ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು; ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ 2 ಜಿಬಿ ಇಂಟರ್‌ನೆಟ್‌ ಯೋಜನೆಗೆ ಚಾಲನೆ

|
Google Oneindia Kannada News

ಚೆನ್ನೈ, ಫೆಬ್ರುವರಿ 03: ಆನ್ ಲೈನ್ ತರಗತಿಗಳಿಗೆ ನೆರವಾಗುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ದಿನನಿತ್ಯ 2 ಜಿಬಿ ಇಂಟರ್ ನೆಟ್ ಉಚಿತ ನೀಡುವ ಯೋಜನೆಗೆ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಚಾಲನೆ ನೀಡಿದ್ದಾರೆ.

ಸುಮಾರು 9.69 ಲಕ್ಷ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆಂದು ದಿನನಿತ್ಯ ಎರಡು ಜಿಬಿ ಉಚಿತ ಇಂಟರ್ ನೆಟ್ ನೀಡುವ ಯೋಜನೆಯ ಘೋಷಣೆಯನ್ನು ಮೂರು ವಾರದ ಹಿಂದೆ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮಾಡಿದ್ದರು. ಸೋಮವಾರ ಸರಳ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಆರಂಭಿಕವಾಗಿ ಒಂಬತ್ತು ವಿದ್ಯಾರ್ಥಿಗಳು ಈ ಯೋಜನೆಯ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021; ತಮಿಳುನಾಡಿಗೆ ಭಾರಿ ಕೊಡುಗೆ!ಕೇಂದ್ರ ಬಜೆಟ್ 2021; ತಮಿಳುನಾಡಿಗೆ ಭಾರಿ ಕೊಡುಗೆ!

ಆನ್ ಲೈನ್ ಕ್ಲಾಸ್ ಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಏಪ್ರಿಲ್ ವರೆಗೂ ಉಚಿತ ಇಂಟರ್ ನೆಟ್ ನೀಡುವುದಾಗಿ ತಿಳಿಸಲಾಗಿದೆ.

Tamil Nadu CM Launches 2 GB Free Data Scheme For College Students

ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ಸ್ವಾಮ್ಯದ ಕಲಾ ಹಾಗೂ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ಕಾಲೇಜುಗಳಲ್ಲಿ ಸ್ಕಾಲರ್ ಷಿಪ್ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಉಚಿತ ಇಂಟರ್ ನೆಟ್ ಯೋಜನೆಯನ್ನು ಪಡೆಯಬಹುದಾಗಿದೆ. ತಮಿಳುನಾಡಿನ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್ ಈ ಕಾರ್ಡ್ ಗಳನ್ನು ವಿತರಿಸುತ್ತಿದೆ.

English summary
Tamil nadu CM Edappadi K Palaniswami launched scheme to provide 2GB free data per day to 9.69 lakh college students
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X