ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ಜಯಲಲಿತಾ ವೇದ ನಿಲಯಂ ಸ್ಮಾರಕ

|
Google Oneindia Kannada News

ಚೆನ್ನೈ, ಜನವರಿ 28: ತಮಿಳರ ಪಾಲಿನ ''ಅಮ್ಮ'', ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಪೊಯೆಸ್ ಗಾರ್ಡನ್ ನಿವಾಸ ವೇದ ನಿಲಯಂ ಇಂದು ಸ್ಮಾರಕವಾಗಿ ಲೋಕಾರ್ಪಣೆಗೊಂಡಿದೆ. ಜನವರಿ 28ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ರಾಜ್ಯ ಸಚಿವರು, ಎಐಎಡಿಎಂಕೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಜೆ ಜಯಲಲಿತಾಗೆ ಸೇರಿದ 900 ಕೋಟಿ ಆಸ್ತಿ ದೀಪಾ, ದೀಪಕ್ ಪಾಲುಜೆ ಜಯಲಲಿತಾಗೆ ಸೇರಿದ 900 ಕೋಟಿ ಆಸ್ತಿ ದೀಪಾ, ದೀಪಕ್ ಪಾಲು

ಚುನಾವಣೆಗಾಗಿ ಸ್ಮಾರಕ ನಿರ್ಮಾಣ ಮಾಡಲು ಎಐಎಡಿಎಂಕೆ ಹೊರಟಿದೆ. ರಾಜಕೀಯ ಉದ್ದೇಶಕ್ಕಾಗಿ ಮಾತ್ರ ಜಯಲಲಿತಾರನ್ನು ಬಳಸಿಕೊಳ್ಳಲು ಯತ್ನಿಸಿದ್ದು, ಅವರಂಥ ದಿಗ್ಗಜರನ್ನು ಸರಿಯಾಗಿ ಗೌರವಿಸಿ, ಸ್ಮಾರಕ ರಚಿಸುವ ಗೋಜಿಗೆ ಸರ್ಕಾರ ಹೋಗಿಲ್ಲ ಎಂದು ಜಯಲಲಿತಾ ಅವರ ಸೋದರ ಸೊಸೆ ದೀಪಾ ಅವರು ಆಕ್ಷೇಪ ವ್ಯಕ್ತಪಡಿಸಿ ಕಾನೂನು ಸಮರ ಸಾರಿದ್ದನ್ನು ಇಲ್ಲಿ ಸ್ಮರಿಸಬಹುದು.

1967ರಲ್ಲಿ ಜಯಲಲಿತಾ ತಾಯಿಯಿಂದ ಮನೆ ಖರೀದಿ

1967ರಲ್ಲಿ ಜಯಲಲಿತಾ ತಾಯಿಯಿಂದ ಮನೆ ಖರೀದಿ

1967ರಲ್ಲಿ ಜಯಲಲಿತಾ ಅವರ ತಾಯಿ ನಟಿ ಸಂಧ್ಯಾರಿಂದ ಮನೆ ಖರೀದಿಯಾಗಿದ್ದು, 1.32 ಲಕ್ಷ ರು ನೀಡಿದ್ದರು. ಸುಮಾರು 44 ವರ್ಷ ಜಯಲಲಿತಾ ಅವರು ನೆಲೆಸಿದ್ದರು. 1968ರ ಮೇ 15ರಂದು ಗೃಹಪ್ರವೇಶ ಮಾಡಲಾಗಿತ್ತು. ಜಯಲಲಿತಾ ಆಪ್ತೆ ವಿಕೆ ಶಶಿಕಲಾ ಕೂಡಾ ಇಲ್ಲೇ ವಾಸಿಸುತ್ತಿದ್ದರು. ಜಯಲಲಿತಾ ಅವರ ಮನೆಯಲ್ಲಿ ಚಿನ್ನಾಭರಣ, ಬೆಲೆ ಬಾಳುವ ಪೀಠೋಪಕರಣ ಬಗ್ಗೆ ಕುತೂಹಲ ಸಹಜ, ಆದರೆ, ವೇದ ನಿಲಯಂನಲ್ಲಿ ಸುಮಾರು 8,376ಕ್ಕೂ ಪುಸ್ತಕಗಳ ಲೈಬ್ರರಿ ಇದೆ ಎಂದರೆ ಅಚ್ಚರಿಯಾಗಬಹುದು.

