ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿ ಬೆಂಬಲಕ್ಕೆ ಕಮಲ್! ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಯ ಗಾಳಿ

|
Google Oneindia Kannada News

Recommended Video

ತಮಿಳುನಾಡು ರಾಜಕೀಯದಲ್ಲಿ ಬದಲಾವಣೆಯ ಗಾಳಿ | Oneindia Kannada

ಚೆನ್ನೈ, ನವೆಂಬರ್ 15: "ತಮಿಳುನಾಡು ರಾಜಕೀಯದಲ್ಲಿ ನಿರ್ವಾತ ಸೃಷ್ಟಿಯಾಗಿದೆ" ಎಂಬ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹೇಳಿಕೆಗೆ ಬೆಂಬಲ ನೀಡಿದ ಬಹುಭಾಷಾ ನಟ ಕಮಲ್ ಹಾಸನ್, "ತಮಿಳುನಾಡು ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ" ಎಂದಿದ್ದಾರೆ.

ಈ ಇಬ್ಬರು ಮಹಾನ್ ನಟರು ಇದ್ದಕ್ಕಿದ್ದಂತೆಯೇ ಒಂದೇ ರೀತಿಯ ಹೇಳಿಕೆ ನೀಡುತ್ತಿರುವುದಕ್ಕೆ, ತಮಿಳುನಾಡಿನ ರಾಜಕೀಯದ ಕುರಿತು ಕಳವಳ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣವಿದೆ.

ಮಾಜಿ ಮುಖ್ಯಮಂತ್ರಿಗಳಾಗಿದ್ದ ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದ ನಂತರ ತಮಿಳುನಾಡಿನ ರಾಜಕೀಯದಲ್ಲಿ ದೊಡ್ಡದೊಂದು ನಿರ್ವಾತ ಸೃಷ್ಟಿಯಾಗಿದ್ದು ನೂರಕ್ಕೆ ನೂರು ಪ್ರತಿಶತ ಸತ್ಯ.

ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ!ಮರೀನಾಬೀಚ್ ನ ಮಣ್ಣಲ್ಲಾದರೂ ಒಂದಾಗಲಿ ಜಯಲಲಿತಾ-ಕರುಣಾನಿಧಿ!

ಆದರೆ ಆ ನಿರ್ವಾತವನ್ನು ತುಂಬುವವರ್ಯಾರು ಎಂದರೆ ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಎಐಎಡಿಎಂಕೆಯಲ್ಲಾಗಲೀ, ಡಿಎಂಕೆಯಲ್ಲಾಗಲೀ ಒಂದೇ ಒಂದು ಸಮರ್ಥ ಮುಖವೂ ಗೋಚರವಾಗುವುದಿಲ್ಲ!

ನಮ್ಮಲ್ಲಿ ಮಹಾನ್ ನಾಯಕರಿದ್ದರು, ಆದರೆ ಈಗಿಲ್ಲ!

ನಮ್ಮಲ್ಲಿ ಮಹಾನ್ ನಾಯಕರಿದ್ದರು, ಆದರೆ ಈಗಿಲ್ಲ!

"ನಮ್ಮ ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುವ ಒಬ್ಬನೇ ಒಬ್ಬ ಮುಖಂಡನೂ ಇಲ್ಲ. ನಮ್ಮಲ್ಲಿ ಅತ್ಯುತ್ತಮ ನಾಯಕರಿದ್ದರು ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈಗಿನ ಬಗ್ಗೆ ಯೋಚಿಸುವುದಕ್ಕೆ ಹೋದರೆ ಅಂಥ ಒಬ್ಬ ನಾಯಕರೂ ನಮ್ಮ ಜೊತೆಯಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದಾರೆ.

ನಾಯಕರೂ ಬೇಕಾಗಿದ್ದಾರೆ!

ನಾಯಕರೂ ಬೇಕಾಗಿದ್ದಾರೆ!

"ತಮಿಳುನಾಡು ಸದ್ಯಕ್ಕೆ ಉತ್ತಮ ನಾಯಕರ ಕೊರತೆಯಿಂದ ಬಳಲುತ್ತಿದೆ. ರಾಜಕೀಯ ನಿರ್ವಾತ ಎದ್ದು ಕಾಣುತ್ತಿದೆ" ಎಂದು ರಜನೀಕಾಂತ್ ಕಳೆದ ವಾರ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯಿಂದ ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪಕ್ಷಗಳೂ ಇರಿಸುಮುರಿಸು ಅನುಭವಿಸಿದ್ದವು. ತಲೈವ ಹೇಳಿಕೆಗೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿದ್ದವು.

ವೈರಲ್ ಆದ ಜಯಲಲಿತಾ ಆಸ್ಪತ್ರೆ ಬಿಲ್! ಲೀಕ್ ಆಗಿದ್ದು ಹೇಗೆ?ವೈರಲ್ ಆದ ಜಯಲಲಿತಾ ಆಸ್ಪತ್ರೆ ಬಿಲ್! ಲೀಕ್ ಆಗಿದ್ದು ಹೇಗೆ?

