ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ಹಾಸನ್‌ಗೆ ಮುನ್ನಡೆ: ಆಗಲಿದೆಯೇ ಒಂಟಿ ಧ್ವನಿ?

|
Google Oneindia Kannada News

ನಟ ಕಮಲ್ ಹಾಸನ್ ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವಿನ ಸವಿ ಸವಿಯಲಿದ್ದಾರೆ. ತಮಿಳುನಾಡಿನ ಕೊಯಂಬತ್ತೂರು ದಕ್ಷಿಣದಿಂದ ಸ್ಪರ್ಧಿಸಿರುವ ಕಮಲ್ ಹಾಸನ್ ಮುನ್ನಡೆಯಲ್ಲಿದ್ದಾರೆ.

ಆರಂಭದಲ್ಲಿ ಮುನ್ನಡೆಯಲ್ಲಿದ್ದ ಕಮಲ್ ಹಾಸನ್ ಕೊನೆಯ ಸುತ್ತಿನವರೆಗೂ ಅದೇ ಮನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇನ್ನು ಕೆಲವೇ ಸಾವಿರ ಮತಗಳ ಎಣಿಕೆ ಬಾಕಿ ಇದ್ದು ಕಮಲ್ ಹಾಸನ್ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಕಮಲ್ ಹಾಸನ್ ಅವರು ತಮ್ಮ ಸ್ವಂತ ಪಕ್ಷ 'ಮಕ್ಕಳ್ ನಿಧಿ ಮಯಂ' ಸ್ಥಾಪಿಸಿ ತಮಿಳು ನಾಡು ರಾಜಕೀಯಕ್ಕೆ ಧುಮುಕಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿ ನಿರಾಸೆ ಅನುಭವಿಸಿದ್ದರು ಈಗ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

 Tamil Nadu Election 2021: Kamal Haasan Is On Leading

ಕಮಲ್ ಹಾಸನ್ ಪಕ್ಷದ ಅಭ್ಯರ್ಥಿಗಳ ಪೈಕಿ ಕಮಲ್ ಹಾಸನ್ ಬಿಟ್ಟರೆ ಇನ್ನಾವುದೇ ಅಭ್ಯರ್ಥಿಗಳು ಮುನ್ನಡೆಯಲ್ಲಿಲ್ಲ. ಕಮಲ್ ಹಾಸನ್ ಮಾತ್ರವೇ ಗೆದ್ದು ತಮಿಳುನಾಡು ವಿಧಾನಸಭೆಯಲ್ಲಿ ಪಕ್ಷದ ಪರವಾಗಿ ಅವರದ್ದು ಒಂಟಿದನಿ ಆಗುವ ಸಾಧ್ಯತೆ ಇದೆ.

ಕಮಲ್ ಹಾಸನ್‌ಗೆ ಕಾಂಗ್ರೆಸ್‌ನ ಮಯೂರ ಜಯಕುಮಾರ್ ಸನಿಹದ ಸ್ಪರ್ಧೆ ಒಡ್ಡುತ್ತಿದ್ದಾರೆ. ಕೇವಲ 3000 ಮತಗಳ ಅಂತರದಲ್ಲಿ ಮಯೂರ ಜಯಕುಮಾರ್ ಹಿಂದಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಬಿಜೆಪಿಯ ವಾನತಿ ಶ್ರೀನಿವಾಸ್ ಇದ್ದಾರೆ.

Recommended Video

ಸದ್ಯದಲ್ಲೇ ರಾಷ್ಟ್ರೀಯ ಪಕ್ಷಗಳ ವಿರುದ್ಧ JDS ಸೆಟೆದು ನಿಲ್ಲುತ್ತೆ ಅಂದ್ರು ಎಚ್ ಡಿ ಕುಮಾರಸ್ವಾಮಿ

ಕಮಲ್ ಹಾಸನ್‌ಗೆ ಇದು ಮೊದಲ ಚುನಾವಣೆ ಅವರ 'ಮಕ್ಕಳ ನಿಧಿ ಮಯಂ' ಪಕ್ಷದಿಂದ 148 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆದರೆ ಕಮಲ್ ಹೊರತಾಗಿ ಇನ್ನಾವ ಅಭ್ಯರ್ಥಿಯೂ ಮುನ್ನಡೆ ಪಡೆದಿಲ್ಲ.

English summary
Tamil Nadu election 2021: Makkal Nidhi Mayam party president Kamal Haasan leading in Coimbatore South constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X