ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದಾಳದಲ್ಲಿ ಮದುವೆ: ತಮಿಳುನಾಡಿನಲ್ಲಿ ವಿಶಿಷ್ಟ ವಿವಾಹ ಪ್ರಸಂಗ!

|
Google Oneindia Kannada News

ಚೆನ್ನೈ, ಫೆಬ್ರವರಿ 2: ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹಿರಿಯರು ಹೇಳುತ್ತಾರೆ. ಮದುವೆಯೆಂದರೆ ಅಷ್ಟು ಪವಿತ್ರ ಎನ್ನುವುದನ್ನು ಹೇಳುವ ಬಗೆ ಇದು. ಆದರೆ ಮದುವೆಗಳು ನೀರಿನ ಆಳದಲ್ಲಿಯೂ ನಡೆಯಬಲ್ಲವು. ನಿಜ. ತಮಿಳುನಾಡಿನ ಜೋಡಿಯೊಂದು ಇಂತಹ ಹುಚ್ಚು ಸಾಹಸ ಮಾಡಿದೆ. ಚೆನ್ನೈನ ನೀಳಂಕರೈ ಕರಾವಳಿಯಲ್ಲಿ 60 ಅಡಿ ಆಳದ ನೀರಿಯಲ್ಲಿ ಮದುವೆಯಾಗುವ ಮೂಲಕ ಜೋಡಿಯೊಂದು ಸುದ್ದಿ ಮಾಡಿದೆ.

ತಿರುವಣ್ಣಾಮಲೈನ ಚಿನ್ನಾದುರೈ ಮತ್ತು ಕೊಯಮತ್ತೂರಿನ ಶ್ವೇತಾ, ತಮ್ಮ ಮದುವೆ ಸಾಮಾನ್ಯವಾಗಿ ಎಲ್ಲರೂ ಮಾಡಿಕೊಳ್ಳುವಂತೆ ಕಲ್ಯಾಣ ಮಂಟಪದಲ್ಲಿ ಕುಳಿತು ಮಾಡುವುದು ಬೇಡ ಎನಿಸಿತ್ತು. ತಮ್ಮ ಮದುವೆ ಹೆಚ್ಚು ಸ್ಮರಣೀಯವಾಗಿರಬೇಕು ಎನ್ನುವುದು ಅವರ ಬಯಕೆ. ಇದರಿಂದ ನೀರಿನ ಆಳದಲ್ಲಿ ಮದುವೆಯಾಗುವ ವಿನೂತನ ಪರಿಕಲ್ಪನೆಯನ್ನು ರೂಪಿಸಿದರು.

ಮದುವೆ ಮಂಟಪದಿಂದ ವರ ನಾಪತ್ತೆ, ವಧುವಿನ ಕೈಹಿಡಿದ ಬಿಎಂಟಿಸಿ ಕಂಡಕ್ಟರ್ಮದುವೆ ಮಂಟಪದಿಂದ ವರ ನಾಪತ್ತೆ, ವಧುವಿನ ಕೈಹಿಡಿದ ಬಿಎಂಟಿಸಿ ಕಂಡಕ್ಟರ್

ಅಂದಹಾಗೆ ಚಿನ್ನಾದುರೈ ಮತ್ತು ಶ್ವೇತಾ ಅವರ ಈ ನಿರ್ಧಾರದ ಹಿಂದೆ ಮಹತ್ವದ ಕಳಕಳಿಯೂ ಇದೆ. ಸಮುದ್ರಕ್ಕೆ ವ್ಯರ್ಥ ತ್ಯಾಜ್ಯಗಳನ್ನು ಎಸೆಯದಂತೆ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿತ್ತು. ಮುಂದೆ ಓದಿ.

ನೈಸರ್ಗಿಕ ಅಲಂಕಾರ

ನೈಸರ್ಗಿಕ ಅಲಂಕಾರ

ತಮ್ಮ ಮದುವೆಯ ಅಮೂಲ್ಯ ಗಳಿಗೆಗಾಗಿಯೇ ಶ್ವೇತಾ ಅವರು ಸ್ಕೂಬಾ ಡೈವಿಂಗ್ ತರಬೇತಿ ಪಡೆದುಕೊಂಡರು. ನೈಸರ್ಗಿಕ ಹೂವು, ಬಾಳೆ ಗಿಡಗಳು ಮತ್ತು ಹಾರಗಳನ್ನು ಬಳಸಿ ನೀರಿನ ಅಡಿ ಮದುವೆಯ ಸೆಟ್ ನಿರ್ಮಿಸಲಾಯಿತು. ತೆಂಗಿನ ಗರಿಗಳಿಂದ ದ್ವಾರದ ಆಕೃತಿ ನಿರ್ಮಿಸಲಾಗಿತ್ತು.

