ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು, ಕೇರಳ,ಪುದುಚ್ಚೇರಿಯಲ್ಲಿ 3 ದಿನ ಮತ್ತೆ ಅಬ್ಬರದ ಮಳೆ

|
Google Oneindia Kannada News

ಚೆನ್ನೈ, ಜನವರಿ 12: ಕೇರಳ, ಪುದುಚೇರಿ ಹಾಗೂ ತಮಿಳುನಾಡಿನ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ವರದಿ ಮಾಡಿದೆ. ಚೆನ್ನೈ ಸೇರಿದಂತೆ ಅಕ್ಕಪಕ್ಕದ 9 ಜಿಲ್ಲೆಗಳಲ್ಲಿ ಕಳೆದ ವಾರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಬಂಗಾಳ ಕೊಲ್ಲಿಯಿಂದ ಬರುತ್ತಿರುವ ನೈಋತ್ಯ ಮಳೆ ಮಾರುತಗಳು ವ್ಯಾಪಕ ಮಳೆಗೆ ಕಾರಣವಾಗಲಿದೆ. ಗುಡುಗು, ಮಿಂಚು ಸಹಿತ ಮಳೆ ತಮಿಳುನಾಡು, ಪುದುಚ್ಚೇರಿ, ಕಾರೈಕಲ್, ಮಾಹೆ ಹಾಗೂ ಲಕ್ಷದೀಪಗಳಲ್ಲಿ ಮುಂದಿನ 3 ದಿನಗಳ ಕಾಲ ಮುಂದುವರೆಯಲಿದೆ. ನಂತರ ಮಳೆ ಕ್ಷೀಣಿಸಲಿದೆ ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ಹಲವೆಡೆ ಅನಿರೀಕ್ಷಿತ ಮಳೆಗೆ ಕಾರಣವೇನು?ಕರ್ನಾಟಕದ ಹಲವೆಡೆ ಅನಿರೀಕ್ಷಿತ ಮಳೆಗೆ ಕಾರಣವೇನು?

ಜನವರಿ 11 ಹಾಗೂ 12ರಂದು ತಮಿಳುನಾಡು, ಪುದುಚ್ಚೇರಿ, ಕೇರಳ ಹಾಗೂ ಕಾರೈಕಲ್ ಪ್ರದೇಶದಲ್ಲಿ ಭಾರಿ ಮಳೆ ಸುರಿಯಲಿದ್ದು, ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Tamil Nadu, Kerala, Puducherry, likely to witness heavy rainfall: IMD

ಚೆನ್ನೈ ಸೇರಿದಂತೆ 9 ಜಿಲ್ಲೆಗಳಲ್ಲಿ ಮಳೆ, ಜನಜೀವನ ತತ್ತರ ಚೆನ್ನೈ ಸೇರಿದಂತೆ 9 ಜಿಲ್ಲೆಗಳಲ್ಲಿ ಮಳೆ, ಜನಜೀವನ ತತ್ತರ

ದಕ್ಷಿಣ ತಮಿಳುನಾಡು ಭಾಗದಲ್ಲಿ ಮುಖ್ಯವಾಗಿ ತಿರುಚನಾಪಲ್ಲಿ, ಕರೂರು, ಅರಿಯಾಲೂರು, ಪೆರಂಬಲೂರು, ವಿಲ್ಲುಪುರಂ, ಕಡಲೂರು, ಮಯಿಲದುಥುರೈ, ನಾಗಪಟ್ಟಿಣಂ, ತಂಜಾವೂರು, ತಿರುವರೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಇಲಾಖೆ ಕೂಡಾ ಮುನ್ಸೂಚನೆ ನೀಡಿದೆ.

English summary
Kerala, Puducherry, Tamil Nadu likely to witness heavy rainfall in next 24 hours and it will continue for next 3 days said Indian Meteorological Department(IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X