ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸರು ಬದಲಾವಣೆ ಈಗ ತಮಿಳುನಾಡು ಸರದಿ: 3,000 ಸ್ಥಳಗಳಿಗೆ ಮರುನಾಮಕರಣ

|
Google Oneindia Kannada News

ಚೆನ್ನೈ, ಡಿಸೆಂಬರ್ 13: ಸ್ಥಳಗಳ ಹೆಸರು ಬದಲಾವಣೆಯ ಸಂಪ್ರದಾಯ ನೆರೆಯ ತಮಿಳುನಾಡಿಗೂ ಕಾಲಿಟ್ಟಿದೆ. ಆದರೆ, ಇಲ್ಲಿ ಒಂದೆರಡು ಸ್ಥಳಗಳ ಹೆಸರು ಬದಲಾಗುತ್ತಿಲ್ಲ. ಸುಮಾರು 3 ಸಾವಿರ ಸ್ಥಳಗಳಿಗೆ ಮರುನಾಮಕರಣ ಮಾಡಲಾಗುತ್ತಿದೆ.

ಇಂಗ್ಲಿಷ್ ಪ್ರಭಾವಕ್ಕೆ ಒಳಗಾಗಿ ಮೂಲ ಹೆಸರು ಕಳೆದುಕೊಂಡಿದ್ದ ಸ್ಥಳಗಳಿಗೆ ಮರಳಿ ಹಳೆಯ ಹೆಸರನ್ನು ನೀಡುವುದು ಮುಖ್ಯಮಂತ್ರಿ ಈ. ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರದ ಉದ್ದೇಶ.

ಅಲಹಾಬಾದ್, ಫೈಜಾಬಾದ್ ಹೆಸರು ಬದಲಿಗೆ ಉ.ಪ್ರ ಸಚಿವ ಸಂಪುಟ ಒಪ್ಪಿಗೆಅಲಹಾಬಾದ್, ಫೈಜಾಬಾದ್ ಹೆಸರು ಬದಲಿಗೆ ಉ.ಪ್ರ ಸಚಿವ ಸಂಪುಟ ಒಪ್ಪಿಗೆ

ಮುಂದಿನ ಕೆಲವು ವಾರಗಳಲ್ಲಿ ಈ ನಿರ್ಧಾರಕ್ಕೆ ಚಾಲನೆ ಸಿಗಲಿದೆ. ಈ 3 ಸಾವಿರ ಸ್ಥಳಗಳಲ್ಲಿ ಕೆಲವು ಪ್ರಮುಖ ಪ್ರದೇಶಗಳೂ ಸೇರಿವೆ.

Tamil Nadu government ordered to rename 3000 places

ಟ್ರಿಪ್ಲಿಕೇನ್- ತಿರುವಲ್ಲಿಕೇನಿ, ತಿರುಚಿ-ತಿರುಚಿರಾಪಳ್ಳಿ, ಟುಟಿಕಾರ್ನ್-ತೂತುಕುಡಿ ಮತ್ತು ಪೂನಮಲ್ಲೆ-ಪೂವಿರುಂಧವಲ್ಲಿ ಎಂದು ಬದಲಾಗಲಿವೆ.

ನಾಮಕರಣ, ಮರುನಾಮಕರಣ - ಅಂದು ಇಂದು ಎಂದೆಂದೂ!ನಾಮಕರಣ, ಮರುನಾಮಕರಣ - ಅಂದು ಇಂದು ಎಂದೆಂದೂ!

ತಮಿಳುನಾಡಿನ 3,000 ಸ್ಥಳಗಳ ಹೆಸರನ್ನು ಬದಲಿಸುವ ಸರ್ಕಾರದ ಆದೇಶವು ಶೀಘ್ರವೇ ಹೊರಬೀಳಲಿದೆ. ಎರಡು ವಾರಗಳಲ್ಲಿ ಆದೇಶ ಜಾರಿಯಾಗಲಿದೆ ಎಂದು ತಮಿಳು ಅಧಿಕೃತ ಭಾಷೆ ತಮಿಳು ಸಂಸ್ಕೃತಿ ಸಚಿವ ಮಾ ಫೋಯಿ ಕೆ. ಪಾಂಡಿಯರಾಜನ್ ತಿಳಿಸಿದ್ದಾರೆ.

