ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಬಿಜೆಪಿ-ಕಾಂಗ್ರೆಸ್ ನಡುವೆ ಗೆಲುವು ಯಾರಿಗೆ?

|
Google Oneindia Kannada News

ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಸ್ಪಷ್ಟವಾಗಿದೆ. ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಪಕ್ಷ ಸ್ಪಷ್ಟ ಬಹುಮತದತ್ತ ಮುಖ ಮಾಡಿದೆ. ಮತ ಎಣಿಕೆ ಪೂರ್ಣಗೊಳ್ಳುವ ಔಪಚಾರಿಕತೆ ಉಳಿದುಕೊಂಡಿದೆ ಅಷ್ಟೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷ ಅಧಿಕಾರ ಕಳೆದುಕೊಳ್ಳುವುದು ಪಕ್ಕಾ ಆಗಿದೆ.

Recommended Video

Assembly Election Results 2021:DMK Heading for a Victory in Tamil Nadu!

ರಾಷ್ಟ್ರ ರಾಜಕಾರಣದಲ್ಲಿ ಪರಸ್ಪರ ಮುಖಾ-ಮುಖಿ ಗುದ್ದಾಡುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮಿಳುನಾಡಿನಲ್ಲಿ ಪರಾವಲಂಭಿ ಪಕ್ಷಗಳೇ ಆಗಿವೆ. ಬಿಜೆಪಿಯು ಅಧಿಕಾರಾರೂಡ ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಡಿಎಂಕೆ ಪಕ್ಷದ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ

ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ಚುನಾವಣೆ ನಡೆದಿಲ್ಲವಾದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಸ್ಪರ್ಧೆ ಇರುವುದು ಸುಳ್ಳಲ್ಲ. ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿ ಗಮನ ಸೆಳೆಯುವ ಪ್ರಚಾರವನ್ನೇ ಮಾಡಿತು. ಅಣ್ಣಾಮಲೈ, ಖುಷ್ಬು ಸೇರಿದಂತೆ ಹಲವು ಪರಿಚಿತ ಮುಖಗಳನ್ನು ಪಕ್ಷಕ್ಕೆ ಕರೆತಂದು ಪ್ರಚಾರ ಮಾಡಿತು.

 Tamil Nadu Election 2021: Who Will Win Interier Battle BJP or Congress

ಇದೀಗ ಮತ ಎಣಿಕೆ ಆರಂಭವಾಗಿ ಐದು ಗಂಟೆಗಳ ನಂತರ ಮುಂದೆ ಬಂದಿರುವ ಫಲಿತಾಂಶದ ಪ್ರಕಾರ ಬಿಜೆಪಿಯು ನಾಲ್ಕು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ ಪಕ್ಷವು 13 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 20 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅಣ್ಣಾಮಲೈ, ಖುಷ್ಬು ಸುಂದರ್, ಎಂಆರ್ ಗಾಂಧಿ ಇನ್ನೂ ಹಲವರು ಈ ಬಾರಿ ನಿರೀಕ್ಷೆ ಮೂಡಿಸಿದ್ದರು. ಆದರೆ ಈವರೆಗೆ ಬಂದಿರುವ ಫಲಿತಾಂಶದ ಪ್ರಕಾರ ಬಿಜೆಪಿಯು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 2016 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೂ ಸ್ಥಾನವನ್ನು ಗೆದ್ದಿರಲಿಲ್ಲ.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಇನ್ನು ಕಾಂಗ್ರೆಸ್ ಪಕ್ಷವು 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ವರೆಗೆ ಬಂದಿರುವ ಫಲಿತಾಂಶದಂತೆ 13 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. 2016 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ಬಾರಿ 25 ಸ್ಥಾನಗಳಿಗೆ ಸೀಮಿತವಾಗಿದೆ.

ಈ ಬಾರಿ ತಮಿಳುನಾಡಿನ ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನೇರ ಎದುರಾಳಿಗಳಾಗಿವೆ. ದಕ್ಷಿಣ ಕೊಯಂಬತ್ತೂರು, ಕೋಲಚ್ಚೆಲ್ಲ, ವಿಲ್ವನಕೋಡು, ಉದಕಮಂಡಲಂ (ಊಟಿ), ಕರೈಕುಡಿ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ನೇರ ಸ್ಪರ್ಧೆ ಇದೆ. ಈ ಐದೂ ಕ್ಷೇತ್ರಗಳಲ್ಲಿ ಡಿಎಂಕೆ ಆಗಲಿ ಎಐಎಡಿಎಂಕೆ ಪಕ್ಷಗವಾಗಲಿ ಸ್ಪರ್ಧಿಸಿಲ್ಲ.

ಕೊಯಂಬತ್ತೂರು ದಕ್ಷಿಣದಲ್ಲಿ ಕಾಂಗ್ರೆಸ್‌ ಮುನ್ನಡೆಯಲ್ಲಿದೆ. ಉದಕಮಂಡಲಂನಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕರೈಕುಡಿಯಲ್ಲಿ ಕಾಂಗ್ರೆಸ್‌ ಮುನ್ನಡೆಯಲ್ಲಿದೆ. ಇನ್ನೆರಡು ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು ಮುನ್ನಡೆಯಲ್ಲಿವೆ.

English summary
Tamil Nadu election result 2021: BJP leading 4 seats and Congress leading in 13 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X