ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಹೋಗುವುದಾದರೆ ಈ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ!

|
Google Oneindia Kannada News

ಚೆನ್ನೈ, ಫೆಬ್ರವರಿ 25: ಕೋವಿಡ್-19 ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡಬರುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ವಿದೇಶದಿಂದ ಹಾಗೂ ಇತರೆ ರಾಜ್ಯಗಳಿಂದ ತನ್ನ ರಾಜ್ಯಕ್ಕೆ ಬರುವ ಜನರಿಗಾಗಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಕೇರಳ ಮತ್ತು ಮಹಾರಾಷ್ಟ್ರದಿಂದ ತಮಿಳುನಾಡಿಗೆ ಬರುವ ಜನರು ಏಳು ದಿನ ಹೋಮ್ ಕ್ವಾರೆಂಟೈನ್‌ನಲ್ಲಿ ಇರುವುದು ಕಡ್ಡಾಯವಾಗಿದೆ.

ತಮಿಳುನಾಡಿನಲ್ಲಿ ಕೊರೊನಾ ವೈರಸ್‌ನ ಹೊಸ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರ ಬಗ್ಗೆ ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಅವರು ಮಂಗಳವಾರ ಆತಂಕ ವ್ಯಕ್ತಪಡಿಸಿದ್ದರು. ಮರುದಿನ ರಾಜ್ಯ ಸರ್ಕಾರವು ತಮಿಳುನಾಡಿಗೆ ಬರುವ ಜನರ ಪರೀಕ್ಷೆ ಹಾಗೂ ಹೋಮ್ ಕ್ವಾರೆಂಟೈನ್‌ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಪರೀಕ್ಷೆಯಿಲ್ಲ; 9, 10, 11ನೇ ತರಗತಿ ವಿದ್ಯಾರ್ಥಿಗಳೆಲ್ಲಾ ಪರೀಕ್ಷೆಯಿಲ್ಲ; 9, 10, 11ನೇ ತರಗತಿ ವಿದ್ಯಾರ್ಥಿಗಳೆಲ್ಲಾ "ಪಾಸ್" ಎಂದು ಘೋಷಿಸಿದ ಸರ್ಕಾರ

ತಮಿಳುನಾಡಿಗೆ ತೆರಳಲು ಉದ್ದೇಶಿಸುತ್ತಿರುವ ಜನರು ಈ ಹೊಸ ಮಾರ್ಗಸೂಚಿಗಳನ್ನು ಗಮನಿಸಬೇಕು.

* ಬೇರೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ತಮಿಳುನಾಡಿಗೆ ಬರುವ ಜನರು (ಕೇರಳ ಮತ್ತು ಮಹಾರಾಷ್ಟ್ರ ಹೊರತುಪಡಿಸಿ) ತಮ್ಮ ಆಗಮನದ 14 ದಿನಗಳ ಬಳಿಕ ಆರೋಗ್ಯದ ಸ್ವಯಂ ನಿಗಾವಹಿಸಬೇಕು.

ಹೋಂ ಕ್ವಾರೆಂಟೈನ್ ಕಡ್ಡಾಯ

ಹೋಂ ಕ್ವಾರೆಂಟೈನ್ ಕಡ್ಡಾಯ

* ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ವ್ಯಕ್ತಿಗಳು ಏಳು ದಿನಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರೆಂಟೈನ್‌ನಲ್ಲಿರಬೇಕು. ಮತ್ತು ನಂತರದ ಏಳು ದಿನಗಳ ಕಾಲ ತಮ್ಮ ಆರೋಗ್ಯವನ್ನು ರೋಗ ಲಕ್ಷಣಕ್ಕಾಗಿ ಸ್ವಯಂ ನಿಗಾ ವಹಿಸಬೇಕು.


* ಇತರೆ ರಾಜ್ಯಗಳಿಂದ ಬರುವ ರೋಗದ ಯಾವುದೇ ಲಕ್ಷಣವಿರುವ ಎಲ್ಲ ವ್ಯಕ್ತಿಗಳೂ ಕೋವಿಡ್-19 ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಸ್ವಯಂ ನಿಗಾ ಅಗತ್ಯ

ಸ್ವಯಂ ನಿಗಾ ಅಗತ್ಯ

* ಬ್ರಿಟನ್, ಯುರೋಪ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ ಬರುವ ವಿಮಾನಗಳನ್ನು ಹೊರತುಪಡಿಸಿ ಉಳಿದ ದೇಶಗಳಿಂದ ವಿಮಾನದಲ್ಲಿ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು 14 ದಿನಗಳ ಕಾಲ ತಮ್ಮ ಆರೋಗ್ಯವನ್ನು ಸ್ವಯಂ ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯ.

