ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್ ಉದ್ಘಾಟನೆ ದಿನ 10 ರೂ.ಗೆ ಬಿರಿಯಾನಿ ಮಾರಿದವನ ಬಂಧನ

|
Google Oneindia Kannada News

ಚೆನ್ನೈ, ಅಕ್ಟೋಬರ್ 20: ಹೋಟೆಲ್ ತೆರೆದ ಮೊದಲ ದಿನ ಜನರನ್ನು ಆಕರ್ಷಿಸಲು ಕೇವಲ 10 ರೂ.ಗೆ ಒಂದು ಪ್ಲೇಟ್ ಬಿರಿಯಾನಿ ಮಾರಿದ ಹೋಟೆಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವಿರುಧಾನಗರ ಜಿಲ್ಲೆಯ ಅರುಪ್ಪುಕೊಟ್ಟೈ ಎಂಬಲ್ಲಿ ಈ ಘಟನೆ ನಡೆದಿದೆ.

ಕೋವಿಡ್ ಸೋಂಕಿನ ಭೀತಿಯ ನಡುವೆ ಹೊಸ ಹೋಟೆಲ್ ತೆರೆದಿದ್ದ 29 ವರ್ಷದ ಮಾಲೀಕ, ಜನರನ್ನು ಸೆಳೆಯಲು ಕೇವಲ 10 ರೂಪಾಯಿಗೆ ಬಿರಿಯಾನಿ ನೀಡುವ ಜಾಹೀರಾತು ಕೊಟ್ಟಿದ್ದರು. ಇದರಿಂದ ಭಾನುವಾರ ಅವರ ಹೋಟೆಲ್ ಮುಂದೆ ನೂರಾರು ಮಂದಿ ಸರದಿಯಲ್ಲಿ ನಿಂತಿದ್ದರು. ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸಿ ಜನರು ಗುಂಪುಗೂಡುವಂತೆ ಮಾಡಿದ್ದಕ್ಕಾಗಿ ಹೋಟೆಲ್ ಮಾಲೀಕನನ್ನು ಬಂಧಿಸಲಾಗಿದೆ.

ಕೊವಿಡ್ ನಿಯಮ ಉಲ್ಲಂಘನೆ: ಶಿವರಾಜ್‌ಸಿಂಗ್ ಚೌಹಾಣ್ ವಿರುದ್ಧ ಪ್ರಕರಣ ದಾಖಲುಕೊವಿಡ್ ನಿಯಮ ಉಲ್ಲಂಘನೆ: ಶಿವರಾಜ್‌ಸಿಂಗ್ ಚೌಹಾಣ್ ವಿರುದ್ಧ ಪ್ರಕರಣ ದಾಖಲು

ಅರುಪ್ಪುಕೊಟ್ಟೈನಲ್ಲಿ ಹೊಸ ಹೋಟೆಲ್ ತೆರೆದಿದ್ದ ಜಾಹೀರ್ ಹುಸೇನ್, ಒಂದು ಪ್ಲೇಟ್ ಬಿರಿಯಾನಿಗೆ ಕೇವಲ 10 ರೂ. ಎಂದು ಪ್ರಚಾರ ನಡೆಸಿದ್ದರು. ಈ ಆಫರ್ ಭಾನುವಾರ ಬೆಳಿಗ್ಗೆ 11 ರಿಂದ 1ರವರೆಗೆ ಕೇವಲ ಎರಡು ಗಂಟೆ ಇರಲಿದೆ ಎಂದು ತಿಳಿಸಿದ್ದರು. ಇದನ್ನು ತಿಳಿದ ಜನರು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಹೋಟೆಲ್ ಮುಂದೆ ಜಮಾಯಿಸಿದ್ದರು. ಆದರೆ ಯಾರೊಬ್ಬರೂ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಿರಲಿಲ್ಲ. ಬೀದಿಯಲ್ಲಿ ಅಡ್ಡಾದಿಡ್ಡಿ ನಿಂತಿದ್ದ ಜನರು, ವಾಹನಗಳ ಓಡಾಡಕ್ಕೂ ಅಡ್ಡಿಪಡಿಸಿದ್ದರು.

Tamil Nadu: Hotelier Arrested Who Sold Biriyani At Rs 10 As Inaugural Day Offer

Recommended Video

Mysore Dasara : ಮೈಸೂರಿನಿಂದ ವಿಶೇಷ Trains ನಿಮಗೋಸ್ಕರ!! | Oneindia Kannada

ಸುಮಾರು 2,500 ಪ್ಯಾಕೆಟ್ ಬಿರಿಯಾನಿಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ಅರ್ಧದಷ್ಟು ಖರ್ಚಾಗುವ ಮುನ್ನವೇ ಪ್ರವೇಶಿಸಿದ ಪೊಲೀಸರು ಜಾಹೀರ್‌ನನ್ನು ಬಂಧಿಸಿದರು.

English summary
Tamil Nadu police have arrested hotelier Zahir Hussain who broke Covid norms while selling biriyani at Rs 10 as inaugural day offer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X