮದುರೈನಲ್ಲಿ ಮೋದಿ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದರು. ತಮಿಳುನಾಡಿನ ಹಿತಾಸಕ್ತಿಗೆ ಮೋದಿ ದ್ರೋಹ ಎಸಗುತ್ತಿದ್ದಾರೆ ಎಂಉ ಪಕ್ಷದ ಸದಸ್ಯರು ಆರೋಪಿಸಿದ್ದರು.

English summary
A member of Tamil Nadu party MDMK was on Sunday arrested for allegedly posting a morphed image of Prime Minister Narendra Modi on Facebook. The police said the accused caricatured PM Modi and depicted him with a begging bowl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X