ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಮುಖ್ಯಮಂತ್ರಿಯಿಂದ ನೇತ್ರದಾನ ಪ್ರಮಾಣ ಸ್ವೀಕಾರ

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 07: ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮರಣಾನಂತರ ನೇತ್ರದಾನ ಮಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನೇತ್ರದಾನ ಮಾಡುವವರಿಗಾಗಿ ವೆಬ್‌ಸೈಟ್‌ ಒಂದನ್ನು ಕೂಡ ತೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೋರ್ಟಲ್​ ಅನ್ನು ಲೋಕಾರ್ಪಣೆಗೊಳಿಸಿದರು.

ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ

ನೇತ್ರದಾನದ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಅದನ್ನು ಈ ಪೋರ್ಟಲ್ ನೀಡುತ್ತದೆ. ಜನರಲ್ಲಿ ಜಾಗೃತಿ ಮೂಡಿಸಿ ನೇತ್ರದಾನಕ್ಕೆ ಪ್ರಮಾಣ ಸ್ವೀಕರಿಸುವಂತೆ ಮಾಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಿರುತ್ತದೆ. ನೇತ್ರದಾನಿಗಳ ಒಂದು ರಿಜಿಸ್ಟರ್ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Tamil Nadu Chief Minister Pledges To Donate His Eyes

ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ನೇತ್ರದಾನ ಮಾಡುವುದಾಗಿ ಪ್ರಮಾಣ ಸ್ವೀಕರಿಸಿದ್ದು, ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರೆಟರಿ ಜೆ.ರಾಧಾಕೃಷ್ಣನ್ ತಿಳಿಸಿದ್ದಾರೆ.

ಭಾರತದಲ್ಲಿ 68 ಮಂದಿ ದೃಷ್ಟಿ ವಿಕಲಚೇತನರಿದ್ದಾರೆ. ಅದರಲ್ಲಿ ಬಹುತೇಕ ಬಂದಿ ಮಕ್ಕಳು ಹಾಗೂ ಸಣ್ಣ ವಯಸ್ಸಿನವರಾಗಿದ್ದಾರೆ. ಅಲ್ಲಿ ನೋಂದಣಿ ಮಾಡಿಕೊಂಡರೆ ವೆಬ್‌ಸೈಟ್‌ನಲ್ಲಿಯೇ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

English summary
Chief Minister Edappadi K. Palaniswami has pledged to donate his eyes as part of the National Eye Donation Fortnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X