ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದಿಂದ ಕಮಲ್ ಹಾಸನ್ ಚುನಾವಣಾ ಪ್ರಚಾರ ಶುರು

|
Google Oneindia Kannada News

ಚೆನ್ನೈ, ಡಿಸೆಂಬರ್ 10: ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ಪ್ರಸ್ತುತ ಇರುವ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲೇ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ಏಪ್ರಿಲ್ ತಿಂಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಸಕ್ರಿಯವಾಗಲು ಆರಂಭಿಸಿವೆ. ಸೂಪರ್ ಸ್ಟಾರ್ ರಜನಿಕಾಂತ್ ಜನವರಿಯಲ್ಲಿ ತಮ್ಮಹೊಸ ಪಕ್ಷ ಸ್ಥಾಪನೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಆದರೆ ಮತ್ತೊಬ್ಬ ನಟ, ರಾಜಕಾರಣಿ ಕಮಲ ಹಾಸನ್ ಅವರು ಈಗಲೇ ಚುನಾವಣಾ ಪ್ರಚಾರಕ್ಕೆ ಕಾಲಿರಿಸುತ್ತಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ: ನಟ ಕಮಲ ಹಾಸನ್ ಸ್ಪರ್ಧೆ ಖಚಿತತಮಿಳುನಾಡು ವಿಧಾನಸಭೆ ಚುನಾವಣೆ: ನಟ ಕಮಲ ಹಾಸನ್ ಸ್ಪರ್ಧೆ ಖಚಿತ

ಮಕ್ಕಳ್ ನೀಧಿ ಮೈಯಮ್ (ಎಂಎನ್‌ಎಂ) ಮುಖ್ಯಸ್ಥರಾಗಿರುವ ಕಮಲ್ ಹಾಸನ್ 2021ರ ತಮಿಳುನಾಡು ವಿಧಾನಸಭೆ ಚುನಾವಣೆಯ ತಮ್ಮ ಪ್ರಚಾರವನ್ನು ಡಿಸೆಂಬರ್ 13ರಂದು ಆರಂಭಿಸಲಿದ್ದಾರೆ ಎಂದು ಅವರ ಪಕ್ಷ ಗುರುವಾರ ತಿಳಿಸಿದೆ.

Tamil Nadu: Kamal Haasan To Launch Election Campaign On Dec 13

ಡಿ. 13 ರಿಂದ 16ರವರೆಗೆ ಮೊದಲ ಹಂತದಲ್ಲಿ ಕಮಲ್ ಹಾಸನ್ ಅವರು ಪ್ರಚಾರ ನಡೆಸಲಿದ್ದಾರೆ. ನಾಲ್ಕು ದಿನಗಳ ಅವಧಿಯ ಪ್ರಚಾರದಲ್ಲಿ ಅವರು ಮದುರೈ, ಥೇಣಿ, ದಿಂಡಿಗಲ್, ವಿರುದ್ಧನಗರ್, ತಿರುನೆಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಎಂಎನ್‌ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಮಲ್ ಹಾಸನ್ ಅವರು 2018ರ ಫೆಬ್ರವರಿಯಲ್ಲಿ ತಮ್ಮ ಪಕ್ಷವನ್ನು ಸ್ಥಾಪಿಸಿದ್ದರು. ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದರೆ ಗೆಲುವಿನ ಆರಂಭ ಸಿಕ್ಕಿರಲಿಲ್ಲ.

English summary
Kamal Haasan to launch the first phase of his MNM party's campaign for Tamil Nadu assembly elections 2021 on December 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X