• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜುಲೈ 12ರ ತನಕ ಲಾಕ್‌ಡೌನ್ ವಿಸ್ತರಿಸಿದ ತಮಿಳುನಾಡು

|
Google Oneindia Kannada News

ಚೆನ್ನೈ, ಜುಲೈ 02; ತಮಿಳುನಾಡು ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ಲಾಕ್‌ಡೌನ್ ಜಾರಿಗೊಳಿಸಿತ್ತು. ಜುಲೈ 12ರ ತನಕ ಅದನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ವಿನಾಯಿತಿಗಳನ್ನು ಸಹ ನೀಡಲಾಗಿದೆ.

ಶುಕ್ರವಾರ ತಮಿಳುನಾಡು ಸರ್ಕಾರ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರೆಸ್ಟೋರೆಂಟ್, ಅಮ್ಯೂಸ್‌ಮೆಂಟ್ ಪಾರ್ಕ್‌ಗಳನ್ನು ಶೇ 50ರಷ್ಟು ಜನರೊಂದಿಗೆ ತೆರೆಯಲು ಅನುಮತಿ ನೀಡಿದೆ.

ತಮಿಳುನಾಡು ಸರ್ಕಾರದಿಂದ ಪೊಲೀಸರಿಗೆ 5,000 ರೂಪಾಯಿ ಪ್ರೋತ್ಸಾಹ ಧನತಮಿಳುನಾಡು ಸರ್ಕಾರದಿಂದ ಪೊಲೀಸರಿಗೆ 5,000 ರೂಪಾಯಿ ಪ್ರೋತ್ಸಾಹ ಧನ

ಅಂಗಡಿಗಳನ್ನು ಸಂಜೆ 7 ಗಂಟೆಯ ತನಕ ತೆರೆಯಲು ಅನುಮತಿ ನೀಡಲಾಗಿತ್ತು. ಅದನ್ನು ರಾತ್ರಿ 8 ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ. ಹೋಟೆಲ್, ಟೀ ಶಾಪ್‌ಗಳು ಶೇ 50ರಷ್ಟು ಜನರೊಂದಿಗೆ ತೆರೆಯಲು ಒಪ್ಪಿಗೆ ಕೊಡಲಾಗಿದೆ.

ಮೇಕೆದಾಟು ಯೋಜನೆ; ಕ್ಯಾತೆ ತೆಗೆದ ತಮಿಳುನಾಡು ಹೊಸ ಸರ್ಕಾರ ಮೇಕೆದಾಟು ಯೋಜನೆ; ಕ್ಯಾತೆ ತೆಗೆದ ತಮಿಳುನಾಡು ಹೊಸ ಸರ್ಕಾರ

ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಅಂತರ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೆ ಶೇ 50ರಷ್ಟು ಪ್ರಯಾಣಿಕರನ್ನು ಹೊತ್ತು ಬಸ್‌ಗಳು ಸಂಚಾರ ನಡೆಸಬಹುದಾಗಿದೆ.

24 ಗಂಟೆಯಲ್ಲಿ ತಮಿಳುನಾಡು ರಾಜ್ಯದಲ್ಲಿ 4,230 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 24,88,407ಕ್ಕೆ ಏರಿಕೆಯಾಗಿದೆ.

ತಮಿಳುನಾಡು ಮತ್ತು ಕರ್ನಾಟಕಕ್ಕೆ ಅಧಿಕ ಆಮ್ಲಜನಕ ಪೂರೈಕೆ ತಮಿಳುನಾಡು ಮತ್ತು ಕರ್ನಾಟಕಕ್ಕೆ ಅಧಿಕ ಆಮ್ಲಜನಕ ಪೂರೈಕೆ

ರಾಜ್ಯದಲ್ಲಿ 24 ಗಂಟೆಯಲ್ಲಿ 97 ಜನರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 32,818/
4,952 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖಗೊಂಡವರು 24,18,882.
ರಾಜ್ಯದಲ್ಲಿ ಇದುವರೆಗೂ 3,31,62,714 ಮಾದರಿಗಳ ಪರೀಕ್ಷೆ ಮಾಡಲಾಗಿದೆ. 24 ಗಂಟೆಯಲ್ಲಿ 1,60,810 ಮಾದರಿಗಳ ಪರೀಕ್ಷೆ ನಡೆದಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 36,707.

24 ಗಂಟೆಯಲ್ಲಿ ಚೆನ್ನೈನಲ್ಲಿ 238, ಕೊಯಮತ್ತೂರು 486, ಈರೋಡ್ 395, ಸೇಲಂನಲ್ಲಿ 268, ತಿಪ್ಪೂರು 243 ಹೊಸ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಹೇಳಿದೆ.

English summary
Tamil Nadu government extended lockdown till July 12, 2021. Hotels and tea shops can function with 50 percent of customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X