ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜ ಅವಾಂತರ: ತಮಿಳುನಾಡಿಗೆ ಸಾವಿರ ಕೋಟಿ ಪರಿಹಾರ ಘೋಷಣೆ

|
Google Oneindia Kannada News

ಚೆನ್ನೈ, ನವೆಂಬರ್ 20: ಗಜ ಚಂಡಮಾರುತ ತಮಿಳುನಾಡಿನಲ್ಲಿ ಭಾರಿ ಅವಾಂತರವನ್ನು ಸೃಷ್ಟಿಸಿದ್ದು, ಪ್ರದೇಶಗಳ ಪುನರ್ ನಿರ್ಮಾಣ ಮಾಡಲು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಒಂದು ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ.

ಇದುವರೆಗೂ ಚಂಡಮಾರುತದಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಸಾವಿರ ಮತ್ತು ಬಟ್ಟೆ ಮತ್ತು ಪಾತ್ರೆಗಳ ಖರೀದಿಗಾಗಿ 3800 ರೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಾನಿಗೊಳಗಾದ ದೋಣಿ ಮಾಲಿಕರಿಗೆ 5 ಸಾವಿರ ರೂ ಗಳನ್ನು ಮಂಜೂರು ಮಾಡಲಾಗಿದೆ.

ಗಜ ಚಂಡಮಾರುತ: ತಮಿಳುನಾಡು ವಿವಿಗಳ ಪರೀಕ್ಷೆಗಳು ಮುಂದೂಡಿಕೆಗಜ ಚಂಡಮಾರುತ: ತಮಿಳುನಾಡು ವಿವಿಗಳ ಪರೀಕ್ಷೆಗಳು ಮುಂದೂಡಿಕೆ

ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ 2.51 ಲಕ್ಷ ಜನರಿಗೆ ತಮಿಳುನಾಡು ಮೂದ ಆವಿನ್ ಹಾಲು ಪೂರೈಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೇಂದ್ರದ ವಿಕೋಪ ಪರಿಹಾರ ನಿಧಿಯಿಂದ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಮತ್ತ ಪುನರ್ ಸ್ಥಾಪನೆ ಕಾರ್ಯಕ್ಕಾಗಿ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಜಾನುವಾರು, ಕೋಳಿ ಮತ್ತ ಹಾನಿಗೊಳಗಾದ ಬೆಳೆಗಾಗಿಯೇ ಪರಿಹಾರವನ್ನು ಘೋಷಿಸಲಾಗಿದ್ದು, ಇದಕ್ಕೂ ಮುನ್ನ ಸಿಎಂ ಪಳನಿಸ್ವಾಮಿ ಮೃತರ ಕುಟುಂಬಕ್ಕೆ 10 ಲಕ್ಷಪರಿಹಾರ ಘೋಷಿಸಿದ್ದಾರೆ.

Tamil Nadu CM Edappadi K Palaniswami visits cyclone-hit areas

ಅರಬ್ಬಿ ಸಮುದ್ರಕ್ಕೆ ಗಜ ಲಗ್ಗೆ: ಕರ್ನಾಟಕದಲ್ಲಿ 2 ದಿನ ಭಾರಿ ಮಳೆ ಸಾಧ್ಯತೆಅರಬ್ಬಿ ಸಮುದ್ರಕ್ಕೆ ಗಜ ಲಗ್ಗೆ: ಕರ್ನಾಟಕದಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ತಮಿಳುನಾಡಿನ ಕರಾವಳಿ ಪ್ರದೇಶಗಳಾದ ನಾಗಪಟ್ಟಣಂ, ವೇದಾರಣ್ಯಂ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದುವರೆಗೂ 46 ಮಂದಿ ಮೃತಪಟ್ಟಿದ್ದಾರೆ. 82,102 ಕೃಷಿ ಭೂಮಿ ನಾಶವಾಗಿದೆ.

English summary
Tamil Nadu Chief Minister K Palaniswami Tuesday visited districts hit by Cyclone 'Gaja' in the state and distributed relief material among the affected people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X