ವೇದ ನಿಲಯಂ ಆಸ್ತಿ ಹಂಚಿಕೆ ವಿವಾದ

ವೇದ ನಿಲಯಂ ಆಸ್ತಿ ಹಂಚಿಕೆ ವಿವಾದ

ಚೆನ್ನೈ ನಗರ ಪ್ರತಿಷ್ಠಿತ ಪೊಯೆಸ್ ಗಾರ್ಡನ್ ಬಡಾವಣೆಯಲ್ಲಿರುವ ಜಯಲಿತಾ ಅವರು ವಾಸಿಸುತ್ತಿದ್ದ ವೇದ ನಿಲಯಂ ನಿವಾಸದ ಆಸ್ತಿ ಹಂಚಿಕೆ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆಡಳಿತಾರೂಢ ಎಐಎಡಿಎಂಕೆ ಸರ್ಕಾರವು ಜಯಾ ಅವರಿಗೆ ಸೇರಿದ ''ವೇದ ನಿಲಯಂ'' ವಶ ಪಡಿಸಿಕೊಂಡು ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಂತೆ ಪರಿವರ್ತಿಸಲು ಕೋರ್ಟ್ ಅನುಮತಿ ನೀಡಿತ್ತು.

ವೇದಾ ನಿಲಯಂ ನಿವಾಸದ ಒಂದು ಭಾಗವನ್ನು ಸ್ಮಾರಕವಾಗಿ ಬಳಸಬಹುದು, ಮಿಕ್ಕ ಆಸ್ತಿ ಮೌಲ್ಯ 913, 42,68,179 ರು ಅರ್ಜಿದಾರರಾದ ದೀಪಕ್ ಹಾಗೂ ದೀಪಾ ಅವರಿಗೆ ಸಲ್ಲತಕ್ಕದ್ದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಲಾಗಿತ್ತು

ದೀಪಾ ವಿರುದ್ಧ ಎಐಎಡಿಎಂಕೆ ನಾಯಕರು ಕಿಡಿ

ದೀಪಾ ವಿರುದ್ಧ ಎಐಎಡಿಎಂಕೆ ನಾಯಕರು ಕಿಡಿ

ದೀಪಾ ವಿರುದ್ಧ ಎಐಎಡಿಎಂಕೆ ನಾಯಕರು ಡಿಸೆಂಬರ್ 05, 2016ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ರಾಧಾಕೃಷ್ಣನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರವನ್ನು ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದರು. ಜಯಾ ಅವರ ಆಸ್ತಿ ಹಕ್ಕು ಪಡೆಯಲು ದೀಪಾ, ದೀಪಕ್ ವಿರುದ್ಧವಾಗಿ ಎಐಎಡಿಎಂಕೆಯ ಕೆ ಪುಗಳೇಂದಿ ಹಾಗೂ ಪಿ ಜಾನಕಿರಾಮನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಸ್ಮಾರಕವಾಗಿ ಬಳಸಲು ಅನುಮತಿ ನೀಡಿದ ಕೋರ್ಟ್

ಸ್ಮಾರಕವಾಗಿ ಬಳಸಲು ಅನುಮತಿ ನೀಡಿದ ಕೋರ್ಟ್

ಖಾಸಗಿ ಅಧೀನದಲ್ಲಿರುವ ಭೂ ಪ್ರದೇಶವನ್ನು ವಶ ಪಡಿಸಿಕೊಳ್ಳುವ ಕಾಯ್ದೆ 2013ರಲ್ಲಿ ತಿದ್ದುಪಡಿಯಾಗಿದೆ. ಚಿನ್ನ, ಬೆಳ್ಳಿ, ಆಭರಣ, ಬೆಲೆ ಬಾಳುವ ವಸ್ತು, ವಾಹನಾದಿಗಳನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಹಕ್ಕಿಲ್ಲ. ಹೀಗಾಗಿ ಕೋರ್ಟ್ ಈ ಬಗ್ಗೆ ಗಮನ ಹರಿಸಿ, ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ವೇದ ನಿಲಯಂ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರುತ್ತೇನೆ ಎಂದು ಜಯಲಲಿತಾ ಅವರ ಸೊಸೆ ದೀಪಾ ಮನವಿ ಮಾಡಿದ್ದರು. ಆದರೆ, ಕೋರ್ಟ್ ಇದಕ್ಕೆ ವ್ಯತಿರಿಕ್ತವಾಗಿ ಆದೇಶ ನೀಡಿ ಸ್ಮಾರಕವಾಗಿ ಬಳಸಲು ಅನುಮತಿ ನೀಡಿದೆ.

English summary
Tamil Nadu CM Palaniswami unveils former CM J. Jayalalithaa's 'Veda Nilayam' residence at Poes Garden as a memorial and its opened for public on January 28
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X