• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀಲಗಿರಿ ಭೇಟಿ ವೇಳೆ ಆದಿವಾಸಿಗಳೊಂದಿಗೆ ಡ್ಯಾನ್ಸ್ ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್

|
Google Oneindia Kannada News

ನೀಲಗಿರಿ ಭೇಟಿ ವೇಳೆ ತಮಿಳುನಾಡು ಸಿಎಂ ಸ್ಟಾಲಿನ್ ಆದಿವಾಸಿಗಳೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂಕೆ ಸ್ಟಾಲಿನ್ ನಂತರ ಕೂನೂರಿನ ಕಟ್ಟೇರಿ ಪಾರ್ಕ್ ಬಳಿಯ ಹಳ್ಳಿಯಲ್ಲಿ ತೋಡಾ ಬುಡಕಟ್ಟಿನ ಸದಸ್ಯರೊಂದಿಗೆ ಪೂರ್ವಸಿದ್ಧತೆಯಿಲ್ಲದೆ ನೃತ್ಯ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ನೀಲಗಿರಿ ಜಿಲ್ಲೆಯಲ್ಲಿ ಬುಡಕಟ್ಟು ನೃತ್ಯಗಾರರ ಗುಂಪಿನೊಂದಿಗೆ ನೃತ್ಯ ಮಾಡಿದ್ದಾರೆ. ಅತ್ಯಂತ ಸಂತೋಷದಿಂದ ಶಾಲು ಹೊದಿಸಿ ಡಿಎಂಕೆ ನಾಯಕನನ್ನು ಬರಮಾಡಿಕೊಂಡ ಟೋಡಾ ಬುಡಕಟ್ಟಿನ ಸದಸ್ಯರು ಅವರಿಗೆ ನೃತ್ಯ ಮಾಡಲು ಪ್ರೋತ್ಸಾಹಿಸಿದ್ದಾರೆ. ಸ್ಟಾಲಿನ್ ಆಗಮನದ ಬಳಿಕ ಅವರನ್ನು ಸುತ್ತುವರೆ ಆದಿವಾಸಿಗಳು ತಮ್ಮದೇ ಆದ ಶೈಲಿಯಲ್ಲಿ ಚಪ್ಪಾಳೆ ತಟ್ಟುತ್ತಾ ಅವರ ಸುತ್ತಲು ನೃತ್ಯ ಮಾಡಲು ಪ್ರಾರಂಭಿಸಿದರು. ಇದರಿಂದ ಪ್ರೇರೇಪಿತರಾದ ಸ್ಟಾಲಿನ ತಾವು ಕೂಡ ಅವರೊಂದಿಗೆ ತಾವು ಒಬ್ಬರಾದರು.

ಬುಡಕಟ್ಟು ಗುಂಪುಗಳ ಸದಸ್ಯರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿದ್ದರೆ, ಸ್ಟಾಲಿನ್ ಅವರ ಸಾಮಾನ್ಯ ಉಡುಗೆಯಲ್ಲಿ ಬುಡಕಟ್ಟು ಶಾಲು ಧರಿಸಿ ನೃತ್ಯ ಮಾಡಿರುವುದು ಕಂಡುಬಂದಿದೆ.

English summary
Tamil Nadu CM Stalin dance with Adivasis when he was visit to Nilgiris. This video is going viral on the social networking site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X