ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಪಲ್ಲಕ್ಕಿ ಉತ್ಸವ ಮೇಲಿನ ನಿಷೇಧ ಆದೇಶ ಹಿಂಪಡೆದ ತಮಿಳುನಾಡು

|
Google Oneindia Kannada News

ಚೆನ್ನೈ, ಮೇ 08; ತಮಿಳುನಾಡಿನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪಲ್ಲಕ್ಕಿ ಉತ್ಸವದ ಮೇಲಿನ ನಿಷೇಧದ ಚರ್ಚೆ ತಣ್ಣಗಾಗಿದೆ. ಸರ್ಕಾರ ಉತ್ಸವದ ಮೇಲೆ ಹೇರಿದ್ದ ನಿಷೇಧ ಆದೇಶವನ್ನು ವಾಪಸ್ ಪಡೆದಿದೆ.

ಮೈಲಾದುತುರೈ ಜಿಲ್ಲೆಯ ಧರ್ಮಪುರಿಂ ಅಧೀನಂ ಮಠದಲ್ಲಿ ಶ್ರೀಗಳನ್ನು ಭಕ್ತರು ಮತ್ತು ಶಿಷ್ಯರು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಆಚರಣೆಗೆ ಅನುಮತಿ ನಿರಾಕರಿಸಲಾಗಿತ್ತು.

ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತಿದ್ದಕ್ಕೆ ಶುದ್ಧೀಕರಣ ಮಾಡಿದ ಜಿಎಸ್‌ಬಿ ಸಮುದಾಯದ ಮುಖಂಡರು!?ಶಾಸಕ ಹರೀಶ್ ಪೂಂಜಾ ಪಲ್ಲಕ್ಕಿ ಹೊತ್ತಿದ್ದಕ್ಕೆ ಶುದ್ಧೀಕರಣ ಮಾಡಿದ ಜಿಎಸ್‌ಬಿ ಸಮುದಾಯದ ಮುಖಂಡರು!?

ಈ ಆದೇಶ ತಮಿಳುನಾಡಿನ ರಾಜಕೀಯದಲ್ಲಿ ವಿವಾದ ಹುಟ್ಟು ಹಾಕಿತ್ತು. ಮಠದಲ್ಲಿನ ಈ ಸಂಪ್ರದಾಯವು ಮಾನವನ ಘನತೆಗೆ ಕುಂದು ಉಂಟು ಮಾಡುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು, ಈ ಆಚರಣೆಯನ್ನು ನಿಷೇಧಿಸಿತ್ತು.

ತಮಿಳುನಾಡು; ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ರವಾನೆತಮಿಳುನಾಡು; ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ರವಾನೆ

Tamil Nadu Govt Revoke On Pattina Pravesam Ritual

ತಮಿಳುನಾಡು ಸರ್ಕಾರದ ಆದೇಶವನ್ನು ಪ್ರತಿಪಕ್ಷಗಳು ವಿರೋಧಿಸಿದ್ದವು. ವಿಧಾನಸಭೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ರಾಜ್ಯದ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಾವೇ ಹೋಗಿ ಪಲ್ಲಕ್ಕಿ ಹೊರುತ್ತೇನೆ ಎಂದು ಹೇಳಿದ್ದರು.

ತಮಿಳುನಾಡು: ವಿವಿಗಳಿಗೆ ಕುಲಪತಿ ನೇಮಕ ಮಾಡುವ ರಾಜ್ಯಪಾಲರ ಅಧಿಕಾರ ಮೊಟಕುತಮಿಳುನಾಡು: ವಿವಿಗಳಿಗೆ ಕುಲಪತಿ ನೇಮಕ ಮಾಡುವ ರಾಜ್ಯಪಾಲರ ಅಧಿಕಾರ ಮೊಟಕು

ಅಧಿಕಾರಿಗಳು ಸಂಪ್ರದಾಯ ಪಾಲನೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಮದುರೈ ಅಧೀನಂ ಮಠದ 239ನೇ ಪೀಠಾಧಿಪತಿ ಶ್ರೀ ಹರಿಹರ ಜ್ಞಾನಸಂಬಧ ದೇಶಿಕ ಸ್ವಾಮಿಗಳು ಸರ್ಕಾರದ ತೀರ್ಮಾನ ವಿರೋಧಿಸಿದ್ದರು.ಸರ್ಕಾರ ಪುರಾತನ ಮಠದ ಸಂಪ್ರದಾಯಗಳನ್ನು ಗೌರವಿಸಬೇಕು.

ಈ ಆಚರಣೆ ಶಿಷ್ಯರಿಂದ ತಮ್ಮ ಗುರುವಿನ ಆರಾಧನೆಯನ್ನು ಸಂಕೇತಿಸುತ್ತದೆ ಇಂತಹ ಆಚರಣೆ ನಿಷೇಧಿಸುವುದು ಸರಿಯಲ್ಲ ಎಂದು ಒತ್ತಾಯಿಸಲಾಗಿತ್ತು.

English summary
Tamil Nadu government revoked its recent ban on Pattina Pravesam of the Dharumapuram Adheenam. Pattina Pravesam is a ritual of devotees carrying the pontiff on their shoulders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X