ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು

|
Google Oneindia Kannada News

ಚೆನ್ನೈ, ಜೂನ್ 19: ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಜನರು ಖಾಸಗಿ ನೀರಿನ ಟ್ಯಾಂಕರ್‌ಗಳ ಮೂಲಕ ದುಪ್ಪಟ್ಟು ಹಣಕೊಟ್ಟು ನೀರನ್ನು ತರಿಸಿಕೊಳ್ಳುತ್ತಿದ್ದಾರೆ.

ಚೆನ್ನೈ ನಗರಕ್ಕೆ ನಿತ್ಯ 800 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ ಆದರೆ 525 ಮಿಲಿಯನ್ ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ.

ರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿರಾಜ್ಯದ ಪ್ರತೀ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು: ಕುಮಾರಸ್ವಾಮಿ

ಪ್ರತಿ ಎರಡು ದಿನಕ್ಕೊಮ್ಮೆ ಸರ್ಕಾರದಿಂದ ನೀರು ಸರಬರಾಜು ಮಾಡಲಾಗುತ್ತದೆ. ಸ್ವಲ್ಪ ನೀರು ಪಡೆಯಲು ಎರಡು ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಎರಡು ದಿನಕ್ಕೊಮ್ಮೆ ನಾಲ್ಕು ಮಂದಿ ಇರುವ ಕುಟುಂಕ್ಕೆ ಏಳು ಬಿಂದಿಗೆ ನೀರು ನೀಡಲಾಗುತ್ತದೆ.

Tamil Nadu facing acute water shortage

ಸ್ನಾನ, ಬಟ್ಟೆ ತೊಳೆಯುವುದು ಹಾಗಿರಲಿ ಕುಡಿಯುವ ನೀರಿಗೆ ಗತಿಯಿಲ್ಲ, ನಿತ್ಯ ಕಚೇರಿ, ಕಾಲೇಜು, ಶಾಲೆಗೆ ಹೋಗುವವರಿರುತ್ತಾರೆ, ಆದರೆ ಸ್ನಾನಕ್ಕೂ ಕೂಡ ಒಂದು ಹನಿ ನೀರಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚೆನ್ನೈನ ಪ್ರತಿಷ್ಠಿತ ರೆಸ್ಟೋರೆಂಟ್‌ ಒಂದರಲ್ಲಿ ನೀರಿಲ್ಲದ ಕಾರಣ ಮಧ್ಯಾಹ್ನ ಊಟವನ್ನೇ ನಿಲ್ಲಿಸಲಾಗಿದೆ. ಚೆನ್ನೈನಲ್ಲಿ ಸಾಕಷ್ಟು ಮಂದಿ ಖಾಸಗಿ ಟ್ಯಾಂಕರ್‌ ನಂಬಿದ್ದಾರೆ. ಮೊದಲೇ ಹೆಚ್ಚು ಬೆಲೆ ತೆರಬೇಕಾಗುತ್ತಿತ್ತು ಇದೀಗ ದುಪ್ಪಟ್ಟು ಹಣ ನೀಡಬೇಕಾಗುತ್ತಿದೆ.

2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಬಂದು ಅಲ್ಲಿರುವ ನದಿ, ನಾಳೆಗಳೆಲ್ಲವೂ ಬತ್ತಿ ಹೋಗಿದ್ದವು. ಇನ್ನು ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾದರೆ ಮಾತ್ರ ಸಹಜ ಸ್ಥಿತಿಗೆ ಮರಗಳಲು ಸಾಧ್ಯ.

English summary
Tamil Nadu is facing, the state government said it will now set up a monitoring committee to look into the water supply related issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X