ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಜನತಾ ಕರ್ಫ್ಯೂ ವಿಸ್ತರಣೆ

|
Google Oneindia Kannada News

ಚೆನ್ನೈ, ಮಾರ್ಚ್ 22 : ತಮಿಳುನಾಡು ಸರ್ಕಾರ ಕೊರೊನಾ ಹರಡದಂತೆ ತಡೆಯಲು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಜನತಾ ಕರ್ಫ್ಯೂವನ್ನು ಸೋಮವಾರ ಮುಂಜಾನೆ 5 ಗಂಟೆಯ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ನಡೆಯುತ್ತಿರುವ ಜನತಾ ಕರ್ಫ್ಯೂ ಭಾನುವಾರ ಬೆಳಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯಲಿದೆ. ಆದರೆ, ತಮಿಳುನಾಡಿನಲ್ಲಿ ಸೋಮವಾರ ಮುಂಜಾನೆ 5 ಗಂಟೆಯ ತನಕ ಜನತಾ ಕರ್ಫ್ಯೂ ವಿಸ್ತರಣೆಯಾಗಿದೆ.

ಜನತಾ ಕರ್ಫ್ಯೂ: ಕರ್ನಾಟಕದ ಜಿಲ್ಲೆಗಳ ರಿಪೋರ್ಟ್...ಜನತಾ ಕರ್ಫ್ಯೂ: ಕರ್ನಾಟಕದ ಜಿಲ್ಲೆಗಳ ರಿಪೋರ್ಟ್...

ಭಾನುವಾರ ರಾತ್ರಿ 9 ಗಂಟೆಗೆ ಜನತಾ ಕರ್ಫ್ಯೂ ಅಂತ್ಯಗೊಂಡ ಬಳಿಕ ಜನರು ನೂರಾರು ಸಂಖ್ಯೆಯಲ್ಲಿ ರಸ್ತೆಗೆ ಬರಬಾರದು ಎಂದು ಈಗಾಗಲೇ ಸರ್ಕಾರ ಮನವಿ ಮಾಡಿದೆ. ಕೊರೊನಾ ಹರಡದಂತೆ ತಡೆಯಲು ಜನತಾ ಕರ್ಫ್ಯೂವನ್ನು ಮುಂದೂಡಲಾಗಿದೆ.

Coronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆCoronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆ

Tamil Nadu Extends Janata Curfew Till Monday

ಸ್ಪೈನ್‌ನಿಂದ ಕೊಯಮತ್ತೂರಿಗೆ ಮಾರ್ಚ್ 13ರಂದು ಆಗಮಿಸಿದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಜನತಾ ಕರ್ಫ್ಯೂ ಜನತೆಗೆ ಯಡಿಯೂರಪ್ಪ ಮನವಿ ಏನು? ಜನತಾ ಕರ್ಫ್ಯೂ ಜನತೆಗೆ ಯಡಿಯೂರಪ್ಪ ಮನವಿ ಏನು?

ತಮಿಳುನಾಡು ರಾಜ್ಯದ ಆರೋಗ್ಯ ಸಚಿವ ಡಾ. ಸಿ. ವಿಜಯಭಾಸ್ಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಸ್ಪೈನ್‌ನಿಂದ ಆಗಮಿಸಿದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಖಾಸಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ.

ಶನಿವಾರ ತಮಿಳುನಾಡಿನಲ್ಲಿ 3 ಕೊರೊನಾ ಪ್ರಕರಣಗಳು ದಾಖಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಜನತಾ ಕರ್ಫ್ಯೂವನ್ನು ವಿಸ್ತರಣೆ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಾಹನಗಳನ್ನು ಸರ್ಕಾರ ನಿಷೇಧಿಸಿದೆ.

English summary
Tamil Nadu government extended Janata Curfew till 5 am on Monday, March 23, 2020. Tamil Nadu reported 7 coronavirus case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X