ಮಹಾರಾಷ್ಟ್ರದಲ್ಲಿ ಕೊರೊನಾ ಕೇಂದ್ರವಾದ ಹಾಸ್ಟೆಲ್: 200 ವಿದ್ಯಾರ್ಥಿಗಳಿಗೆ ಸೋಂಕು!ಮಹಾರಾಷ್ಟ್ರದಲ್ಲಿ ಕೊರೊನಾ ಕೇಂದ್ರವಾದ ಹಾಸ್ಟೆಲ್: 200 ವಿದ್ಯಾರ್ಥಿಗಳಿಗೆ ಸೋಂಕು!

ವಿಮಾನನಿಲ್ದಾಣದಲ್ಲಿ ಪರೀಕ್ಷೆ

ವಿಮಾನನಿಲ್ದಾಣದಲ್ಲಿ ಪರೀಕ್ಷೆ

* ಬ್ರಿಟನ್, ಯುರೋಪ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ ಹೊರಡುವ ಅಥವಾ ಅವುಗಳ ಮೂಲಕ ಬರುವ ವಿಮಾನಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಕ್ಕೂ 72 ಗಂಟೆಗಳ ಒಳಗೆ ಪಡೆದುಕೊಂಡ ಆರ್‌ಟಿ-ಪಿಸಿಆರ್ ಪರೀಕ್ಷೆಯ ಕೋವಿಡ್ ನೆಗೆಟಿವ್ ವರದಿಯನ್ನು ತರುವುದು ಕಡ್ಡಾಯ. ಎಲ್ಲ ಪ್ರಯಾಣಿಕರು ಭಾರತದ ವಿಮಾನನಿಲ್ದಾಣದಲ್ಲಿ ಇಳಿದ ಕೂಡಲೇ ಮತ್ತೊಮ್ಮೆ ತಪಾಸಣೆಗೆ ಒಳಪಡಬೇಕಾಗುತ್ತದೆ.

ನೆಗೆಟಿವ್ ಬಂದರೆ ಮಾತ್ರ ಅವಕಾಶ

ನೆಗೆಟಿವ್ ಬಂದರೆ ಮಾತ್ರ ಅವಕಾಶ

* ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ಹೊರಡುವ ಅಥವಾ ಅವುಗಳ ಮೂಲಕ ಬರುವ ಪ್ರಯಾಣಿಕರು ಭಾರತಕ್ಕೆ ಬಂದ ಬಳಿಕ ಮಾಡುವ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಮಾತ್ರವೇ ಸಂಪರ್ಕ ವಿಮಾನಗಳನ್ನು ಹತ್ತಲು ಅವಕಾಶ ನೀಡಲಾಗುತ್ತದೆ. ಅವರು ಕಡ್ಡಾಯವಾಗಿ ಏಳು ದಿನಗಳ ಹೋಮ್ ಕ್ವಾರೆಂಟೈನ್‌ಗೆ ಒಳಪಡಬೇಕು ಮತ್ತು ಏಳು ದಿನದ ಬಳಿಕ ಪುನಃ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅವರನ್ನು ಹೋಮ್ ಕ್ವಾರೆಂಟೈನ್‌ನಿಂದ ಬಿಡುಗಡೆ ಮಾಡಲಾಗುವುದು ಮತ್ತು ಅವರು ಇನ್ನೂ ಏಳು ದಿನ ಸ್ವಯಂ ನಿಗಾದಲ್ಲಿ ಇರಬೇಕಾಗುತ್ತದೆ.

Array

Array

* ಮಧ್ಯಪ್ರಾಚ್ಯ ಮತ್ತು ಯುರೋಪ್‌ನಿಂದ ಹೊರಡುವ ಅಥವಾ ಅದರ ಮೂಲಕ ಬರುವ ವಿಮಾನಗಳಿಂದ ಆಗಮಿಸುವ ಪ್ರಯಾಣಿಕರು ವಿಮಾನ ನಿಲ್ದಾಣದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ 14 ದಿನಗಳ ಕಾಲ ತಮ್ಮ ಆರೋಗ್ಯವನ್ನು ಸ್ವಯಂ ನಿಗಾದಲ್ಲಿ ಇರಿಸಿಕೊಳ್ಳಲು ಸೂಚಿಸಲಾಗುತ್ತದೆ.

English summary
Tamil Nadu government on Wednesday issued a fresh Covid-19 guidelines for people to the state from abroad and other states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X