ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತಡೆಯಲು ಹಾವು ಜಗಿದು ವಿಡಿಯೋ ಹರಿಬಿಟ್ಟ ಭೂಪ

|
Google Oneindia Kannada News

ಚೆನ್ನೈ, ಮೇ 28: ಕೊರೊನಾ ಸೋಂಕು ಬರದಂತೆ ತಡೆಯಲು ತಾನು ಹಾವನ್ನು ಜಗಿದು ತಿನ್ನುತ್ತಿರುವ ವಿಡಿಯೋ ಮಾಡಿ ಹರಿಬಿಟ್ಟಿದ್ದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲು (50) ಎಂಬಾತನನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ್ದು, 7000 ರೂಪಾಯಿ ದಂಡ ವಿಧಿಸಿದ್ದಾರೆ.

ವಡಿವೇಲು ರೈತನಾಗಿದ್ದು, ಗದ್ದೆಯಲ್ಲಿ ಸತ್ತುಬಿದ್ದಿದ್ದ ವಿಷಕಾರಿ ಹಾವನ್ನು ಹಿಡಿದ ಆತ, ಅದನ್ನು ತಾನು ತಿನ್ನುತ್ತಿರುವ ವಿಡಿಯೋ ಮಾಡುವಂತೆ ಜೊತೆಯಿದ್ದವರಿಗೆ ಹೇಳಿದ್ದಾನೆ. ಕೊರೊನಾ ಸೋಂಕಿಗೆ ವಿರುದ್ಧವಾಗಿ ಹಾವಿನ ವಿಷ ಕೆಲಸ ಮಾಡುತ್ತದೆ. ಕೊರೊನಾ ಸೋಂಕನ್ನು ಈ ವಿಷ ದೂರವಿಡುತ್ತದೆ. ಹೀಗಾಗಿ ಸೋಂಕಿನಿಂದ ರಕ್ಷಿಸಿಕೊಳ್ಳಲು ತಾನು ಹಾವು ತಿನ್ನುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆನಂತರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜಿಲ್ಲಾ ಅರಣ್ಯಾಧಿಕಾರಿ ಆನಂದ್ ವಡಿವೇಲು ಬಂಧಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದ್ದಾರೆ.

ಮತಗಟ್ಟೆಯಲ್ಲಿ ನಾಗರಹಾವು ಕಂಡು ಬೆಚ್ಚಿಬಿದ್ದ ಅಧಿಕಾರಿಗಳು! ಮತಗಟ್ಟೆಯಲ್ಲಿ ನಾಗರಹಾವು ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!

ನಂತರ ಆತನನ್ನು ಬಂಧಿಸಿದ್ದು, ಹಾವನ್ನು ತಿಂದ ಕಾರಣಕ್ಕೆ 7000 ರೂ ದಂಡ ವಿಧಿಸಿದ್ದಾರೆ.

Tamil Nadu Man Chews Dead Snake To Keep Coronavirus Away Video Viral

ತನ್ನ ಜೊತೆಗಿದ್ದವರು ಹಾವು ತಿನ್ನುವಂತೆ ಪ್ರೇರೇಪಿಸಿದರು. ಆ ಸಮಯದಲ್ಲಿ ತಾನು ಮದ್ಯ ಕುಡಿದಿದ್ದೆ ಎಂದು ವಡಿವೇಲು ಹೇಳಿಕೆ ನೀಡಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದ್ದಾರೆ. ವಡಿವೇಲು ತಿಂದಿದ್ದ ಹಾವು ಅದಾಗಲೇ ಸತ್ತಿತ್ತು. ಅದೃಷ್ಟವಶಾತ್ ವಿಷವಿರುವ ಗ್ರಂಥಿಯನ್ನು ವಡಿವೇಲು ಜಗಿದಿಲ್ಲ. ಈ ಹಾವು ಅತ್ಯಂತ ವಿಷಕಾರಿ ಎಂದು ಹೇಳಿದ್ದಾರೆ.

English summary
Vadivelu, a resident of Perumapatti tamilnadu chewing on a dead common krait, a poisonous snake video viral, Claiming that snakes are a good COVID-19 antidote,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X