ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ಎ.ರಾಜಾ ಆರೋಪಕ್ಕೆ ಪ್ರಚಾರ ಸಭೆಯಲ್ಲಿ ಕಣ್ಣಿರು ಹಾಕಿದ ತಮಿಳುನಾಡು ಸಿಎಂ

|
Google Oneindia Kannada News

ಚೆನ್ನೈ, ಮಾರ್ಚ್ 29: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಭಾನುವಾರ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ಡಿಎಂಕೆ ಸಂಸತ್ ಸದಸ್ಯ ಎ.ರಾಜಾ ಅವರ ನ್ಯಾಯಸಮ್ಮತವಲ್ಲದ ಮಗು ಎಂಬ ಹೇಳಿಕೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರಾ ಕಳಗಂ (ಎಐಎಡಿಎಂಕೆ)ಯ ಅಭ್ಯರ್ಥಿ, ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ (ಇಪಿಎಸ್) ಭಾನುವಾರ ಉತ್ತರ ಚೆನ್ನೈನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ಭಾವುಕತೆ ಮತ್ತು ಅಳಲು ತೋಡಿಕೊಂಡರು.

ವಿದೇಶಿ ಹಸುಗಳ ಹಾಲು ಕುಡಿದ ಮಹಿಳೆಯರು...: ಡಿಎಂಕೆ ಮುಖಂಡನ 'ಸೆಕ್ಸಿಸ್ಟ್' ಹೇಳಿಕೆ ವಿವಾದವಿದೇಶಿ ಹಸುಗಳ ಹಾಲು ಕುಡಿದ ಮಹಿಳೆಯರು...: ಡಿಎಂಕೆ ಮುಖಂಡನ 'ಸೆಕ್ಸಿಸ್ಟ್' ಹೇಳಿಕೆ ವಿವಾದ

ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಮತ್ತು ಸಿಎಂ ಇಪಿಎಸ್ ನಾಯಕತ್ವದ ನಡುವೆ ಹೋಲಿಕೆ ಮಾಡಲು ಯತ್ನಿಸುವಾಗ, ಎ.ರಾಜಾ ಅವರು ಸ್ಟಾಲಿನ್ ಅವರ ರಾಜಕೀಯ ಜೀವನವು "ಕಾನೂನುಬದ್ಧವಾಗಿ ಜನಿಸಿದ ಸಂಪೂರ್ಣ ಪ್ರಬುದ್ಧ ಮಗುವಿನಂತಿದೆ ಮತ್ತು "ಇಪಿಎಸ್ ಅವರು ಕಾನೂನು ಬಾಹಿರದಿಂದ ಹುಟ್ಟಿದ ಅಕಾಲಿಕ ಮಗುವಿನಂತೆ' ಎಂದು ಹೋಲಿಕೆ ಮಾಡಿದ್ದರು.

Tamil Nadu CM E.Palaniswami Who Shed Tears For MP A.Raja Allegation

ಸಿಎಂ ಇಪಿಎಸ್ ಇದಕ್ಕೆ ಪ್ರತಿಕ್ರಿಯಿಸಿ, "ಇದು ಎಂತಹ ಅಸಹ್ಯಕರ ಮಾತು. ಮುಖ್ಯಮಂತ್ರಿ ಸಾಮಾನ್ಯ ವ್ಯಕ್ತಿಯಾಗಿದ್ದರೆ ಅವರು ಹೀಗೆ ಮಾತನಾಡುತ್ತಾರೆ? ಇದು ಮುಖ್ಯಮಂತ್ರಿಯ ಸ್ಥಿತಿಯಾಗಿದ್ದರೆ, ಸಾಮಾನ್ಯ ಜನರನ್ನು ಯಾರು ರಕ್ಷಿಸುತ್ತಾರೆ? " ಎಂದು ಹೇಳಿದರು.

ಅಮ್ಮಾ ಸರ್ಕಾರಕ್ಕೆ ನನ್ನ ಜೀವ ಮುಡಿಪಾಗಿಡಲೂ ಸಿದ್ಧ; ತಮಿಳುನಾಡು ಸಿಎಂಅಮ್ಮಾ ಸರ್ಕಾರಕ್ಕೆ ನನ್ನ ಜೀವ ಮುಡಿಪಾಗಿಡಲೂ ಸಿದ್ಧ; ತಮಿಳುನಾಡು ಸಿಎಂ

ಎ.ರಾಜಾ ಅವರು ಹೀಗೆ ಹೇಳಿದರು, "ನನ್ನ ತಾಯಿ ಹುಟ್ಟಿದ್ದು ಹಳ್ಳಿಯಲ್ಲಿ, ಅವಳು ಕೃಷಿಕ, ಅವಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಳು. ಅವಳು ಈಗ ಇಲ್ಲ. ಅವರು ಮಾಡಿದ ಆ ಕಾಮೆಂಟ್ ಎಷ್ಟು ಅಸಹ್ಯಕರವಾಗಿತ್ತು. ಅಂತಹ ಜನರು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಏನಾಗುತ್ತದೆ ಎಂದು ಗ್ರಹಿಸಿ. ಮಹಿಳೆಯರು ಮತ್ತು ಮಾತೃತ್ವದ ಬಗ್ಗೆ ಮಾತನಾಡುವ ಜನರಿಗೆ ಪಾಠ ಕಲಿಸಬೇಕು" ಎಂದು ಕರೆ ನೀಡಿದರು.

Tamil Nadu CM E.Palaniswami Who Shed Tears For MP A.Raja Allegation

ಬಡವರು ಅಥವಾ ಶ್ರೀಮಂತ ತಾಯಂದಿರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದಾರೆ ಮತ್ತು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನು ದೇವರು ಶಿಕ್ಷಿಸುತ್ತಾರೆ ಎಂದು ಸಿಎಂ ಇ.ಪಳನಿಸ್ವಾಮಿ ಹೇಳಿದರು.

English summary
Tamil Nadu Chief Minister E. Palaniswami on Sunday tears at the Tamil Nadu assembly election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X