ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಹಾಗೂ ವಾಯವ್ಯ ಭಾರತದಲ್ಲಿ ಚಳಿ, ಗಾಳಿಮಳೆ: ಎಂಐಡಿ

|
Google Oneindia Kannada News

ಚೆನ್ನೈ, ಜನವರಿ 13: ಕೆಳ ಮೇಲ್ಮೈ ವಲಯದಲ್ಲಿ ಹಾಗೂ ಕೊಮೊರಿನ್ ಪ್ರದೇಶದಲ್ಲಿ ಬಿರುಗಾಳಿಯ ಪ್ರಭಾವದಿಂದಾಗಿ ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್, ಕೇರಳ ಹಾಗೂ ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಮುಂದಿನ ಎರಡು-ಮೂರು ದಿನಗಳ ಕಾಲ ಗುಡುಗು, ಸಿಡಿಲು ಕೂಡಿದ ಸಾಧಾರಣ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ(ಐಎಂಡಿ) ಹೇಳಿದೆ.

ಮೂರು ದಿನಗಳ ಬಳಿಕ ಈ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಇಳಿಕೆಯಾಗಲಿದೆ. ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನಲ್ಲಿ ಜನವರಿ 12 ಮತ್ತು 13ರಂದು ಹಾಗೂ ಕೇರಳ ಮತ್ತು ಮಾಹೆಗಳಲ್ಲಿ ಜನವರಿ 12ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಇದೆ.

Tamil Nadu, Kerala, Puducherry to witness heavy rainfall next 3 days

ದಕ್ಷಿಣ ಒಳನಾಡು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ದಕ್ಷಿಣ ಒಳನಾಡು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಉತ್ತರ ಭಾರತದಲ್ಲಿ ಭಾರೀ ಚಳಿ/ಶೀತದ ವಾತಾವರಣ ಸ್ಥಿತಿ:
ಉತ್ತರ ಮತ್ತು ವಾಯುವ್ಯದ ಗಾಳಿಯಿಂದಾಗಿ ಮುಂದಿನ ನಾಲ್ಕೈದು ದಿನ ವಾಯವ್ಯ ಭಾರತದ ಬಹುತೇಕ ಕಡೆ ತಾಪಮಾನ ಸಾಮಾನ್ಯಕ್ಕಿಂತ ಕನಿಷ್ಠಕ್ಕೆ ಇಳಿಕೆಯಾಗಲಿದೆ. ಇದರಿಂದಾಗಿ ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಚಳಿ/ಶೀತದ ವಾತಾವರಣ ಸ್ಥಿತಿಗತಿ ಸೃಷ್ಟಿಯಾಗುವ ಸಾಧ್ಯತೆ ಇದೆ.

Tamil Nadu, Kerala, Puducherry to witness heavy rainfall next 3 days

ಶೀತಗಾಳಿ ಮತ್ತು ಭಾರಿ ಶೀತದ ವಾತಾವರಣ ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದೆಹಲಿ ರಾಜ್ಯಗಳ ಹಲವೆಡೆ ನಿರ್ಮಾಣವಾಗುವ ಸಾಧ್ಯತೆ ಇದೆ ಮತ್ತು ಉತ್ತರ ಪ್ರದೇಶ, ಉತ್ತರ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಒಳನಾಡಿನಲ್ಲಿ ಶೀತದ ವಾತಾವರಣ ನಿರ್ಮಾಣವಾಗಲಿದೆ. ದಕ್ಷಿಣ ಪಂಜಾಬ್, ಹರಿಯಾಣ ಮತ್ತು ಚಂಡಿಗಢದ ಕೆಲವು ಒಳನಾಡು ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಪರಿಣಾಮ ಆಗುವ ಸಾಧ್ಯತೆ ಇದೆ ಮತ್ತು ಮುಂದಿನ ಎರಡು ದಿನಗಳ ಕಾಲ ಚಂಡಿಗಢ ಹಾಗೂ ಉತ್ತರ ರಾಜಸ್ಥಾನಗಳಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಮುಂದಿನ ನಾಲ್ಕೈದು ದಿನಗಳ ಅವಧಿಯಲ್ಲಿ ವಾಯವ್ಯ ಭಾರತದಲ್ಲಿ ಒಳನಾಡು ಪ್ರದೇಶಗಳಲ್ಲಿ ಭಾರೀ ಹಿಮ, ಮಂಜಿನ ವಾತಾವರಣ ಸೃಷ್ಟಿಯಾಗಲಿದೆ.

English summary
Kerala, Puducherry, Tamil Nadu likely to witness heavy rainfall will continue for next 3 days said Indian Meteorological Department(IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X