ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬರಲಿದೆ 2 ಸಾವಿರ ಮಿನಿ ಕ್ಲಿನಿಕ್

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 09 : ಸಾಮಾನ್ಯ ಆರೋಗ್ಯ ಸಮಸ್ಯೆಗಳು, ಜ್ವರಕ್ಕೆ ಚಿಕಿತ್ಸೆ ಪಡೆಯಲು ಮಿನಿ ಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ಕಡೆ ಈ ಕ್ಲಿನಿಕ್‌ಗಳು ಸ್ಥಾಪನೆಯಾಗಲಿವೆ.

Recommended Video

ಪೋಷಕರೇ ಮಕ್ಕಳನ್ನ school ಕಳುಹಿಸಲು ರೆಡಿಯಾಗಿ..! | Oneindia Kannada

ತಮಿಳುನಾಡು ಸರ್ಕಾರ ರಾಜ್ಯದಲ್ಲಿ 2 ಸಾವಿರ ಮಿನಿ ಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಜನರು ಈ ಕ್ಲಿನಿಕ್‌ಗಳಲ್ಲಿ ಜ್ವರ, ಸಾಮಾನ್ಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಬಹುದು.

ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ

ಮಿನಿ ಕ್ಲಿನಿಕ್‌ನಲ್ಲಿ ಒಬ್ಬರು ವೈದ್ಯರು, ನರ್ಸ್ ಮತ್ತು ಒಬ್ಬರು ಸಹಾಯಕರು ಇರುತ್ತಾರೆ. ಈ ಕ್ಲಿನಿಕ್‌ಗಳಿಗೆ ಬೇಕಾದ ವ್ಯವಸ್ಥೆ ಮತ್ತು ಔಷಧಿಗಳನ್ನು ಸರ್ಕಾರ ಪೂರೈಕೆ ಮಾಡಲಿದೆ.

ಬೆಂಗಳೂರು; ಕೋವಿಡ್ ಪರೀಕ್ಷೆಗೆ ಫೀವರ್ ಕ್ಲಿನಿಕ್ ಹುಡುಕುವುದು ಹೇಗೆ? ಬೆಂಗಳೂರು; ಕೋವಿಡ್ ಪರೀಕ್ಷೆಗೆ ಫೀವರ್ ಕ್ಲಿನಿಕ್ ಹುಡುಕುವುದು ಹೇಗೆ?

Tamil Nadu Govt To Start Mini Clinic To Treat For Ordinary Fever

ಪ್ರಸ್ತುತ ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಪ್ರತಿ ದಿನ 85 ಸಾವಿರ ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಆರೋಗ್ಯ ಸೇವೆಗೆ ತೊಂದರೆ ಆಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ.

ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು

ಭಾರತದಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ತಮಿಳುನಾಡು 3ನೇ ಸ್ಥಾನದಲ್ಲಿದೆ. ಮಂಗಳವಾರದ ಮಾಹಿತಿಯಂತೆ 4,74,940 ಸೋಂಕಿತರು ರಾಜ್ಯದಲ್ಲಿದ್ದಾರೆ.

ತಮಿಳುನಾಡಿನಲ್ಲಿ ಚೆನ್ನೈ ನಗರದಲ್ಲಿ ಹೆಚ್ಚು ಸೋಂಕಿತರು ಇದ್ದಾರೆ. ಮಂಗಳವಾರದ ವರದಿಯಂತೆ ನಗರದಲ್ಲಿ 1,43,602 ಸೋಂಕಿತರು ಇದ್ದಾರೆ. ಕೋವಿಡ್ ಪರೀಕ್ಷೆ ಸಮಯದಲ್ಲಿ ಪಿಎಚ್‌ಸಿ ಮೇಲೆ ಹೆಚ್ಚು ಒತ್ತಡ ಬೀಳದಂತೆ ತಡೆಯಲು ಮಿನಿ ಕ್ಲಿನಿಕ್ ಸ್ಥಾಪನೆಯಾಗುತ್ತಿದೆ.

English summary
Tamil Nadu government will set up 2,000 mini clinics in the state. People who have health issue like ordinary fever can treat in the clinic in the time of COVID pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X