ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆಯಲ್ಲಿ ವೈಫಲ್ಯ,ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

By Mahesh
|
Google Oneindia Kannada News

ತಿರುಚಿರಪಲ್ಲಿ, ಜೂನ್ 08: ವೃತ್ತಿಪರ ಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ನಡೆಯುವ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್(NEET) ವಿರುದ್ಧ ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಕಳೆದ 48 ಗಂಟೆಗಳಲ್ಲಿ ನೀಟ್ ವೈಫಲ್ಯದಿಂದಾಗಿ ಇಬ್ಬರು ವಿದ್ಯಾರ್ಥಿನಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರೈತರೊಬ್ಬರ ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಣ್ಮುಂದೆ ಇರುವಾಗಲೆ ನೀಟ್ ಆಕಾಂಕ್ಷಿಯಾಗಿದ್ದ ಶುಭಶ್ರೀ ಅವರು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ 19 ವರ್ಷ ವಯಸ್ಸಿನ ಪ್ರತಿಭಾ ಎಂಬ ವಿದ್ಯಾರ್ಥಿನಿ ಕೂಡಾ ನೀಟ್ ಪಾಸಾಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ನೀಟ್ ಪರೀಕ್ಷೆ ಫಲಿತಾಂಶ : ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆನೀಟ್ ಪರೀಕ್ಷೆ ಫಲಿತಾಂಶ : ಹೈದರಾಬಾದ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಕ್ಲಾಸ್ 12 ಪರೀಕ್ಷೆಯಲ್ಲಿ ಶುಭಶ್ರೀ ಅವರು 1200ಕ್ಕೆ 907 ಅಂಕಗಳನ್ನು ಗಳಿಸಿದ್ದು, ಎಂಬಿಬಿಎಸ್ ಸೇರುವ ಇಚ್ಛೆ ಹೊಂದಿದ್ದರು. ಆದರೆ, ಕೋಚಿಂಗ್ ಪಡೆದರೂ ನೀಟ್ ಪರೀಕ್ಷೆ ಪಾಸಾಗಲಿಲ್ಲ.

Tamil Nadu Girl Allegedly Commits Suicide Over NEET Failure

ಇದರಿಂದಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದ ಶುಭಶ್ರೀ ಅವರನ್ನು ಅವರ ತಂದೆ ಕಣ್ಣನ್ ಹಾಗೂ ತಾಯಿ ಸಮಾಧಾನ ಪಡಿಸಿದ್ದರು. ಕಳೆದ ವರ್ಷ ತಮಿಳುನಾಡಿನ ಅರಿಯಲೂರಿನಲ್ಲಿ ಬಡ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Days after a farmer's daughter committed suicide in Tamil Nadu, another girl allegedly committed suicide for not being able to pass the National Eligibility cum Entrance Test for medical courses. The NEET aspirant was depressed after the results were announced, as she scored only 24 in the test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X