• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧರಿರುವ ಪೊಲೀಸ್ ಇವರೇ!

|

ಚೆನ್ನೈ, ಡಿಸೆಂಬರ್ 10: ತಮಿಳುನಾಡಿನ ಮಾನವತಾವಾದಿ ಪೊಲೀಸ್ ಸಿಬ್ಬಂದಿ ತನ್ನ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಹಚ್ಚಿಕೊಳ್ಳಲು ಹೊರಟಿದ್ದಾರೆ.

ತಮಿಳುನಾಡು ರಾಜ್ಯ ಸಂಕಷ್ಟದಲ್ಲಿದ್ದಾಗಲೆಲ್ಲಾ ನೆರವಿಗೆ ಧಾವಿಸುತ್ತಿದ್ದ ರಾಮಚಂದ್ರಪುರಂನ ಎಸ್‌ ಸುಭಾಷ್ ಶ್ರೀನಿವಾಸನ್ ಈಗ ನಿರ್ಭಯಾ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಗಿರುವವರನ್ನು ನೇಣಿಗೇರಿಸಲು ತಯಾರಿರುವುದಾಗಿ ಹೇಳಿಕೊಂಡಿದ್ದಾರೆ.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧ: ರಾಷ್ಟ್ರಪತಿಗೆ ಹೀಗೊಂದು ಪತ್ರ!

ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸೂಕ್ತ ಸಿಬ್ಬಂದಿಯೇ ಇಲ್ಲ ಎಂಬ ಸುದ್ದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು.

ಇದನ್ನು ಓದಿದ ಸುಭಾಷ್ ನೇರವಾಗಿ ದೆಹಲಿ ಪೊಲೀಸರು ಹಾಗೂ ಸ್ಥಳೀಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಿಹಾರ್ ಜೈಲಿನಲ್ಲಿ ನಿಯಮ ಪ್ರಕಾರವಾಗಿ ಅಪರಾಧಿಗಳನ್ನು ಗಲ್ಲಿಗೇರಿಸಲು ತಯಾರಿರುವುದಾಗಿ ಘೋಷಿಸಿದ್ದಾರೆ.

ನಿರ್ಭಯಾ ಅತ್ಯಾಚಾರಗಳಿಗೆ ಶೀಘ್ರವೇ ಶಿಕ್ಷೆ ಜಾರಿ

ನಿರ್ಭಯಾ ಅತ್ಯಾಚಾರಗಳಿಗೆ ಶೀಘ್ರವೇ ಶಿಕ್ಷೆ ಜಾರಿ

ಅಪರಾಧಿಗಳನ್ನು ಗಲ್ಲಿಗೇರಿಸುವ 10 ಹಗ್ಗಗಳನ್ನು ತಯಾರಿಸಿಡುವಂತೆ ಬಿಹಾರದ ಬಕ್ಸರ್ ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸುವ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳು ಇವೆ. ಅಪರಾಧಿಗಳನ್ನು ಗಲ್ಲಿಗೇರಿಸಲು ಇದಕ್ಕಾಗಿ ಹೆಚ್ಚುವರಿಯಾಗಿ ನಯಾಪೈಸೆ ಸಂಬಳವನ್ನೂ ನೀಡಬೇಕಿಲ್ಲ, ಆದರೆ ಕಟುಕರನ್ನು ಶಿಕ್ಷೆಗೆ ಒಳಡಪಡಿಸಲು ಅನುಮತಿ ಕೊಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಘನಘೋರ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವುದು ನನಗೆ ಹೆಮ್ಮೆಯ ವಿಚಾರ.ಹೀಗಾಗಿ ನನಗೆ ಯಾವುದೇ ಸಂಬಳ ಬೇಕಿಲ್ಲ ಎಂದು ಪತ್ರದಲ್ಲಿ ಶ್ರೀನಿವಾಸನ್ ಸ್ಪಷ್ಟಪಡಿಸಿದ್ದಾರೆ.

ಹಗ್ಗ ತಯಾರಿಕೆ ಹೇಗೆ?

ಹಗ್ಗ ತಯಾರಿಕೆ ಹೇಗೆ?

ಕಬ್ಬಿಣ ಮತ್ತು ಹಿತ್ತಾಳೆಯ ತಂತಿಗಳನ್ನು ಬಳಸಿ ಹಗ್ಗ ತಯಾರಿಸಲಾಗುತ್ತದೆ. ಆದ್ದರಿಂದ ಈ ವಸ್ತುಗಳ ಬೆಲೆಗೆ ಅನುಗುಣವಾಗಿ ಹಗ್ಗದ ಬೆಲೆಯೂ ಏರುಪೇರಾಗುತ್ತದೆ. ನೇಣು ಹಗ್ಗ ತಯಾರಿಕೆಯಲ್ಲಿ ಯಂತ್ರಗಳ ಬಳಕೆ ಅತಿ ಕಡಿಮೆ. ಕೈಯಿಂದಲೇ ಇದನ್ನು ತಯಾರಿಸಲಾಗುತ್ತದೆ.

