ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!

|
Google Oneindia Kannada News

ಚೆನ್ನೈ, ಅಕ್ಟೋಬರ್ 23: ತಮ್ಮ ಹಸು ಮೊದಲಿನಂತೆ ಇಲ್ಲ, ಅದಕ್ಕೆ ಏನೋ ಆಗಿದೆ ಎಂದು ಮಾಲೀಕರು ಅದನ್ನು ವೈದ್ಯರ ಬಳಿ ಕೊಂಡೊಯ್ದಿದ್ದರು. ಅಸ್ವಸ್ಥಗೊಂಡಿದ್ದ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇದೆ ಎಂಬುದನ್ನು ಪತ್ತೆ ಮಾಡಿದ ವೈದ್ಯರು ಅದನ್ನು ಹೊರತೆಗೆಯಲು ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ತೀರ್ಮಾನಿಸಿದರು.

ಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರ

ಹೀಗೆ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ತೆಗೆದುಕೊಂಡ ಸಮಯ 5 ಗಂಟೆ. ಆ ಅವಧಿಯಲ್ಲಿ ಅವರು ಹೊರತೆಗೆದದ್ದು ಬರೋಬ್ಬರಿ 52 ಕೆಜಿ ತೂಕದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು. ಅಷ್ಟೇ ಅಲ್ಲ, ಆ ಹಸುವಿನ ಹೊಟ್ಟೆಯೊಳಗೆ ಸೂಜಿ, ನಾಣ್ಯ, ಸ್ಕ್ರೂ, ಪಿನ್‌ಗಳು ಕೂಡ ಇದ್ದವು.

Tamil Nadu Doctors Remove 52 KG Plastic From Cows Stomach

ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ಸೇವಾ ವಿಶ್ವವಿದ್ಯಾಲಯದ ವೈದ್ಯರು ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಹಾರಕ್ಕಾಗಿ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದ ಹಸು, ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ತನ್ನ ಹೊಟ್ಟೆಯನ್ನು ಪ್ಲಾಸ್ಟಿಕ್ ಮತ್ತಿತರ ಪದಾರ್ಥಗಳಿಂದ ತುಂಬಿಸಿಕೊಂಡಿತ್ತು ಎಂಬ ಆಘಾತಕಾರಿ ಸಂಗತಿ ತಿಳಿದುಬಂದಿದೆ.

ಚೆನ್ನೈನಲ್ಲಿರುವ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಹಸುವನ್ನು ಅದರ ಮಾಲೀಕರು ಕರೆತಂದಿದ್ದರು. ಆ ಹಸು ತೀವ್ರ ವೇದನೆ ಅನುಭವಿಸುತ್ತಿರುವಂತೆ ಅನಿಸುತ್ತಿತ್ತು. ಇತ್ತೀಚೆಗೆ ಅದು ಕರು ಹಾಕಿದ್ದರೂ, ಅದಕ್ಕೆ ಹಾಲುಣಿಸಲು ಒದ್ದಾಡುತ್ತಿತ್ತು. ಮಾತ್ರವಲ್ಲ, ಮೂತ್ರ ಹಾಗೂ ಸಗಣಿ ವಿಸರ್ಜನೆಗೆ ಸಹ ಪರದಾಡುತ್ತಿತ್ತು. ತನ್ನ ಹೊಟ್ಟೆಗೆ ತಾನೇ ಒದೆಯುತ್ತಿತ್ತು.

ಪ್ಲಾಸ್ಟಿಕ್ ಬಳಕೆ ನಿಷೇಧ, ಮೋದಿ ಕರೆಗೆ ಓಗೊಟ್ಟ ಆಂಧ್ರದ ರೈತರುಪ್ಲಾಸ್ಟಿಕ್ ಬಳಕೆ ನಿಷೇಧ, ಮೋದಿ ಕರೆಗೆ ಓಗೊಟ್ಟ ಆಂಧ್ರದ ರೈತರು

ಎಕ್ಸ್‌ ರೇ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್ ನಡೆಸಿದಾಗ ಹಸುವಿನ ಹೊಟ್ಟೆಯಲ್ಲಿ ಶೇ 75ರಷ್ಟು ಜೀರ್ಣವಾಗದ ಕಸವೇ ತುಂಬಿರುವುದು ಪತ್ತೆಯಾಯಿತು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ ಸಂಜೆ 4.30ರವರೆಗೂ ನಡೆಯಿತು.

English summary
Veterinary doctors in Tamil Nadu had removed 52 KG plastic from cow's stomach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X