ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿಗಾರಿಕೆ ಕೇಸಲ್ಲಿ ಕರುಣಾನಿಧಿ ಮೊಮ್ಮಗ; ಇಡಿಯಿಂದ 40 ಕೋಟಿ ಜಪ್ತಿ

By ಅನಿಲ್ ಆಚಾರ್
|
Google Oneindia Kannada News

ಚೆನ್ನೈ, ಏಪ್ರಿಲ್ 24: ಕೇಂದ್ರದ ಮಾಜಿ ಸಚಿವ ಎಂ.ಕೆ.ಅಳಗಿರಿ ಅವರ ಮಗ, ಕರುಣಾನಿಧಿ ಮೊಮ್ಮಗ ದಯಾನಿಧಿ ಹೆಸರು ತಳುಕು ಹಾಕಿಕೊಂಡಿರುವ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಒಲಿಂಪಸ್ ಗ್ರಾನೈಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸೇರಿದ 40.34 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಇಡಿ) ಜಪ್ತಿ ಮಾಡಿಕೊಂಡಿದೆ.

ವಿಶೇಷ ಪುಟ

ಚೆನ್ನೈ, ಮದುರೈನಲ್ಲಿರುವ ಇಪ್ಪತ್ತೈದು ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಪ್ತಿ ಮಾಡಲಾಗಿದೆ. ತಮಿಳುನಾಡು ಪೊಲೀಸರು ಕಂಪೆನಿ, ಅದರ ನಿರ್ದೇಶಕರು ಹಾಗೂ ಇತರರ ವಿರುದ್ಧ ಎಫ್ ಐಆರ್ ಮತ್ತು ಆರೋಪ ಪಟ್ಟಿ ಸಲ್ಲಿಸಿದ್ದರು.

ಕಂಪೆನಿ, ಅದರ ಷೇರುದಾರರು, ಪ್ರವರ್ತಕರು, ನಿರ್ದೇಶಕರಾದ ಎಸ್.ನಾಗರಾಜನ್ ಮತ್ತು ಆಳಗಿರಿ ದಯಾನಿಧಿ ಜತೆಗೆ ಇತರರು ಕ್ರಿಮಿನಲ್ ಪಿತೂರಿ ನಡೆಸಿ, ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಇದರಿಂದ ಸರಕಾರಕ್ಕೆ ನಷ್ಟ ಮಾಡಿ, ತಪ್ಪಾದ ದಾರಿಯಲ್ಲಿ ಸ್ವಂತಕ್ಕೆ ಲಾಭ ಮಾಡಿಕೊಂಡಿದ್ದಾರೆ ಎಂದು ನಿರ್ದೇಶನಾಲಯವು ತಿಳಿಸಿದೆ.

Tamil Nadu granite scam: ED attaches properties worth 40 crore

ಒಲಿಂಪಸ್ ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಆರೋಪಿಗಳು ಕಾನೂನುಬಾಹಿರವಾಗಿ ಗಣಿಗಾರಿಕೆಯಲ್ಲಿ ತೊಡಗಿಕೊಂಡು, ನಗದನ್ನು ವಾಣಿಜ್ಯ ಆದಾಯ ಎಂಬುದಾಗಿ ತೋರಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.

English summary
The Enforcement Directorate has attached properties worth ₹40.34 crore of Olympus Granites Private Limited and others in connection with an alleged illegal mining case involving Durai alias Dayanidhi Alagiri, son of former Union Minister M.K. Alagiri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X