ಸಾಂಪ್ರದಾಯಿಕ ಉಡುಗೆ

ಸಾಂಪ್ರದಾಯಿಕ ಉಡುಗೆ

ನೀರಿನ ಆಳಕ್ಕೆ ಹೋಗಲು ಈ ಜೋಡಿ ಅದಕ್ಕೆ ಸೂಕ್ತವಾದ ಉಡುಪು ಧರಿಸಲಿಲ್ಲ. ಬದಲಾಗಿ ಮದುಮಕ್ಕಳ ವೇಷದಲ್ಲಿಯೇ ಸಿದ್ಧರಾದರು. ಚಿನ್ನಾದುರೈ ಅವರು ಬಿಳಿ ಅಂಗಿ, ಪಂಚೆ ತೊಟ್ಟರೆ, ವಧು ಶ್ವೇತಾ ಸ್ಕೂಬಾ ಡೈವಿಂಗ್‌ಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ಸೀರೆಯ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡರು.

ಅಂತರಪಂಗಡ ಮದುವೆ; 2 ವರ್ಷದ ನಂತರ ದಂಪತಿಗೆ 2.5 ಲಕ್ಷ ರೂ ದಂಡ?ಅಂತರಪಂಗಡ ಮದುವೆ; 2 ವರ್ಷದ ನಂತರ ದಂಪತಿಗೆ 2.5 ಲಕ್ಷ ರೂ ದಂಡ?

ನೀರಿನಡಿಯಲ್ಲಿ ಮದುವೆ ಪದ್ಧತಿ

ನೀರಿನಡಿಯಲ್ಲಿ ಮದುವೆ ಪದ್ಧತಿ

ಪೂರ್ವ ಕರಾವಳಿ ರಸ್ತೆಯ ಸಮೀಪದಿಂದ ಸಮುದ್ರದಾಳದಲ್ಲಿ ಸೋಮವಾರ (ಫೆ 1ರಂದು) ಇಬ್ಬರ ಮದುವೆ ನಡೆಯಿತು. ನೀರಿನಾಳದಲ್ಲಿ ಹಾರ ಬದಲಿಸಿಕೊಂಡರು. ಶ್ವೇತಾರಿಗೆ ಚಿನ್ನಾದುರೈ ತಾಳಿ ಕಟ್ಟುವ ಮೂಲಕ ಮದುವೆಯ ಮೂಲ ಸಂಪ್ರದಾಯಗಳನ್ನು ಪೂರೈಸಿಸಿದರು. ಇಬ್ಬರೂ 45 ನಿಮಿಷಗಳವರೆಗೆ ಆಮ್ಲಜನಕ ಸರಬರಾಜು ಮಾಡುವ ಉಪಕರಣಗಳನ್ನು ಅಳವಡಿಸಿಕೊಂಡಿದ್ದರು. ಹೀಗೆ ಸಮುದ್ರದಾಳದಲ್ಲಿ ಮದುವೆ ಎಂಬ ಅಪರೂಪದ ಸಮಾರಂಭ ನೆರವೇರಿತು.

ಪರಿಸರ ಕಾಳಜಿ ಉದ್ದೇಶ

ಪರಿಸರ ಕಾಳಜಿ ಉದ್ದೇಶ

ಸಮುದ್ರದ ಜಲಚರಗಳ ನಡುವೆ ಮದುವೆಯಾಗುವುದು ವಿಭಿನ್ನ ಅನುಭವ. ಇದು ಎಂದೆಂದಿಗೂ ಸ್ಮರಣೀಯವಾಗಿರುತ್ತದೆ. ಇದರ ಜತೆಗೆ ಸಮುದ್ರಕ್ಕೆ ವಿಪರೀತ ತ್ಯಾಜ್ಯಗಳನ್ನುಎಸೆಯುತ್ತಿರುವುದು ನಮ್ಮ ಪರಿಸರ ವ್ಯವಸ್ಥೆ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತಿದೆ. ಇದನ್ನು ಕೂಡ ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು ಎಂದು ಚಿನ್ನಾದುರೈ ತಿಳಿಸಿದ್ದಾರೆ.

English summary
A couple from Tamil Nadu got married in 60 feet underwater off the coast of Neelankarai in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X