ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿಯರಿಗೆ ಆದಾಯ ಭರವಸೆ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಮಲ್ ಹಾಸನ್

|
Google Oneindia Kannada News

ಚೆನ್ನೈ, ಮಾರ್ಚ್ 19: ನಟ ಹಾಗೂ ಮಕ್ಕಳನೀತಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಗೃಹಿಣಿಯರ ಕೌಶಲ್ಯವನ್ನು ಗೌರವಿಸುವ ಮೂಲಕ ಆದಾಯದ ಗಳಿಕೆಯ ಭರವಸೆ ನೀಡಿದ್ದಾರೆ.

ಕೌಶಲ್ಯ ಅಭಿವೃದ್ಧಿಯಂಥ ಯೋಜನೆಗಳಿಂದ ಮಹಿಳೆಯರು ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರದವರೆಗೂ ದುಡಿಯಬಹುದು. ಹೀಗಾಗಿಯೇ "ಗೃಹಿಣಿಯರಿಗೆ ಸಂಬಳ" ಎಂದು ನಾವು ಕರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೊಯಮತ್ತೂರು ಕ್ಷೇತ್ರದಿಂದ ಕಮಲ್ ಹಾಸನ್ ನಾಮಪತ್ರಕೊಯಮತ್ತೂರು ಕ್ಷೇತ್ರದಿಂದ ಕಮಲ್ ಹಾಸನ್ ನಾಮಪತ್ರ

ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಆಸ್ತಿಘೋಷಣೆಯನ್ನೂ ಮಾಡಿದ್ದು, ಅವರ ಬಳಿ ಒಟ್ಟಾರೆ 176.9 ಕೋಟಿ ರೂ ಆಸ್ತಿಯಿದೆ ಎಂದು ಘೋಷಿಸಿದ್ದಾರೆ. ಇದರಲ್ಲಿ ಚರಾಸ್ತಿ 45 ಕೋಟಿ ರೂ ಹಾಗೂ ಸ್ಥಿರಾಸ್ತಿ 131.8 ಕೋಟಿ ರೂ ಇದೆ.

Tamil Nadu Election Kamal Haasan Releases MNM Manifesto

ತಮಿಳುನಾಡಿನಲ್ಲಿ ಚುನಾವಣಾ ಕಣದಲ್ಲಿರುವ ಎಐಎಡಿಎಂಕೆ ಹಾಗೂ ಡಿಎಂಕೆ ಕೂಡ ತಮ್ಮ ಪ್ರಣಾಳಿಕೆಯಲ್ಲಿ ಗೃಹಿಣಿಯರಿಗೆ 1000ದಿಂದ 1500ರೂವರೆಗೂ ನೆರವು ನೀಡುವುದಾಗಿ ಘೋಷಿಸಿತ್ತು. ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
Kamal Haasan releases MNM manifesto, assures income for women by honing their skills
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X