ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

|
Google Oneindia Kannada News

ಚೆನ್ನೈ, ಡಿಸೆಂಬರ್ 28: ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯೊಬ್ಬರಿಗೆ ಹೆಚ್ ಐವಿ ಸೋಂಕಿತ ರಕ್ತ ನೀಡಿದ ಯುವಕ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ವರ್ಷ ವಯಸ್ಸಿನ ಗರ್ಭಿಣಿಯೊಬ್ಬರಿಗೆ ಎಚ್ ಐವಿ ಸೋಂಕು ತಗುಲಿದ ರಕ್ತವನ್ನು ನೀಡಲಾಗಿತ್ತು. ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನಲಾಗಿತ್ತು. ಯುವಕನಿಗೂ ತಾನು ಎಚ್ ಐವಿ ಪೀಡಿತ ಎಂಬುದು ತಿಳಿದಿರಲಿಲ್ಲ. ರಕ್ತ ಪರೀಕ್ಷೆಯ ನಂತರ ಈ ವಿಷಯ ತಿಳಿಯುತ್ತಿದ್ದಂತೆಯೇ ಖಿನ್ನನಾದ ಯುವಕ ಇಲಿ ಸಾಯಿಸಲು ಹಾಕುವ ವಿಷವನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿದ ಸರ್ಕಾರಿ ಆಸ್ಪತ್ರೆ!

ಡಿ.3 ರಂದು ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದರು. ಆಗ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ರಕ್ತ ನೀಡಲಾಗಿತ್ತು. ಆದರೆ ರಕ್ತ ಪಡೆಯುವ ವ್ಯಕ್ತಿಯನ್ನು ಸರಿಯಾಗಿ ಪರೀಕ್ಷಿಸದೆ ನಿರ್ಲಕ್ಷ್ಯ ತೋರಿ ರಕ್ತ ನೀದಿದ ಪರಿಣಾಮ ಗರ್ಭಿಣಿಯೂ ಹೆಚ್ ಐವಿ ಸೋಂಕಿಗೊಳಗಾಗಿದ್ದರು. ಆಕೆಯ ಗರ್ಭದಲ್ಲಿರುವ ಶಿಶುವಿಗೂ ಹೆಚ್ ಐ ವಿ ತಗುಲಬಹುದು ಎನ್ನಲಾಗಿದೆ.

Tamil Nadu man who donated HIV infected blood to pregnant attempts suicide

ಈ ಘೋರ ನಿರ್ಲಕ್ಷ್ಯದಿಂದ ಘಟಿಸಿದ ದುರಂತವನ್ನು ಗಂಭಿರವಾಗಿ ಪರಿಗಣಿಸಿರುವ ಸರಕಾರ ತನಿಖೆಗೆ ಆದೇಶ ನೀಡಿದ್ದು, ಕೋರ್ಟ್ ಸ್ಯುಮೋಟೋ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ.

ಕೆರೆಗೆ ಹಾರಿ ಎಚ್‌ಐವಿ ಸೋಂಕಿತೆ ಆತ್ಮಹತ್ಯೆ: ಗ್ರಾಮಸ್ಥರು ಮಾಡಿದ್ದೇನು?ಕೆರೆಗೆ ಹಾರಿ ಎಚ್‌ಐವಿ ಸೋಂಕಿತೆ ಆತ್ಮಹತ್ಯೆ: ಗ್ರಾಮಸ್ಥರು ಮಾಡಿದ್ದೇನು?

ವ್ಯಕ್ತಿಗೆ ಎರಡು ವರ್ಷದ ಹಿಂದಿನಿಂದಲೂ ಎಚ್ ಐವಿ ಸೋಂಕು ತಗುಲಿತ್ತು. ಆದರೆ ಈ ವಿಷಯ ಆತನಿಗೂ ಗೊತ್ತಿರಲಿಲ್ಲ. ಇದೀಗ ಪರೀಕ್ಷೆಯ ನಂತರ ವಿಷಯ ತಿಳಿದು ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

English summary
A pregnant woman in Tamil Nadu contracted HIV after blood transfusion at a government hospital in Virudhunagar district's Sattur. The donor, a teenager, reportedly attempted suicide on Thursday by consuming rat poison as his family struggled to deal with the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X