ಆಗ್ರಾ ಸೇರಿದಂತೆ ಉತ್ತರಪ್ರದೇಶ ನಗರಗಳ ಹೆಸರು ಬದಲಾಯಿಸಿಆಗ್ರಾ ಸೇರಿದಂತೆ ಉತ್ತರಪ್ರದೇಶ ನಗರಗಳ ಹೆಸರು ಬದಲಾಯಿಸಿ

32 ಜಿಲ್ಲೆಗಳಲ್ಲಿನ 3 ಸಾವಿರ ಸ್ಥಳಗಳ ಹೆಸರು ಬದಲಾವಣೆಯನ್ನು ಅಂತಿಮಗೊಳಿಸಲು ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಲಾಗಿತ್ತು. ಇತಿಹಾಸಕಾರರು ಮತ್ತು ತಮಿಳು ವಿಧ್ವಾಂಸರಿಂದ ಸಲಹೆಗಳನ್ನು ಸಮಿತಿ ಪರಿಶೀಲನೆಗೆ ಒಳಪಡಿಸಿತ್ತು.

ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಕೆಲವು ಸ್ಥಳಗಳ ಹೆಸರಿನ ಬದಲಾವಣೆ ಮಾಡಿತ್ತು. ತಮಿಳುನಾಡು ಸರ್ಕಾರದ ನಿರ್ಧಾರವನ್ನು ಸ್ಥಳೀಯ ಬಿಜೆಪಿ ಸ್ವಾಗತಿಸಿದ್ದು, ಆದರೆ ಇದು ತಡವಾದ ನಡೆಯಾಗಿದೆ ಎಂದು ಟೀಕೆಯನ್ನು ಸಹ ವ್ಯಕ್ತಪಡಿಸಿದೆ.

'ಬ್ರಿಟಿಷ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜ್ಯದಲ್ಲಿ ಅನೇಕ ಸ್ಥಳಗಳಿಗೆ ಅವರ ಹೆಸರನ್ನು ಇರಿಸಲಾಗಿದೆ. ಅಂತಹ ಐತಿಹಾಸಿಕ ಹೆಸರುಗಳನ್ನು ಬದಲಿಸಬಾರದು' ಎಂದು ತಂದೈ ಪೆರಿಯಾರ್ ದ್ರಾವಿಡರ್ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ. ರಾಮಕೃಷ್ಣನ್ ಒತ್ತಾಯಿಸಿದ್ದಾರೆ.

ಅಯೋಧ್ಯೆ, ಪ್ರಯಾಗ ಆಯ್ತು, ಈಗ ಕರ್ಣಾವತಿಯಾಗಲಿದೆ ಅಹಮದಾಬಾದ್!ಅಯೋಧ್ಯೆ, ಪ್ರಯಾಗ ಆಯ್ತು, ಈಗ ಕರ್ಣಾವತಿಯಾಗಲಿದೆ ಅಹಮದಾಬಾದ್!

ಆದರೆ, ಉಳಿದ ಹೆಸರುಗಳನ್ನು ಬದಲಿಸಲೇಬೇಕು ಎಂದೂ ಅವರು ಆಗ್ರಹಿಸಿದ್ದಾರೆ. 'ಅನೇಕ ಸ್ಥಳಗಳು ಜಾತಿ ಸೂಚಕ ಹೆಸರುಗಳನ್ನು ಒಳಗೊಂಡಿವೆ. ಗೌಂಡರ್ ಪಾಳ್ಯಂ, ನಾಯಕರಪಾಳ್ಯಂ ಮತ್ತು ಪಲ್ಲಪಾಳ್ಯಂ- ಇಂತಹ ಹೆಸರುಗಳನ್ನು ಕೂಡ ಬದಲಿಸಲು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಎಂಜಿ ರಾಮಚಂದ್ರನ್ ಅವರ ಸರ್ಕಾರದ ಅವಧಿಯಲ್ಲಿ ಜಾರಿಯಾದ ಆದೇಶಕ್ಕೆ ಅನುಗುಣವಾಗಿ ಹೆಸರು ಬದಲಾವಣೆಯಾಗಬೇಕು' ಎಂದು ಹೇಳಿದ್ದಾರೆ.

ತಮಿಳುನಾಡಿನ ಅನೇಕ ಬೀದಿಗಳಿಗೆ ಇರಿಸಿರುವ ಜಾತಿ ಸೂಚಕ ಹೆಸರುಗಳನ್ನು ತೆಗೆದುಹಾಕುವಂತೆ 1979ರಲ್ಲಿ ಆಗಿನ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಆದೇಶ ಹೊರಡಿಸಿದ್ದರು.

English summary
Tamil Nadu government has decided to rename more than 3,000 locations in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X