ವಿರೋಧ ವ್ಯಕ್ತಪಡಿಸದ ನಾಯಕರು

ವಿರೋಧ ವ್ಯಕ್ತಪಡಿಸದ ನಾಯಕರು

ಉಭಯ ನಟರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ ರಾಜಕೀಯ ನಾಯಕರು, "ಕಮಲ್ ಹಾಸನ್ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಕೊನೆಯಾಗುತ್ತಿದೆ ಎಂಬ ಆತಂಕ ಎದುರಾಗಿದೆ. ಆದ್ದರಿಂದಲೇ ಇಂಥ ಹೇಳಿಕೆ ನೀಡಿದ್ದಾರೆ" ಎಂದಿದ್ದರು. ಜೊತೆಗೆ ರಜನೀಕಾಂತ್ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಯೂ ಇದ್ದು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಅವರು ಇಂಥ ಹೇಳಿಕೆ ನೀಡಿದ್ದಾರೆ ಎಂದೂ ಹೇಳಲಾಗಿತ್ತು.

ವದಂತಿ ತಳ್ಳಿ ಹಾಕಿದ ಸೂಪರ್ ಸ್ಟಾರ್

ವದಂತಿ ತಳ್ಳಿ ಹಾಕಿದ ಸೂಪರ್ ಸ್ಟಾರ್

"ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿಗೆ ಅರ್ಥವಿಲ್ಲ. ಬಿಜೆಪಿ ನನ್ನನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ವದಂತಿ ಎಷ್ಟು ಸುಳ್ಳೋ, ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ನಾನು ಯಾರ ಬಲೆಗೂ ಬೀಳುವುದಕ್ಕೆ ಇಷ್ಟಪಡುವುದಿಲ್ಲ" ಎಂದು ರಜನೀಕಾಂತ್ ಸಮಜಾಯಿಷಿ ನೀಡಿದ್ದರು.

ಜಯಲಲಿತಾ, ಕರುಣಾನಿಧಿ ಸಾವು

ಜಯಲಲಿತಾ, ಕರುಣಾನಿಧಿ ಸಾವು

ಅನಾರೋಗ್ಯದ ಕಾರಣ 2016 ರ ಸೆಪ್ಟೆಂಬರ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಐಎಡಿಎಂಕೆ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಡಿಸೆಂಬರ್ 5, 2016 ರಂದು ಇಹಲೋಕ ತ್ಯಜಿಸಿದ್ದರು. ಡಿಎಂಕೆ ನಾಯಕ ಕರುಣಾನಿಧಿ ಅವರು 2018 ರ ಆಗಸ್ಟ್ 7ರಂದು ವಯೋಸಹಜ ಅನಾರೋಗ್ಯದ ಕಾರಣ ನಿಧನರಾಗಿದ್ದರು. ಅವರಿಬ್ಬರ ಮರಣಾನಂತರ ತಮಿಳುನಾಡು ರಾಜಕೀಯದಲ್ಲಿ ನಿರ್ವಾತ ಸೃಷ್ಟಿಯಾಗಿತ್ತು. ಅಭಿಮಾನಿಗಳ ಹೃದಯದ್ದಲ್ಲಿ 'ಅಮ್ಮಾ' ಆಗಿ ನೆಲೆನಿತಿದ್ದ ಜಯಲಲಿತಾ, 'ಕಲೈನಾರ್' ಆಗಿ ನೆಲೆ ನಿಂತಿದ್ದ ಕರುಣಾನಿಧಿ ಅವರ ಸ್ಥಾನವನ್ನು ಮತ್ತೊಬ್ಬರು ತುಂಬುವುದಕ್ಕೆ ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಬದಲಾವಣೆಯ ಗಾಳಿ?

ಬದಲಾವಣೆಯ ಗಾಳಿ?

ನಟ ಕಮಲ್ ಹಾಸನ್ ಅವರು ಮಕ್ಕಳ್ ನೀತಿ ಮಯ್ಯಂ ಹೆಸರಿನಲ್ಲಿ ಈಗಾಗಲೇ ತಮ್ಮದೆ ಆದ ಒಂದು ರಾಜಕೀಯ ಪಕ್ಷ ಕಟ್ಟಿದ್ದಾರೆ. ರಜನೀಕಾಂತ್ ಅವರೂ ರಾಜಕೀಯ ಪ್ರವೇಶಿಸಬಹುದು ಎಂಬ ವದಂತಿ ಹಬ್ಬಿದೆ. ತಮ್ಮ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ನಿರ್ವಾತವನ್ನು ತುಭಲು, ರಾಜಕೀಯದಲ್ಲಿ ಬದಲಾವನೆಯ ಗಾಳಿ ಬೀಸುವಂತೆ ಮಾಡಲು ಈ ಇಬ್ಬರು ಸ್ಟಾರ್ ನಟರು ಮುಂದಾಗುತ್ತಾರಾ?

English summary
Tamil Nadu Famous Actor Kamal Haasan Backs Ssupre Star Rajinikanth For His 'Political Vacuu statement',
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X