• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಶಾಲಾ-ಕಾಲೇಜು ತೆರೆಯುವುದಕ್ಕೆ ಸರ್ಕಾರದ ಬ್ರೇಕ್!

|

ಚೆನ್ನೈ, ನವೆಂಬರ್.12: ತಮಿಳುನಾಡಿನಲ್ಲಿ ಮುಂದಿನ ವಾರ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಾಲಾ ಕಾಲೇಜು ಆರಂಭಿಸುವುದು ಅನುಮಾನವಾಗಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ನವೆಂಬರ್.16ರಂದು ಶಾಲಾ ಮತ್ತು ಕಾಲೇಜು ಪುನಾರಂಭಿಸುವ ಆದೇಶವನ್ನು ರಾಜ್ಯ ಸರ್ಕಾರ ಕಾಯ್ದಿರಿಸಿದೆ.

ದೇಶಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದ ದಿನದಿಂದಲೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಕಳೆದ 7 ತಿಂಗಳುಗಳಿಂದ ತಮಿಳುನಾಡಿನಲ್ಲೂ ಶಾಲಾ-ಕಾಲೇಜು ಬಂದ್ ಆಗಿದ್ದು, ನವೆಂಬರ್.16ರಂದು ಪುನಾರಂಭಿಸುವ ಬಗ್ಗೆ ಈ ಮೊದಲು ಆದೇಶಿಸಲಾಗಿತ್ತು.

"ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಲ್ಲ"

ಡಿಸೆಂಬರ್.02ರಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿತ್ತು. ಇದರ ಬೆನ್ನಲ್ಲೇ ಡಿಸೆಂಬರ್.2ರ ಬದಲಿಗೆ ನವೆಂಬರ್.16ರಿಂದಲೇ ಇವುಗಳನ್ನೂ ಕೂಡಾ ಪುನಾರಂಭಿಸಲು ನಿರ್ಧರಿಸಲಾಗಿತ್ತು.

ಪೋಷಕರ ಅಭಿಪ್ರಾಯ ಸಂಗ್ರಹ:

ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಕುರಿತು ಕಳೆದ ಸೋಮವಾರ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ವೇಳೆ ಕೆಲವು ಇನ್ಸ್ ಟಿಟ್ಯೂಟ್ ಆರಂಭಿಸುವುದಕ್ಕೆ ಪೋಷಕರು ಸಹಮತ ವ್ಯಕ್ತಪಡಿಸಿದ್ದರು. ಆದರೆ ಕೆಲವು ಪೋಷಕರು ಕೊರೊನಾವೈರಸ್ ಬಿಕ್ಕಟ್ಟಿನ ನಡುವೆ ಶಾಲಾ-ಕಾಲೇಜು ಪುನಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 2184 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 750409ಕ್ಕೆ ಏರಿಕೆಯಾಗಿದೆ. 28 ಮಂದಿ ಒಂದೇ ದಿನ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 11415ಕ್ಕೆ ಏರಿಕೆಯಾಗಿದೆ. ಈವರೆಗೂ 720339 ಸೋಂಕಿತರು ಗುಣಮುಖರಾಗಿದ್ದು, 18655 ಸಕ್ರಿಯ ಪ್ರಕರಣಗಳಿವೆ.

   ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada

   English summary
   Tamil Nadu Govt Holds Off On Reopening Schools For Classes 9-12 From Nov.16.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X