• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡಿನಲ್ಲಿ ಮುಂದಿನ ಆದೇಶವರೆಗೂ ರಾತ್ರಿ ಕರ್ಫ್ಯೂ ವಿಸ್ತರಣೆ

|

ಚೆನ್ನೈ, ಏಪ್ರಿಲ್ 29: ತಮಿಳುನಾಡಿನಲ್ಲಿ ಮುಂದಿನ ಆದೇಶವರೆಗೂ ಕೊವಿಡ್-19 ನಿರ್ಬಂಧಗಳನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.

ಇದೇ ಭಾನುವಾರ ಮೇ 2ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ಕೆಲವು ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಮತಎಣಿಕೆ ದಿನ ಚುನಾವಣಾ ಅಧಿಕಾರಿಗಳು, ಅಭ್ಯರ್ಥಿಗಳು, ಏಜೆಂಟ್ಸ್ ಮತ್ತು ಅಧಿಕಾರಿಗಳಿಗೆ ಆಹಾರ ಸರಬರಾಜು ಮಾಡುವವರ ಸಂಚಾರಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ.

ಚೆನ್ನೈನಲ್ಲಿ ರೆಮ್‌ಡಿಸಿವಿರ್ ಔಷಧಿ ಖರೀದಿಗೆ ಈ ದಾಖಲೆಗಳು ಕಡ್ಡಾಯಚೆನ್ನೈನಲ್ಲಿ ರೆಮ್‌ಡಿಸಿವಿರ್ ಔಷಧಿ ಖರೀದಿಗೆ ಈ ದಾಖಲೆಗಳು ಕಡ್ಡಾಯ

ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 4 ಗಂಟೆವರೆಗೂ ಕಟ್ಟುನಿಟ್ಟಿನ ರಾತ್ರಿ ನಿಷೇಧಾಜ್ಞೆಯನ್ನು ಯಥಾವತ್ತಾಗಿ ಮುಂದುವರಿಸಲಾಗುವುದು. ಈ ನಿಯಮಗಳಲ್ಲಿ ಯಾವುದೇ ಸಡಿಲಿಕೆಯಿಲ್ಲ ಎಂದು ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ತಮಿಳುನಾಡಿನಲ್ಲಿ ಯಾವ ಚಟುವಟಿಕೆಗಳಿಗೆ ನಿರ್ಬಂಧ:

* ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದವರನ್ನು ಹೊರತುಪಡಿಸಿ ಉಳಿದೆಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರಕ್ಕೆ ನಿರ್ಬಂಧ

* ಶನಿವಾರ ಮತ್ತು ಭಾನುವಾರ ಮೀನಿನ ಮಾರುಕಟ್ಟೆ, ಚಿಕನ್ ಸ್ಟಾಲ್, ಮಾಂಸದ ಅಂಗಡಿಗಳು ಸಂಪೂರ್ಣ ಬಂದ್

* ಚಿತ್ರಮಂದಿರ, ಮಲ್ಟಿಫ್ಲೆಕ್ಸ್, ಜಿಮ್ ಬಂದ್

* ಕ್ಲಬ್, ಬಾರ್, ಆಡಿಟೋರಿಯಂ, ಸಭಾಂಗಣಗಳಿಗೆ ಬೀಗ

* ಏಪ್ರಿಲ್ 10ಕ್ಕಿಂತ ಮೊದಲ ಅನುಮತಿ ಪಡೆದದಿರುವ ಧಾರ್ಮಿಕ ಆಚರಣೆಗಳಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ

* ಯಾವುದೇ ಧಾರ್ಮಿಕ ಹಬ್ಬ ಮತ್ತು ಆಚರಣೆಗಳಲ್ಲಿ ಸಾರ್ವಜನಿಕರು ಭಾಗವಹಿಸುವಂತಿಲ್ಲ

* ಕೋಯಂಬೇಡು ಮಾರುಕಟ್ಟೆಯಲ್ಲಿ ಇರುವ ತರಕಾರಿ, ಹಣ್ಣು ಅಂಗಡಿಗಳು, ಚಿಲ್ಲರೇ ಮತ್ತು ಸಗಟು ವ್ಯಾಪಾರಿಗಳ ಅಂಗಡಿ ಬಂದ್

* ದೊಡ್ಡ ಪ್ರಮಾಣ(3000 ಚದರ ಅಡಿ ವಿಸ್ತೀರ್ಣಕ್ಕಿಂತ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ)ದ ಅಂಗಡಿಗಳನ್ನು ತರೆಯುವುದಕ್ಕೆ ಯಾವುದೇ ಅನುಮತಿ ಇಲ್ಲ

English summary
Tamil Nadu: State Govt Extends Night Curfew And Complete Lockdown On Sundays Until Further Orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X