ಹೊಸ ನಾಟಕ ಶುರು ಹಚ್ಚಿದ ನಿರ್ಭಯಾ ಅತ್ಯಾಚಾರಿ!

ತಯಾರಿಸಿದ ಹಗ್ಗವನ್ನು ದೀರ್ಘಾವಧಿವರೆಗೆ ಕಾಯ್ದಿಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಕಾಲವಿಟ್ಟರೆ ಅದು ಬಳಕೆಗೆ ಅಯೋಗ್ಯವೆನಿಸುತ್ತದೆ. ಶ್ರೀನಿವಾಸನ್ ಪತ್ರಕ್ಕೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಿಹಾರ್ ಜೈಲಿನ ಅಧಿಕಾರಿಗಳು ಕೂಡ ಉತ್ತರವನ್ನು ನೀಡಿಲ್ಲ. ಹೀಗಾಗಿ ಸುಭಾಷ್ ಶ್ರೀನಿವಾಸನ್ ಪ್ರತಿಕ್ರಿಯೆಗೆ ಕಾದು ಕುಳಿತಿದ್ದಾರೆ.

ಒಂದು ವರ್ಷದ ಹಿಂದೆ ಗಲ್ಲು ಶಿಕ್ಷೆ ವಿಧಿಸಿತ್ತು

ಒಂದು ವರ್ಷದ ಹಿಂದೆ ಗಲ್ಲು ಶಿಕ್ಷೆ ವಿಧಿಸಿತ್ತು

ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದವರಿಗೆ ಸುಪ್ರೀಂಕೋರ್ಟ್ ಒಂದು ವರ್ಷದ ಹಿಂದೆಯೇ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳನ್ನು ನೇಣಿಗೇರಿಸಲು ಬಳಸುವ ಹಗ್ಗಗಳ ತಯಾರಿಕೆಯಲ್ಲಿ ಬಕ್ಸರ್ ಜಿಲ್ಲೆಯಲ್ಲಿರುವ ಸಿಬ್ಬಂದಿ ಪರಿಣತನಾಗಿದ್ದಾನೆ. ವಾರಾಂತ್ಯದೊಳಗೆ 10 ಹಗ್ಗಗಳನ್ನು ಸಿದ್ಧವಾಗಿಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಕಂಡ ಕಂಡಲ್ಲಿ ಜಾಹಿರಾತು ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದವರ ವಿರುದ್ಧ ಸುಭಾಷ್ ಅವರು ಪ್ರತಿಭಟನೆಗೆ ಕುಳಿತು ಸುದ್ದಿ ಮಾಡಿದ್ದರು. ಅಲ್ಲದೆ ನೆರೆ ಹಾವಳಿ ಸಂದರ್ಭದಲ್ಲಿಯೂ ಶುದ್ಧ ಕುಡಿಯುವ ನೀರಿನ ಹಂವಿಕೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿನ ಅಪರಾಧಿಗಳಿಗೆ ಕಾನೂನಿನ ಬಿಸಿ ಮುಟ್ಟಿಸುವ ಸಲುವಾಗಿ ಗಲ್ಲಿಗೇರಿಸುವುದು ಅತಿ ಮುಖ್ಯವಾಗಿದೆ ಹೀಗಾಗಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್

ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್

ಹೈದರಾಬಾದ್ ನಲ್ಲಿ ಪಶುವೈದ್ಯೆಯ ಅತ್ಯಾಚಾರ ಹತ್ಯೆಯ ಆರೋಪಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ. ಬಳಿಕ ನಿರ್ಭಯಾ ಕುಟುಂಬದವರೂ ಆಕೆಯ ಅತ್ಯಾಚಾರಿಗಳನ್ನು ನೇಣಿಗೇರಿಸುವಂತೆ ಒತ್ತಾಯಿಸುತ್ತಿದ್ದಾರೆ.

ನಿರ್ಭಯಾ ಅತ್ಯಾಚಾರಿಗೆ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಅಸಾಧ್ಯ!

English summary
S Subash Srinivasan, who is a head constable in the in-service training centre in Ramanathapuram. After reading about a lack of executioner in Tihar jail to hang the Nirbaya case convicts, S Subash Srinivasan volunteered to take up the role
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X