ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಮಾರ್ಚ್ 31ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ

|
Google Oneindia Kannada News

ಚೆನ್ನೈ,ಮಾರ್ಚ್ 1: ತಮಿಳುನಾಡಿನಲ್ಲಿ ಮಾರ್ಚ್ 31ರವರೆಗೆ ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಕಚೇರಿಗಳು,ಅಂಗಡಿಗಳು ಮತ್ತು ಕೈಗಾರಿಕಾ,ವಾಣಿಜ್ಯ ಸಂಸ್ಥೆಗಳು ಈ ಹಿಂದೆ ನೀಡಿರುವ ಸಮಯದಂತೆ ತೆರೆಯಲಿವೆ.

ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ!ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ!

ಕೊರೊನಾ ನಿಯಮಗಳನ್ನು ಮೀರದಂತೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಕಂಟೈನ್ಮೆಂಟ್ ಜೋನ್‌ಗಳಲ್ಲಿ ಕೊವಿಡ್ ನಿಯಮ ಗಾಳಿಗೆ ತೂರದಂತೆ ತಡೆಯಲು ಪೊಲೀಸರು ಕಂಟೈನ್ಮೆಂಟ್ ಜೋನ್‌ಗಳ ಹೊರಗೆ ಕಾಯುತ್ತಿದ್ದಾರೆ.

Corona Lockdown

ಇದರಲ್ಲಿ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಅಡಕವಾಗಿದೆ.ಡಿಜಿಸಿಎಯು ಅಂತಾರಾಷ್ಟ್ರೀಯ ಹಾರಾಟವನ್ನು ನಿಷೇಧಿಸಿ ಕೆಲವು ನಿರ್ಬಂಧವನ್ನು ಮುಂದುವರೆಸಿದೆ.

ಅನಿವಾರ್ಯವಿದ್ದಲ್ಲಿ ಮಾತ್ರ ಕೆಲವು ಷರತ್ತುಗಳ ನಡುವೆ ಒಪ್ಪಿಗೆ ನೀಡಲಾಗುತ್ತಿದೆ. ಸರ್ಕಾರವು 65 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು, 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.

ಇಂದಿನಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣಾ ಅಭಿಯಾನ ಪ್ರಾರಂಭಗೊಳ್ಳಲಿದೆ, 60 ವರ್ಷ ಮೇಲ್ಪಟ್ಟವರು ಹಾಗೂ ಅನೇಕ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ.

ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ, ಖಾಸಗಿ ಕೇಂದ್ರಗಳಲ್ಲಿ 250 ರೂ ಗೆ ಲಸಿಕೆ ಲಭ್ಯವಿದೆ.ತಮಿಳುನಾಡಿನಲ್ಲಿ ಏಪ್ರಿಲ್ 6 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಚುನಾವಣೆ ನಡೆಯಲಿದೆ.

ಚೆನ್ನೈನಲ್ಲಿ ಕಳೆದ ಒಂದು ದಿನದಲ್ಲಿ 486 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು 8.51 ಲಕ್ಷ ಕೊರೊನಾ ಪ್ರಕರಣಗಳಿವೆ.12,000 ಮಂದಿ ಮೃತಪಟ್ಟಿದ್ದಾರೆ.

English summary
Tamil Nadu has extended existing coronavirus-related restrictions till March 31, meaning offices, shops, and industrial and commercial establishments will continue with staggered working hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X